Daily GK Quiz: ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು?

Daily GK Quiz: For You: ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

Written by - Puttaraj K Alur | Last Updated : Jan 15, 2024, 05:39 PM IST
  • ‘ಲಡಾಖ್’ನ ರಾಜಧಾನಿ ‘ಲೇ’ಯಲ್ಲಿ ಹರಿಯುವ ನದಿ ಯಾವುದು?
  • ದಕ್ಷಿಣ ಭಾರತದ ಅತಿ ಎತ್ತರದ ಗಿರಿಶಿಖರ ಯಾವುದು?
  • ಮುಸಲ್ಮಾನ ಧರ್ಮದ ಗುರುಗಳನ್ನು ಏನೆಂದು ಕರೆಯುತ್ತಾರೆ?
Daily GK Quiz: ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು? title=
Daily GK Quiz

General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.

ಪ್ರಶ್ನೆ 1: 1948ನೇ ಜನವರಿ 30ರಂದು ಸಂಭವಿಸಿದ ದಾರುಣ ಘಟನೆ ಯಾವುದು?

ಉತ್ತರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹತ್ಯೆ

ಪ್ರಶ್ನೆ 2: ಸೀಸದ ಪೆನ್ಸಿಲ್ ಅನ್ನು ಕಂಡುಹಿಡಿದವರು ಯಾರು? ಮತ್ತು ಯಾವಾಗ?

ಉತ್ತರ: ಎನ್.ಜೆ.ಕೌಟೆ, 1795ರಲ್ಲಿ

ಪ್ರಶ್ನೆ 3: ಭಾರತದ ಗೋಲ್ಡನ್ ಗರ್ಲ್ ಖ್ಯಾತಿಯ ಪಿ.ಟಿ.ಉಷಾ ಅವರ ಕೋಚ್ ಯಾರು?

ಉತ್ತರ: ಓಎಂ ನಂಬಿಯಾರ್

ಪ್ರಶ್ನೆ 4: 15ನೇ ಶತಮಾನದಲ್ಲಿ ಭಾರತಕ್ಕೆ ಜಲಮಾರ್ಗ ಕಂಡುಹಿಡಿದವರು ಯಾರು?

ಉತ್ತರ: ವಾಸ್ಕೋಡಿಗಾಮಾ

ಪ್ರಶ್ನೆ 5: ಮುಸಲ್ಮಾನ ಧರ್ಮದ ಗುರುಗಳನ್ನು ಏನೆಂದು ಕರೆಯುತ್ತಾರೆ?

ಉತ್ತರ: ಖಲೀಫರು

ಇದನ್ನೂ ಓದಿ: Good News: UGCಯಿಂದ ವಿದ್ಯಾರ್ಥಿಗಳಿಗೆ ಸಂಶೋಧನಾ ಇಂಟರ್ನ್‌ಶಿಪ್ ಜೊತೆಗೆ ಸ್ಟೈಫಂಡ್ ಮತ್ತು ವಿಮೆ!

ಪ್ರಶ್ನೆ 6: ಭಗವದ್ಗೀತೆಯನ್ನು ಮೊಟ್ಟಮೊದಲು ಇಂಗ್ಲಿಷ್‍ಗೆ ಅನುವಾದಿಸಿದವರು ಯಾರು?

ಉತ್ತರ: ಚಾರ್ಲ್ಸ್ ಮಿಲ್ಕಿನ್ಸ್, 1785ರಲ್ಲಿ

ಪ್ರಶ್ನೆ 7: ನೀಲಗಿರಿ ಬೆಟ್ಟಗಳಲ್ಲಿರುವ ‘ಮಥುರೈ’ ಎಂಬ ಹಳ್ಳಿಯು ವಿಜ್ಞಾನಿಗಳನ್ನು ಆಕರ್ಷಿಸಲು ಕಾರಣವೇನು?

ಉತ್ತರ: ವಿಶ್ವದ ಬೃಹತ್‌ ರೇಡಿಯೋ ಟೆಲಿಸ್ಕೋಪ್‍ಅನ್ನು ಇಲ್ಲಿ ಸ್ಥಾಪಿಸಲಾಗಿದೆ

ಪ್ರಶ್ನೆ 8: ‘ಲಡಾಖ್’ನ ರಾಜಧಾನಿ ‘ಲೇ’ಯಲ್ಲಿ ಹರಿಯುವ ನದಿ ಯಾವುದು?

ಉತ್ತರ: ಸಿಂಧು ನದಿ (ಇಂಡಸ್)

ಪ್ರಶ್ನೆ 9: ಭಾರತದಲ್ಲಿ ಪ್ರಥಮವಾಗಿ ನಿರ್ಮಾಣಗೊಂಡ ಅಣುಶಕ್ತಿ ಸ್ಥಾವರದ ಹೆಸರೇನು?

ಉತ್ತರ: ಮುಂಬೈ ಸಮೀಪದಲ್ಲಿರುವ ತಾರಾಪುರ್ ಸ್ಥಾವರ

ಪ್ರಶ್ನೆ 10: ದಕ್ಷಿಣ ಭಾರತದ ಅತಿ ಎತ್ತರದ ಗಿರಿಶಿಖರ ಯಾವುದು?

ಉತ್ತರ: ಅನೈಮುಡಿ (2,695 ಮೀಟರ್ )

ಇದನ್ನೂ ಓದಿ: ಮಕರ ಸಂಕ್ರಾಂತಿ ಪ್ರಯುಕ್ತ ಗೋವುಗಳಿಗೆ ಆಹಾರ ನೀಡಿದ ಮೋದಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News