ಈ ವಿಶೇಷ ಚಿಕಿತ್ಸೆಯಿಂದ ಕೋವಿಡ್ -19 ರೋಗಿಯ ಸ್ಥಿತಿಯಲ್ಲಿ ಸುಧಾರಣೆ

49 ವರ್ಷದ ಕೊರೋನಾ ಪೀಡಿತ ರೋಗಿಯನ್ನು ಏಪ್ರಿಲ್ 4 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಏಪ್ರಿಲ್ 8 ರಂದು ಅವರ ಸ್ಥಿತಿ ಹದಗೆಟ್ಟಿತು.

Last Updated : Apr 21, 2020, 06:20 AM IST
ಈ ವಿಶೇಷ ಚಿಕಿತ್ಸೆಯಿಂದ ಕೋವಿಡ್ -19 ರೋಗಿಯ ಸ್ಥಿತಿಯಲ್ಲಿ ಸುಧಾರಣೆ title=

ನವದೆಹಲಿ: ಕೊರೊನಾವೈರಸ್ನ  COVID-19 ರುದ್ರತಾಂಡವದ ಮಧ್ಯೆ ಪರಿಹಾರದ ಸುದ್ದಿಯೊಂದು ಬಂದಿದೆ. ವಾಸ್ತವವಾಗಿ  ದೆಹಲಿಯ ಮ್ಯಾಕ್ಸ್ ಹಾಸ್ಪಿಟಲ್ ಸಾಕೆಟ್‌ನಲ್ಲಿ ಏಪ್ರಿಲ್ 4 ರಂದು ದಾಖಲಾದ ರೋಗಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಆ ರೋಗಿಯ ಸ್ಥಿತಿ ಸುಧಾರಿಸಿದ್ದು ಪ್ಲಾಸ್ಮಾ ಚಿಕಿತ್ಸೆಯಿಂದಾಗಿ, ಈ ರೋಗಿಯು ಈಗ ವೆಂಟಿಲೇಟರ್‌ನಿಂದ ವಾರ್ಡ್‌ಗೆ ಸ್ಥಳಾಂತರಗೊಂಡಿದ್ದಾನೆ ಎನ್ನಲಾಗಿದೆ.
 
49 ವರ್ಷದ ಕೊರೊನಾವೈರಸ್ (Coronavirus)  ಪೀಡಿತ ರೋಗಿಯನ್ನು ಏಪ್ರಿಲ್ 4 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಏಪ್ರಿಲ್ 8 ರಂದು ಅವರ ಸ್ಥಿತಿ ಹದಗೆಟ್ಟಿತು. ನಂತರ ಅವರನ್ನು ವೆಂಟಿಲೇಟರ್‌ನಲ್ಲಿ ಹಾಕಬೇಕಾಯಿತು. ರೋಗಿಯ ಮೇಲೆ ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಬೇಕೆಂದು ಕುಟುಂಬವು ವೈದ್ಯರನ್ನು ವಿನಂತಿಸಿತು.

ಪ್ಲಾಸ್ಮಾ ಚಿಕಿತ್ಸೆಗೆ ಈ ಹಿಂದೆ ಕರೋನಾ ವೈರಸ್ ಸೋಂಕಿಗೆ ಒಳಗಾದ ದಾನಿಯ ಅಗತ್ಯವಿತ್ತು. ಕುಟುಂಬವು ಅಂತಹ ದಾನಿಗಳ ವ್ಯವಸ್ಥೆಯನ್ನು ಮಾಡಿತು. ಏಪ್ರಿಲ್ 14ರಂದು ರೋಗಿಗೆ ತಾಜಾ ಪ್ಲಾಸ್ಮಾ ನೀಡಲಾಯಿತು. ಏಪ್ರಿಲ್ 18ರಂದು ರೋಗಿಯ ಆಮ್ಲಜನಕದ ಬೆಂಬಲವನ್ನು ತೆಗೆದುಹಾಕಲಾಯಿತು.  ಸೋಮವಾರ ಅವರನ್ನು ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ರೋಗಿಯ ಸ್ಥಿತಿಯಲ್ಲಿ ಈಗಾಗಲೇ ಸಾಕಷ್ಟು ಸುಧಾರಣೆ ಕಂಡು ಬಂದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಪ್ಲಾಸ್ಮಾ ಚಿಕಿತ್ಸೆಯನ್ನು ಗಂಭೀರ ರೋಗಿಗಳ ಮೇಲೆ ಮಾತ್ರ ನಡೆಸಲಾಗುತ್ತದೆ. ಗಮನಾರ್ಹವಾಗಿ ಭಾರತದಲ್ಲಿ ರೋಗಿಯ ಮೇಲೆ ಪ್ಲಾಸ್ಮಾ ಚಿಕಿತ್ಸೆಯನ್ನು ನಡೆಸಿದ ಮೊದಲ ಪ್ರಕರಣ ಇದಾಗಿದೆ ಮತ್ತು ಇದುವರೆಗಿನ ಫಲಿತಾಂಶಗಳು ಸಕಾರಾತ್ಮಕವಾಗಿ ಬಂದ ಮೊದಲ ಪ್ರಕರಣವಾಗಿದೆ.
 

Trending News