ನವದೆಹಲಿ : ಅಕಾಲಿಕ ಮಳೆಯು (Heavy rainfall) ಭಾರತದ ಹಲವು ರಾಜ್ಯಗಳಲ್ಲಿ ಅಲೋಲ ಕಲ್ಲೋಲ ಸೃಷ್ಟಿಸಿದೆ. ಈ ಮಧ್ಯೆ, ಭಾರತೀಯ ಹವಾಮಾನ ಇಲಾಖೆ (IMD) ಚಂಡಮಾರುತದ ಎಚ್ಚರಿಕೆಯನ್ನು ನೀಡಿದೆ. ಮಾತ್ರವಲ್ಲ, ಜವಾದ್ ಚಂಡಮಾರುತವು (Cyclone Jawad) 24 ಗಂಟೆಗಳಲ್ಲಿ ಬಲಗೊಳ್ಳುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಈ ರಾಜ್ಯಗಳಲ್ಲಿ ಹಾನಿಯನ್ನುಂಟು ಮಾಡಲಿರುವ ಚಂಡಮಾರುತ :
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ, ಜವಾದ್ ಚಂಡಮಾರುತದ (Cyclone Jawad) ಭೀತಿ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ಆವರಿಸಿದೆ. ಜವಾದ್ ಚಂಡಮಾರುತದಿಂದಾಗಿ ಆಂಧ್ರಪ್ರದೇಶ (Andrapradesh) , ಒಡಿಶಾ ಮತ್ತು ಪಶ್ಚಿಮ ಬಂಗಾಳದ ಕರಾವಳಿ ಪ್ರದೇಶಗಳಲ್ಲಿ ಪ್ರತಿಕೂಲ ಹವಾಮಾನದ ಸಾಧ್ಯತೆಯಿದೆ. ಈ ರಾಜ್ಯಗಳಲ್ಲಿ ಭಾರೀ ಗಾಳಿ ಸಹಿತ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ (IMD Alert) ಎಚ್ಚರಿಕೆ ನೀಡಿದೆ.
ಇದನ್ನೂ ಓದಿ : ಸಂಬೀತ್ ಪಾತ್ರ ಹೆಗಲಿಗೆ ಮತ್ತೊಂದು ಜವಾಬ್ದಾರಿ, ಉನ್ನತ ಹುದ್ದೆ ಅಲಂಕರಿಸಿದ ಬಿಜೆಪಿ ವಕ್ತಾರ
ಆಂಧ್ರಪ್ರದೇಶ-ಒಡಿಶಾ ಕರಾವಳಿ ತಲುಪಲಿರುವ ಚಂಡಮಾರುತ :
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣದಿಂದಾಗಿ, ಶನಿವಾರದ ವೇಳೆಗೆ, ಚಂಡಮಾರುತ ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಯನ್ನು ತಲುಪುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮುದ್ರ ತಟದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಅಲ್ಲದೆ, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಮುಂಬೈಯಲ್ಲಿ ಭಾರೀ ಮಳೆಯಾಗಲಿದೆ :
ಹವಾಮಾನ ಇಲಾಖೆಯ ಪ್ರಕಾರ, ಜವಾದ್ ಚಂಡಮಾರುತದಿಂದಾಗಿ, ಪಶ್ಚಿಮ ಬಂಗಾಳದ ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆಗಳಲ್ಲಿ ಡಿಸೆಂಬರ್ 4 ರಂದು ಭಾರೀ ಮಳೆಯಾಗಬಹುದು (Heavy rainfall) . ಇದಲ್ಲದೆ, ಉತ್ತರ 24 ಪರಗಣ, ದಕ್ಷಿಣ 24 ಪರಗಣಗಳು, ಜಾರ್ಗ್ರಾಮ್ ಮತ್ತು ಹೌರಾ ಜಿಲ್ಲೆಗಳಲ್ಲಿಯೂ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಇನ್ನೊಂದೆಡೆ, ಮುಂಬೈನಲ್ಲಿಯೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (IMd Alert) ಎಚ್ಚರಿಕೆ ನೀಡಿದೆ. ಇದಲ್ಲದೆ, ಗುಜರಾತ್ ಮತ್ತು ಉತ್ತರ ಮಧ್ಯ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Corona : ಆತಂಕ ಹೆಚ್ಚಿಸಿದ ಒಮಿಕ್ರಾನ್, ಶೀಘ್ರದಲ್ಲೀ ಸಿಗಲಿದೆಯೇ ಲಸಿಕೆಯ ಬೂಸ್ಟರ್ ಡೋಸ್?
ಯುಪಿ ಮತ್ತು ದೆಹಲಿಯಲ್ಲೂ ಮಳೆಯ ಮುನ್ಸೂಚನೆ :
ವೆಸ್ಟರ್ನ್ ಡಿಸ್ಟರ್ಬನ್ಸ್ ಕಾರಣದಿಂದಾಗಿ ಇಡೀ ಉತ್ತರ-ಮಧ್ಯ ಭಾರತದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ, ದೆಹಲಿ ಮತ್ತು ಹರಿಯಾಣದಲ್ಲೂ ಮಳೆಯಾಗುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.