ಇಂಡಿಯನ್ ಆರ್ಮಿಗೆ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆಯ ಮೂತ್ರ ನೆರವಾಗಿದ್ದೇಗೆ ಗೊತ್ತೇ?

 ಎರಡು ವರ್ಷಗಳ ಹಿಂದೆ ಭಾರತೀಯ ಸೈನ್ಯದ ಸರ್ಜಿಕಲ್ ಸ್ಟ್ರೈಕ್ ನಿಂದ ಈಗ ಹಲವಾರು ರೋಚಕ ಕಥನಗಳು ಹೊರಬರುತ್ತಿವೆ.ಅದರಲ್ಲಿ ಪ್ರಮುಖವಾಗಿ ಚಿರತೆಯ ಮೂತ್ರವು ಸಹ ಭಾರತದ ಸೈನ್ಯಕ್ಕೆ ನೆರವಾಗಿತ್ತು ಎನ್ನುವ ಕೂತುಹಲಕಾರಿ  ಸಂಗತಿಯು ಈಗ ಬೆಳಕಿಗೆ ಬಂದಿದೆ.

Updated: Sep 12, 2018 , 05:08 PM IST
ಇಂಡಿಯನ್ ಆರ್ಮಿಗೆ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಚಿರತೆಯ ಮೂತ್ರ ನೆರವಾಗಿದ್ದೇಗೆ ಗೊತ್ತೇ?
Photo:ANI

ನವದೆಹಲಿ:  ಎರಡು ವರ್ಷಗಳ ಹಿಂದೆ ಭಾರತೀಯ ಸೈನ್ಯದ ಸರ್ಜಿಕಲ್ ಸ್ಟ್ರೈಕ್ ನಿಂದ ಈಗ ಹಲವಾರು ರೋಚಕ ಕಥನಗಳು ಹೊರಬರುತ್ತಿವೆ.ಅದರಲ್ಲಿ ಪ್ರಮುಖವಾಗಿ ಚಿರತೆಯ ಮೂತ್ರವು ಸಹ ಭಾರತದ ಸೈನ್ಯಕ್ಕೆ ನೆರವಾಗಿತ್ತು ಎನ್ನುವ ಕೂತುಹಲಕಾರಿ  ಸಂಗತಿಯು ಈಗ ಬೆಳಕಿಗೆ ಬಂದಿದೆ.

ಸೆಪ್ಟೆಂಬರ್ 28 ಮತ್ತು 29 ರಂದು 2016 ರಲ್ಲಿನ  ಸೈನ್ಯದ  ಸರ್ಜಿಕಲ್ ಬಗ್ಗೆ ಮಾತನಾಡಿರುವ ಲೆಫ್ಟಿನೆಂಟ್ ಗವರ್ನರ್ ಜನರಲ್ ಆರ್.ಆರ್ ನಿಂಬಾಲ್ಕರ್ "ನಾವು ದಾರಿಯಲ್ಲಿ ಸಾಗುತ್ತಿರುವಾಗ ಹಳ್ಳಿಗಳಲ್ಲಿ ನಾಯಿಗಳು ಬೊಗಳುವ ಸಾಧ್ಯತೆ ಇತ್ತು, ಆದ್ದರಿಂದ ಸೈನ್ಯವು ನಾಯಿಗಳನ್ನು ಹದ್ದುಬಸ್ತಿನಲ್ಲಿಡಲು ನಾವು ಚಿರತೆಯ ಮೂತ್ರವನ್ನು ಜೊತೆಗೆ ತೆಗೆದುಕೊಂಡು ಹೋದೆವು ಇದರಿಂದ ನಾಯಿಗಳು ಮುಂದೆ ಬರಲು ಹೆದರಿದವು "ಎಂದು ಅವರು ತಿಳಿಸಿದರು

ಈ ಸರ್ಜಿಕಲ್ ಆಪರೇಷನ್ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸತತ ಐದು ಘಂಟೆಗಳ ಕಾಲ ನಡೆಯಿತು.ಆ ಮೂಲಕ ಭಾರತದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸಿದ್ದ ಭಯೋತ್ಪಾದಕರಿಗೆ ಇದರಿಂದ ಹಿನ್ನಡೆಯಾಯಿತು.