ನವದೆಹಲಿ: ಯಾವುದೇ ಒಂದು ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದುವುದು ಬಹಳ ಮುಖ್ಯವಾದ ವಿಷಯ. ಏಕೆಂದರೆ ಅದು ತುರ್ತು ಪರಿಸ್ಥಿತಿಯಲ್ಲಿ ನಿಧಿಯಾಗಿ ಕಾರ್ಯನಿರ್ವಹಿಸುತ್ತದೆ. ಅಗತ್ಯವಿದ್ದಾಗ ನೀವು ಇದರಿಂದ ಹಣವನ್ನು ಹಿಂಪಡೆಯಬಹುದು. ಆದರೆ, ಒಂದು ವೇಳೆ ನೀವು ಈ ಹಣವನ್ನು FD, NSCಗಳಂತಹ ಯೋಜನೆಗಳಲ್ಲಿ ವಿನಿಯೋಗಿಸಿದರೆ, ಅದನ್ನು ನೀವು ನಿಗದಿತ ಸಮಯಕ್ಕೆ ಹಿಂಪಡೆಯಲು ಸಾಧ್ಯವಿಲ್ಲ. ಹೀಗಾಗಿ ಉಳಿತಾಯ ಖಾತೆ ಹೊಂದಿರುವುದು ಬಹಳ ಮುಖ್ಯವಾಗಿದೆ. ಉಳಿತಾಯ ಖಾತೆಯಲ್ಲಿ ನೀವು ಉಳಿಸುವ ಹಣಕ್ಕೆ ಬ್ಯಾಂಕ್ ಗಳು ಬಡ್ಡಿಯನ್ನೂ ಸಹ ಪಾವತಿಸುತ್ತವೆ. ಈ ಬಡ್ಡಿ ಶೇ.2.7 ರಿಂದ ಶೇ.4ರಷ್ಟು ಅಥವಾ ಅದಕ್ಕಿಂತ ಹೆಚ್ಚು ಕೂಡ ಇರುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಬಹುತೇಕ ಬ್ಯಾಂಕ್ ಗಳು ಶೇ.2.7 ರಿಂದ ಶೇ.4 ರಷ್ಟು ಬಡ್ಡಿಯನ್ನು ಪಾವತಿಸುತ್ತವೆ.
ಆದರೆ, ಬ್ಯಾಂಕ್ ನಲ್ಲಿ ಖಾತೆ ತೆರೆಯುವುದರಿಂದ ಕ್ಯಾಷ್ ಬ್ಯಾಕ್ ಕೂಡ ಪಡೆಯಬಹುದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹೌದು, DCB ಬ್ಯಾಂಕ್ ಎರಡು ವಿಧದ ಉಳಿತಾಯ ಖಾತೆಗಳ ಮೇಲೆ ಕ್ಯಾಶ್ ಬ್ಯಾಕ್ ನೀಡುತ್ತದೆ. DCB ಕ್ಯಾಷ್ ಬ್ಯಾಕ್ ಸೇವಿಂಗ್ಸ್ ಹಾಗೂ DCB ELITE ಉಳಿತಾಯ ಖಾತೆಯ ಮೇಲೆ ಕ್ಯಾಶ್ ಬ್ಯಾಕ್ ಸಿಗುತ್ತದೆ. DCB ಬ್ಯಾಂಕ್ ಉಳಿತಾಯ ಖಾತೆಯ ಮೇಲೆ ವಾರ್ಷಿಕವಾಗಿ ಶೇ.3.25 ರಷ್ಟು ಬಡ್ಡಿ ಪಾವತಿಸುತ್ತದೆ.
DCB ಕ್ಯಾಶ್ ಬ್ಯಾಕ್ ಸೇವಿಂಗ್ಸ್ ಅಕೌಂಟ್
ಈ ಸೇವಿಂಗ್ಸ್ ಅಕೌಂಟ್ ತೆರೆದರೆ ನಿಮಗೆ ವಾರ್ಷಿಕವಾಗಿ ರೂ.6000ವರೆಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಈ ಕ್ಯಾಶ್ ಬ್ಯಾಕ್ ಅನ್ನು ನೀವು DCB ಕ್ಯಾಶ್ ಬ್ಯಾಕ್ ಡೆಬಿಟ್ ಕಾರ್ಡ್ ಬಳಸಿ ವ್ಯವಹಾರ ನಡೆಸಿದಾಗ ಸಿಗುತ್ತದೆ. ಇದಲ್ಲದೆ ದೇಶಾದ್ಯಂತ ಇರುವ ಎಲ್ಲ ATM ಗಳನ್ನು ಉಚಿತವಾಗಿ ಅಕ್ಸಸ್ ಮಾಡಬಹುದು. ಈ ಬ್ಯಾಂಕ್ ತನ್ನ ಗ್ರಾಹಕರಿಗೆ ಉಚಿತವಾಗಿ RTGS/NEFT ಸೌಲಭ್ಯ ಕೂಡ ನೀಡುತ್ತದೆ. ಇದರ ಜೊತೆಗೆ ಇಂಟರ್ನೆಟ್, ಫೋನ್, ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ ಕೂಡ ಉಚಿತವಾಗಿ ಪಡೆಯಬಹುದು. ಇದಲ್ಲದೆ, ಉಳಿತಾಯ ಖಾತೆಯ ಜೊತೆಗೆ ನಿತ್ಯ ರೂ.1 ಲಕ್ಷವರೆಗೆ ಡಿಮಾಂಡ್ ಡ್ರಾಫ್ಟ್ ಹಾಗೂ ಪೇ ಆರ್ಡರ್ ಕೂಡ ಉಚಿತ ಸಿಗಲಿದೆ.
ಭಾರತದ ಯಾವುದೇ ನಾಗರಿಕರು ಈ ಬ್ಯಾಂಕ್ ನಲ್ಲಿ ಖಾತೆ ತೆರೆಯಬಹುದಾಗಿದೆ. ಡೆಬಿಟ್ ಕಾರ್ಡ್ ನಿಂದ ನೀವು ಮಾಡುವ ಖರೀದಿಯ ಒಟ್ಟು ಮೊತ್ತದ ಶೇ.1.25ರಷ್ಟು ನಿಮಗೆ ಕ್ಯಾಶ್ ಬ್ಯಾಕ್ ಸಿಗುತ್ತದೆ. ಕ್ಯಾಷಬ್ಯಾಕ್ ಲಾಭ ಪಡೆಯಲು ನೀವು DCB ಡೆಬಿಟ್ ಕಾರ್ಡ್ ಬಳಸಬೇಕು ಹಾಗೂ ತಿಂಗಳಿಗೆ ರೂ.800 ಅಥವಾ ಅದಕ್ಕಿಂತ ಹೆಚ್ಚು ಬೆಲೆಯ ಖರೀದಿ ಮಾಡಬೇಕು.
ಒಂದು ತಿಂಗಳಿಗೆ ಗರಿಷ್ಟ ರೂ.1000 ಹಾಗೂ ವಾರ್ಷಿಕವಾಗಿ ರೂ.6000ವರೆಗೆ ಕ್ಯಾಷಬ್ಯಾಕ್ ಪಡೆಯಬಹುದು. ಕ್ಯಾಶ್ ಬ್ಯಾಕ್ ಲೆಕ್ಕಾಚಾರ ಆರ್ಥಿಕ ವರ್ಷದ ಆದಾರದ ಮೇಲೆ ನಡೆಯುತ್ತದೆ. ಒಂದು ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸಿಗುವ ಕ್ಯಾಶ್ ಬ್ಯಾಕ್, ಎರಡನೇ ತ್ರೈಮಾಸಿಕದಲ್ಲಿ ನಿಮ್ಮ ಖಾತೆಗೆ ವರ್ಗಾಗಿಸಲಾಗುತ್ತದೆ. ಆದರೆ, ಕ್ಯಾಶ್ ಬ್ಯಾಕ್ ಸೌಲಭ್ಯ ಪಡೆಯಲು ನೀವು ನಿಮ್ಮ ಖಾತೆಯಲ್ಲಿ ನಿರಂತರವಾಗಿ ರೂ.10,000 ಹೊಂದಿರುವುದು ಅವಶ್ಯಕವಾಗಿದೆ. ಇದೇ ರೀತಿ DCB ELITE ಸೇವಿಂಗ್ಸ್ ಖಾತೆ ಮೇಲೂ ಕೂಡ ನೀವು ಮಾಸಿಕವಾಗಿ ಗರಿಷ್ಠ ರೂ.2000 ಹಾಗೂ ವಾರ್ಷಿಕವಾಗಿ ರೂ.20000ವರೆಗೆ ಕ್ಯಾಶ್ ಬ್ಯಾಕ್ ಪಡೆಯಬಹುದು. ಈ ಖಾತೆದಾರರಿಗೆ ಲಾಕರ್ ಫೀಸ್ ನಲ್ಲಿ ಶೇ.50 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಖಾತೆಯಲ್ಲಿ ಕ್ಯಾಶ್ ಬ್ಯಾಕ್ ಪಡೆಯಲು ನೀವು ತ್ರೈಮಾಸಿಕದಲ್ಲಿ ರೂ.25,000 ಬ್ಯಾಂಕ್ ನಲ್ಲಿ ಹೊಂದಿರುವುದು ಅವಶ್ಯಕವಾಗಿದೆ.