ದೀಪಾವಳಿಗೆ ಭರ್ಜರಿ ಗಿಫ್ಟ್ ! ರಾಜ್ಯ ಸಾರಿಗೆ ಬಸ್ ಟಿಕೆಟ್ ದರದಲ್ಲಿ ಕಡಿತ ! ಇಲ್ಲಿದೆ ಹೊಸ ದರ

ರಾಜಧಾನಿಯ ಬಸ್‌ಗಳ ದರವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.ರಾಜಧಾನಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೇಬಿನ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. 

Written by - Ranjitha R K | Last Updated : Nov 2, 2023, 03:52 PM IST
  • ದೀಪಾವಳಿ ಹಬ್ಬದಂದು ಬಸ್‌ಗಳ ದರ ಕಡಿತ
  • ದೂರ ಪ್ರಯಾಣಿಸುವವರಿಗೆ ಸಿಹಿ ಸುದ್ದಿ
  • ಹಳೇ ದರ ಮತ್ತು ಹೊಸ ದರಗಳು ಹೀಗಿವೆ
ದೀಪಾವಳಿಗೆ ಭರ್ಜರಿ ಗಿಫ್ಟ್ ! ರಾಜ್ಯ ಸಾರಿಗೆ ಬಸ್ ಟಿಕೆಟ್ ದರದಲ್ಲಿ ಕಡಿತ ! ಇಲ್ಲಿದೆ ಹೊಸ ದರ  title=

ನವದೆಹಲಿ : ದೀಪಾವಳಿ ಹಬ್ಬದಂದು, ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಉಡುಗೊರೆಯನ್ನು ನೀಡಿದೆ. ರಾಜಧಾನಿಯ ಬಸ್‌ಗಳ ದರವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.ರಾಜಧಾನಿ ಬಸ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರ ಜೇಬಿನ ಹೊರೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ರಾಜಧಾನಿ ಬಸ್ ಸೇವೆಯ ದರವನ್ನು ಕಡಿಮೆ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಶೇಷ ಬಸ್‌ಗಳ ದರವನ್ನು ಸಾಮಾನ್ಯ ಬಸ್‌ಗಳಿಗಿಂತ ಸುಮಾರು 10% ಹೆಚ್ಚು ವಿಧಿಸಲಾಗುತ್ತಿತ್ತು. ಆದರೆ ಈಗ ಅದನ್ನು ಕಡಿತಗೊಳಿಸಲಾಗಿದೆ. 

ಟಿಕೆಟ್ ದರದಲ್ಲಿ ಕಡಿತ : 

ರಾಜಧಾನಿ ಲಕ್ನೋನಿಂದ ಇಡೀ ಉತ್ತರಪ್ರದೇಶದ ಮೂಲೆ ಮೂಲೆಗೂ ನೇರ ಬಸ್ ಸೇವೆಯನ್ನು ಪ್ರಾರಂಭಿಸಲಾಯಿತು. ಇದರ ಅಡಿಯಲ್ಲಿ ರಾಜಧಾನಿ ಎಕ್ಸ್‌ಪ್ರೆಸ್ ಬಸ್‌ಗಳ ಸಂಚಾರ ಆರಂಭಿಸಲಾಯಿತು. ಆರಂಭದಲ್ಲಿ ಸಾಮಾನ್ಯ ಬಸ್‌ಗಳಿಗಿಂತ 10 ಪ್ರತಿಶತ ಹೆಚ್ಚುವರಿ ಶುಲ್ಕವನ್ನು ಇರಿಸಲಾಗಿತ್ತು. ಈ ಬಸ್ ಗಳು ಪ್ರಯಾಣಿಕರು ತಮ್ಮ ಗಮ್ಯಸ್ಥಾನವನ್ನು ಕಡಿಮೆ ಸಮಯದಲ್ಲಿ ತಲುಪಲು ಸಹಾಯ ಮಾಡುತ್ತದೆ. ಇದ್ದಿಗ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಬೇಡಿಕೆಯ ಮೇರೆಗೆ ಈ ಬಸ್‌ಗಳ ಪ್ರಯಾಣ ದರವನ್ನೂ ಕಡಿತಗೊಳಿಸಲಾಗಿದೆ. 

ಇದನ್ನೂ ಓದಿ : Daily GK Quiz: ಕಲಿಯುಗ ಕೊನೆಗೊಳ್ಳಲು ಎಷ್ಟು ವರ್ಷಗಳು ಬಾಕಿ ಉಳಿದಿವೆ..?

ಹೊಸ ದರಗಳು ಹೀಗಿವೆ : 
ರಾಜಧಾನಿ ಬಸ್‌ಗಳ ದರ ಇಳಿಕೆಯಿಂದಾಗಿ ದೂರದ ಪ್ರಯಾಣ ಮಾಡುವ ಪ್ರಯಾಣಿಕರಿಗೆ 100 ರೂ.ವರೆಗೆ ರಿಯಾಯಿತಿ ಸಿಗಲಿದೆ. ವಾಸ್ತವವಾಗಿ, ಈ ಮೊದಲು ಲಕ್ನೋದಿಂದ ದೆಹಲಿಗೆ ಹೋಗುವ ರಾಜಧಾನಿ ಬಸ್‌ಗಳ ದರ 832 ರೂ. ಆಗಿತ್ತು. ಆದರೆ ಈಗ ಹೊಸ ದರಗಳು ಜಾರಿಯಾದ ನಂತರ ಲಕ್ನೋದಿಂದ ದೆಹಲಿಗೆ ಹೋಗುವ ಪ್ರಯಾಣಿಕರು 739 ರೂ.ಯಲಿ ಪ್ರಯಾಣ ಬೆಳೆಸಬಹುದು. ಈ ರೀತಿಯಾಗಿ ಈ ಮಾರ್ಗದಲ್ಲಿ 93 ರೂಪಾಯಿಗಳ ರಿಯಾಯಿತಿ ಪಡೆಯಬಹುದು. ಬಲ್ಲಿಯಾ ತನಕ ಈ ಹಿಂದೆ 685 ರೂ ಇದ್ದ ಪ್ರಯಾಣ ದರ ಈಗ 623 ರೂ ಆಗಿದೆ. ಅಜಂಗಢದ ಪ್ರಯಾಣ ದರ ಈ ಹಿಂದೆ 513 ರೂ.ಗಳಷ್ಟಿತ್ತು, ಈಗ 467 ರೂ. ನಿಗದಿ ಮಾಡಲಾಗಿದೆ.  ಇನ್ನು  ಗೋರಖ್‌ಪುರದ ಪ್ರಯಾಣ ದರವು ಈ ಹಿಂದೆ 506 ರೂಪಾಯಿ ಇತ್ತು, ಈಗ 460 ರೂಪಾಯಿಗೆ ಇಳಿಕೆಯಾಗಿದೆ. 

ಇದನ್ನೂ ಓದಿ : ಮುಂದಿನ 3 ದಿನ ಈ ಭಾಗಗಳಲ್ಲಿ ಗುಡುಗು-ಸಿಡಿಲು ಸಹಿತ ಭರ್ಜರಿ ಮಳೆ: ಬಲವಾದ ಮೇಲ್ಮೈ ಗಾಳಿ ಜೊತೆ ಜಲಪ್ರವಾಹದ ಭೀತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News