ನವದೆಹಲಿ: ಈಗ ದೇಶದ ರಕ್ಷಣಾ ಸಚಿವಾಲಯಕ್ಕೂ ರಕ್ಷಣೆ ಸಿಗದ ಪರಿಸ್ಥಿತಿ ಎದುರಾಗಿದೆ, ಹೌದು, ರಕ್ಷಣಾ ಇಲಾಖೆಯನ್ನು ಹ್ಯಾಕರ್ಸ್ ಗಳು ಹ್ಯಾಕ್ ಮಾಡುವ ಮೂಲಕ ಈ ಅಂಶವು ಸ್ಪಷ್ಟವಾಗಿದೆ.
ರಕ್ಷಣಾ ಖಾತೆಯ ವೆಬ್ ಸೈಟ್ ಹ್ಯಾಕ್ ಆಗಿರುವ ಕುರಿತಾಗಿ ಸ್ವತಃ ಕೇಂದ್ರ ರಕ್ಷಣಾ ಸಚಿವರು ಈ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.ಇದರಿಂದ ಎಚ್ಚೆತ್ತು ಕೊಂಡಿರುವ ಗೃಹ ಇಲಾಖೆಯು ಸಹಿತ ಪೂರ್ವಯೋಚಿತವಾಗಿ ವೆಬ್ ಸೈಟ್ ಕಾರ್ಯಚಟುವಟಿಕೆಯನ್ನು ತಾತ್ಕಾಲಿಕವಾಗಿ ರಕ್ಷಣೆ ನಿಟ್ಟಿನಲ್ಲಿ ಸ್ಥಗೀತಗೊಳಿಸಿದ್ದಾರೆ.ಇದರ ನಿರ್ವಹಣೆಯನ್ನು ನೇಶನ್ ಇನ್ಫಾರ್ಮೆಟಿಕ್ ಸೆಂಟರ್ ಮಾಡಲಿದೆ.
Action is initiated after the hacking of MoD website ( https://t.co/7aEc779N2b ). The website shall be restored shortly. Needless to say, every possible step required to prevent any such eventuality in the future will be taken. @DefenceMinIndia @PIB_India @PIBHindi
— Nirmala Sitharaman (@nsitharaman) April 6, 2018
ಈ ಕುರಿತಾಗಿ ಟ್ವೀಟ್ ಮಾಡಿರುವ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ "ರಕ್ಷಣಾ ಇಲಾಖೆಯ ವೆಬ್ ಸೈಟ ಹ್ಯಾಕ್ ಆದ ನಂತರ ಅದಕ್ಕೆ ಸಂಬಂಧಪಟ್ಟ ಕಾರ್ಯವನ್ನು ಕೈಗೊಳ್ಳಲಾಗಿದೆ,ಸಧ್ಯದಲ್ಲೇ ಈ ವೆಬ್ ಸೈಟ್ ನ್ನು ಮತ್ತೆ ಚಾಲನೆ ನೀಡಲಾಗುವುದು,ಮತ್ತು ಮುಂದೆ ಈ ರೀತಿ ಘಟನೆ ಜರುಗುದಂತೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.