ಇನ್ನು ಮುಂದೆ ಸಿಟಿಇಟಿ ಪರೀಕ್ಷೆ 20 ಭಾಷೆಗಳಲ್ಲಿ ನಡೆಯಲಿದೆ- ಜಾವಡೆಕರ್

    

Last Updated : Jun 18, 2018, 08:01 PM IST
ಇನ್ನು ಮುಂದೆ ಸಿಟಿಇಟಿ ಪರೀಕ್ಷೆ 20 ಭಾಷೆಗಳಲ್ಲಿ ನಡೆಯಲಿದೆ- ಜಾವಡೆಕರ್ title=

ನವದೆಹಲಿ: ಕೇಂದ್ರ ಸರ್ಕಾರದ ಅಡಿಯಲ್ಲಿನ  ಶಾಲೆಗಳಲ್ಲಿ 1 ರಿಂದ 8ನೇ ತರಗತಿ ಶಿಕ್ಷಕರಾಗಿ ನೇಮಕವಾಗಲು ಸಿಟಿಇಟಿ ಪರೀಕ್ಷೆಯಲ್ಲಿ ಪಾಸ್ ಆಗಬೇಕಾಗಿರುವುದು ಕಡ್ದಾಯವಾಗಿರುವುದರಿಂದ  ಇನ್ನು ಮುಂದೆ  ಕೇಂದ್ರದ ತ್ರಿ ಭಾಷಾ ಸೂತ್ರವನ್ನು ರದ್ದುಗೊಳಿಸಿ ಪ್ರಾದೇಶಕ ಭಾಷೆಯಲ್ಲೇ ಪರೀಕ್ಷೆಗಳನ್ನು ಬರೆಯಲು ಸರ್ಕಾರ ಅವಕಾಶ ನೀಡಿದೆ.

ಈ ಮೊದಲು ದೇಶದ 20 ಭಾಷೆಗಳಲ್ಲೂ ಸಿಟಿಇಟಿ ಪರೀಕ್ಷಾರ್ಥ ಪರೀಕ್ಷೆಯನ್ನು ನಡೆಸಿತ್ತು. ಆದರೆ ಪ್ರಾದೇಶಿಕ ಭಾಷೆಗಳನ್ನು ರದ್ದು ಪಡಿಸಿ ಕೇವಲ 3 ಭಾಷೆಯಲ್ಲಿ ಪರೀಕ್ಷೆಯನ್ನು ನಡೆಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ  ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕಾರ್ ಅಭ್ಯರ್ಥಿಗಳು ಆಯಾ ಪ್ರಾದೇಶಿಕ ಭಾಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ. 

ಈ ಕುರಿತಾಗಿ ಟ್ವೀಟ್ ಮಾಡಿರುವ  ಸಚಿವರು  ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸಿಟಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. 2018ರ ಸೆಪ್ಟೆಂಬರ್ 16ರಂದು ಸಿಟಿಇಟಿ ಪರೀಕ್ಷೆಯನ್ನು ನಡೆಯಲಾಗುತ್ತದೆ.

Trending News