ಸುಪ್ರಿಂಕೋರ್ಟ್ ಬಿಕ್ಕಟ್ಟಿಗೆ ಸಧ್ಯದಲ್ಲೇ ಪರಿಹಾರ ಸಿಗಲಿದೆ -ನ್ಯಾಯಮೂರ್ತಿ ಕುರೆನ್ ಜೋಸೆಪ್

     

Last Updated : Jan 14, 2018, 11:25 AM IST
ಸುಪ್ರಿಂಕೋರ್ಟ್ ಬಿಕ್ಕಟ್ಟಿಗೆ ಸಧ್ಯದಲ್ಲೇ ಪರಿಹಾರ ಸಿಗಲಿದೆ -ನ್ಯಾಯಮೂರ್ತಿ ಕುರೆನ್ ಜೋಸೆಪ್ title=

ನವದೆಹಲಿ: ಎರಡು ದಿನಗಳ ಹಿಂದೆ ನಾಲ್ವರು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕೇಸ್ ಗಳ ಆಯ್ಕೆಯ ವಿಷಯದಲ್ಲಿ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ದೀಪಕ್ ಮಿಶ್ರಾರವರು ಪಾರದರ್ಶಕತೆ ತೋರಿಸುತ್ತಿಲ್ಲ ಎಂದು ಬಹಿರಂಗವಾಗಿ ಅವರ ಮೇಲೆ ನೇರ ಆರೋಪ ಮಾಡಿದ್ದರು. 

ಈ ಆರೋಪ ಮಾಡಿದ ನ್ಯಾಯಧೀಶರೋಬ್ಬರಲ್ಲಾದ ಕುರೆನ್ ಜೋಸೆಪ್ ನ್ಯಾಯಾಂಗದ ಒಳಿತಿಗಾಗಿ ನಾವು ರೀತಿ ಸಾರ್ವಜನಿಕ ವೇದಿಕೆಗೆ ಬರಬೇಕಾಯಿತು ಎಂದು ತಮ್ಮ ನಾಲ್ಕು ನ್ಯಾಯಾಧೀಶರ ನಿರ್ಧಾರವನ್ನು ಸಮರ್ಥಿಸಿಕೊಂಡರು. ಸದ್ಯ ಉಂಟಾಗಿರುವ ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಕೇರಳದ ಸ್ಥಳೀಯ ಸುದ್ದಿ ವಾಹಿನಿಗಳು ಇವರನ್ನು  ಸಂಪರ್ಕಿಸಿದಾಗ ಈ ಸಮಸ್ಯೆ ಸದ್ಯದಲ್ಲೇ ಪರಿಹರಿಸಲಾಗುವುದು, ಎಂದು ತಿಳಿಸಿದರು 

ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲರು ಕೂಡಾ ವಿಶ್ವಾಸ ವ್ಯಕ್ತಪಡಿಸುತ್ತಾ ಎಲ್ಲವು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ನಾವು ಭಾವಿಸೋಣ, ಎಲ್ಲ ಗೊಂದಲಕ್ಕೆ ಸಧ್ಯದಲ್ಲೇ ಪರಿಹಾರ ಸಿಗುತ್ತೆ ಎನ್ನುವ ಖಾತ್ರಿಯಿದೆ. ಆದರೆ ನ್ಯಾಯಾಧೀಶರು ಇಂತಹ ಸಂಗತಿಯನ್ನು ಪತ್ರಿಕಾಗೋಷ್ಠಿಯಿಂದ ದೂರವಿಡಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು. 

ಸಿಜೆಐ ಮಿಶ್ರಾ ಅವರು ಭಾನುವಾರ ಈ ಭಿನ್ನಮತೀಯ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಭೇಟಿ ಮಾಡಿ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಇನ್ನು ಅಧಿಕೃತವಾಗಿ ಯಾವುದೇ ಹೇಳಿಕೆ ಮುಖ್ಯ ನ್ಯಾಯಾಧೀಶರಿಂದ ಬಂದಿಲ್ಲ ಎನ್ನಲಾಗಿದೆ. 

Trending News