ಏರ್ ಇಂಡಿಯಾ: ಕುಡಿದ ಅಮಲಿನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ವಿಸರ್ಜಿಸಿದ ಪ್ರಯಾಣಿಕ

ನ್ಯೂಯಾರ್ಕ್'ನಿಂದ ದೆಹಲಿಗೆ ವಾಪಸ್ಸಾಗುತ್ತಿದ್ದ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಈ ಘಟನೆ ನಡೆದಿದೆ. 

Last Updated : Sep 1, 2018, 07:43 PM IST
ಏರ್ ಇಂಡಿಯಾ: ಕುಡಿದ ಅಮಲಿನಲ್ಲಿ ಮಹಿಳೆ ಸೀಟ್ ಮೇಲೆ ಮೂತ್ರ ವಿಸರ್ಜಿಸಿದ ಪ್ರಯಾಣಿಕ title=

ನವದೆಹಲಿ: ಪಾನಮತ್ತ ವ್ಯಕ್ತಿಯೊಬ್ಬ ಮಹಿಳಾ ಪ್ರಯಾಣಿಕರ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ವಿಚಿತ್ರ ಘಟನೆ ನ್ಯೂಯಾರ್ಕ್'ನಿಂದ ದೆಹಲಿಗೆ ವಾಪಸ್ಸಾಗುತ್ತಿದ್ದ ಏರ್ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ನಡೆದಿದೆ. 

ಆಗಸ್ಟ್ 30ರಂದು AI 102 ವಿಮಾನದಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಪ್ರಯಾಣಿಕರ ಪುತ್ರಿ ಇಂದ್ರಾಣಿ ಘೋಷ್ ಎಂಬವರು, "ಏರ್ ಇಂಡಿಯ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನನ್ನ ತಾಯಿಗೆ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬರು ಸೀಟಿನ ಮೇಲೆ ವಿಸರ್ಜಿಸಿ ತೊಂದರೆ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಿ" ಎಂದು @Suresh Prabhu, @Sushma Swaraj @Air India ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದರು. 

ಈ ಘಟನೆ ಬಗ್ಗೆ ತಿಳಿದ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ, ತಕ್ಷಣವೇ ಘಟನೆ ಬಗ್ಗೆ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ಏರ್ ಇಂಡಿಯಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Trending News