Cyclone Gulab: ಒಡಿಸ್ಸಾ, ಆಂಧ್ರಪ್ರದೇಶಕ್ಕೆ ಪ್ರಧಾನಿ ಮೋದಿ ನೆರವಿನ ಭರವಸೆ

'ಗುಲಾಬ್' ಚಂಡಮಾರುತವು ಪೂರ್ವ ಕರಾವಳಿಯ ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ನಡುವೆ ಭಾನುವಾರ ತಡರಾತ್ರಿ ಅಪ್ಪಳಿಸುತ್ತದೆ ಎನ್ನಲಾಗಿದೆ.

Written by - ZH Kannada Desk | Last Updated : Sep 26, 2021, 07:06 PM IST
  • 'ಗುಲಾಬ್' ಚಂಡಮಾರುತವು ಪೂರ್ವ ಕರಾವಳಿಯ ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ನಡುವೆ ಭಾನುವಾರ ತಡರಾತ್ರಿ ಅಪ್ಪಳಿಸುತ್ತದೆ ಎನ್ನಲಾಗಿದೆ.
 Cyclone Gulab: ಒಡಿಸ್ಸಾ, ಆಂಧ್ರಪ್ರದೇಶಕ್ಕೆ ಪ್ರಧಾನಿ ಮೋದಿ ನೆರವಿನ ಭರವಸೆ

ನವದೆಹಲಿ: 'ಗುಲಾಬ್' ಚಂಡಮಾರುತವು ಪೂರ್ವ ಕರಾವಳಿಯ ಉತ್ತರ ಆಂಧ್ರ ಪ್ರದೇಶ ಮತ್ತು ದಕ್ಷಿಣ ಒಡಿಶಾ ಕರಾವಳಿಯ ನಡುವೆ ಭಾನುವಾರ ತಡರಾತ್ರಿ ಅಪ್ಪಳಿಸುತ್ತದೆ ಎನ್ನಲಾಗಿದೆ.

ಚಂಡಮಾರುತವು ಪಶ್ಚಿಮ ಮಧ್ಯ ಬಂಗಾಳ ಕೊಲ್ಲಿಯಲ್ಲಿ ಕೇಂದ್ರೀಕೃತವಾಗಿತ್ತು, ಭಾನುವಾರ ಬೆಳಿಗ್ಗೆ 11.30 ಕ್ಕೆ ಒಡಿಶಾದ ಗೋಪಾಲಪುರದ ಪೂರ್ವ-ಆಗ್ನೇಯಕ್ಕೆ 140 ಕಿಮೀ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣದ ಪೂರ್ವ-ಈಶಾನ್ಯಕ್ಕೆ 190 ಕಿಮೀಗಳು ದೂರದಲ್ಲಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಬುಲೆಟಿನ್ ನಲ್ಲಿ ತಿಳಿಸಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಪತ್ರ ಬರೆದ ಬಿಹಾರ್ ಸಿಎಂ ನಿತೀಶ್ ಕುಮಾರ್, ಅವರ ಬೇಡಿಕೆ ಏನು ಗೊತ್ತಾ!

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಸ್ಥಿತಿಯ ಅವಲೋಕನ ಮಾಡಿದ್ದು, ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಜೊತೆಗಿನ ಮಾತುಕತೆಯಲ್ಲಿ ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲದ ಭರವಸೆ ನೀಡಿದ್ದಾರೆ."ಕೇಂದ್ರದಿಂದ ಸಾಧ್ಯವಿರುವ ಎಲ್ಲ ಬೆಂಬಲವನ್ನು ಭರವಸೆ ನೀಡಿದ್ದೇನೆ.ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ."ಎಂದು ಮೋದಿ (PM Narendra Modi) ಟ್ವೀಟ್ ಮಾಡಿದ್ದಾರೆ.

ಚಂಡಮಾರುತದ ಪರಿಸ್ಥಿತಿ ಕುರಿತು ಅವರು ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರೊಂದಿಗೆ ಚರ್ಚಿಸಿದರು.'ಈ ಪ್ರತಿಕೂಲತೆಯನ್ನು ಜಯಿಸಲು ಕೇಂದ್ರವು ಎಲ್ಲ ರೀತಿಯ ಬೆಂಬಲವನ್ನು ನೀಡುತ್ತದೆ. ಪ್ರತಿಯೊಬ್ಬರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಲಾಗುತ್ತಿದೆ" ಎಂದು ಅವರು ಹೇಳಿದರು.

ಏತನ್ಮಧ್ಯೆ, ಪೂರ್ವ ನೌಕಾ ಕಮಾಂಡ್ ಮತ್ತು ನೌಕಾ ಅಧಿಕಾರಿಗಳು-ಉಸ್ತುವಾರಿ ಒಡಿಶಾ ಪ್ರದೇಶವು ಸಂಭವನೀಯ ಪರಿಣಾಮಗಳನ್ನು ಎದುರಿಸಲು ಪೂರ್ವಸಿದ್ಧತಾ ಚಟುವಟಿಕೆಗಳನ್ನು ನಡೆಸಿದ್ದಾರೆ."ಭಾರತೀಯ ನೌಕಾಪಡೆಯು ಚಂಡಮಾರುತದ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಅಗತ್ಯವಿರುವಂತೆ ನೆರವು ನೀಡಲು ರಾಜ್ಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದೆ" ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ದೇಶ ಮತ್ತು ಪಕ್ಷದ ಒಳಿತಿಗಾಗಿ ನಾನು ಸರಿ ಎನಿಸಿದ್ದನ್ನು ಮಾತನಾಡುತ್ತಲೇ ಇರುತ್ತೇನೆ- ಪವನ್ ವರ್ಮಾ

ಆದರೆ, ನೌಕಾ ವಿಮಾನ ನಿಲ್ದಾಣಗಳು, ವಿಶಾಖಪಟ್ಟಣಂನ ಐಎನ್ಎಸ್ ದೇಗಾ ಮತ್ತು ಚೆನ್ನೈ ಸಮೀಪದ ಐಎನ್ಎಸ್ ರಾಜಾಲಿ, ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ, ಅಪಘಾತ ಸ್ಥಳಾಂತರಿಸುವಿಕೆ ಮತ್ತು ಪರಿಹಾರ ಸಾಮಗ್ರಿಗಳ ಏರ್ ಡ್ರಾಪ್ ಅನ್ನು ಸಿದ್ಧಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೊಂದೆಡೆ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ `ಸೈಕ್ಲೋನ್ ಗುಲಾಬ್ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.ಈ ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ: ಬಿಹಾರದಲ್ಲಿ ಬಾಯ್ಲರ್ ಸ್ಫೋಟಗೊಂಡು ಮೂವರ ಸಾವು

'ಇಂದು ನಾನು ಒಡಿಶಾದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾ ಕಲೆಕ್ಟರ್‌ಗಳೊಂದಿಗೆ ವರ್ಚುವಲ್ ಸಭೆಯನ್ನು ನಡೆಸಿದ್ದೇನೆ,ರಾಜ್ಯದಲ್ಲಿ 'ಗುಲಾಬ್' ಚಂಡಮಾರುತದ ವಿರುದ್ಧ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಚರ್ಚಿಸಿದೆ.ಇಂದು ಸಂಜೆಯ ವೇಳೆಗೆ ಒಟ್ಟು ಹತ್ತು ಜಿಲ್ಲೆಗಳು ಚಂಡಮಾರುತದಿಂದ ಪ್ರಭಾವಿತವಾಗಲಿವೆ "ಎಂದು ಪಟ್ನಾಯಕ್ ಸುದ್ದಿಗಾರರಿಗೆ ತಿಳಿಸಿದರು.

ಹಲವಾರು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಮತ್ತು ಒಡಿಶಾ ವಿಪತ್ತು ಕ್ಷಿಪ್ರ ಕ್ರಿಯಾ ಪಡೆ (ODRAF) ತಂಡಗಳನ್ನು ದಕ್ಷಿಣ ಒಡಿಶಾದ 11 ಕರಾವಳಿ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News