ದೆಹಲಿಯ ತೀನ್ ಮೂರ್ತಿ ಚೌಕ್ ಗೆ ಇಸ್ರೇಲ್ ನಗರದ ಹೆಸರು!

    

Last Updated : Jan 14, 2018, 05:23 PM IST
ದೆಹಲಿಯ ತೀನ್ ಮೂರ್ತಿ ಚೌಕ್ ಗೆ ಇಸ್ರೇಲ್ ನಗರದ ಹೆಸರು!  title=
Photo Courtesy: PIB

ನವದೆಹಲಿ:ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ರವರ ನಿವಾಸವಾಗಿದ್ದ ತೀನ್ ಮೂರ್ತಿ ಭವನದ ಹತ್ತಿರದ ವೃತ್ತಕ್ಕೆ ಅಧಿಕೃತವಾಗಿ ಇಸ್ರೇಲ್ ನಗರದ ಹೈಫಾ ಹೆಸರನ್ನು ಇಡಲಾಗಿದೆ ಆ ಮೂಲಕ ಅದು ಇನ್ನು ಮುಂದೆ ತೀನ್ ಮೂರ್ತಿ-ಹೈಫಾ ಚೌಕ್ ಎಂದು ಕರೆಯಲಾಗುತ್ತದೆ.

ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತಾನ್ಯಹು ಈ  ತೀನ್ ಮೂರ್ತಿ-ಹೈಫಾ ಚೌಕ್ ಮರು ನಾಮಕರಣದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.1918 ರಲ್ಲಿ ಭಾರತ ಸೈನಿಕರು ಮೊದಲನೆಯ ಜಾಗತಿಕ ಯುದ್ದದ ಸಂದರ್ಭದಲ್ಲಿ ಇಸ್ರೇಲಿನ ಹೈಫಾದಲ್ಲಿ  ಭಾಗವಹಿಸಿದ್ದರು, ಅದರ ನೂರನೆಯ ವರ್ಷ ಇದಾಗಿದ್ದರಿಂದ ಅದನ್ನು ಸ್ಮರಿಸುವ ನಿಟ್ಟಿನಲ್ಲಿ ಈಗ ಅದನ್ನು ತೀನ್ ಮೂರ್ತಿ-ಹೈಫಾ ಚೌಕ್ ಎಂದು ಮರು ನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

 

Trending News