ರೈತರ ಪ್ರತಿಭಟನೆ ವಿಷಯವಲ್ಲದ್ದು ಎಂದ ಹರ್ಯಾಣ ಸಿಎಂ

    

Last Updated : Jun 2, 2018, 12:02 PM IST
ರೈತರ ಪ್ರತಿಭಟನೆ ವಿಷಯವಲ್ಲದ್ದು ಎಂದ ಹರ್ಯಾಣ ಸಿಎಂ  title=

ನವದೆಹಲಿ: ರೈತರು ನೀಡಿರುವ ಹತ್ತು ದಿನಗಳ ಪ್ರತಿಭಟನೆಯನ್ನು ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ವಿಷಯವಲ್ಲದ್ದು ಎಂದು ಹೇಳಿ ಈಗ ಭಾರಿ ವಿವಾದಕ್ಕೆ ಕಾರಣರಾಗಿದ್ದಾರೆ.

ರೈತರ ಪ್ರತಿಭಟನೆ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ  ಕಟ್ಟರ್ " ರೈತರಿಗೆ ಯಾವುದೇ ವಿಷಯಗಳಿಲ್ಲ  ಅದ್ದರಿಂದ ಅವರು ಈ ರೀತಿಯ ಅನವಶ್ಯಕ ಸಂಗತಿಗಳ ಮೇಲೆ ಕೇಂದ್ರಿಕರಿಸುತ್ತಿದ್ದಾರೆ ಎಂದು ತಿಳಿಸಿದರು. ಅಲ್ಲದೆ ರೈತರಿಗೆ ಬೆಳೆಗಳನ್ನು ಮಾರಾಟ ಮಾಡದೆ ಇರುವುದು ಇನ್ನು ಹೆಚ್ಚಿನ ನಷ್ಟವನ್ನು ಉಂಟುಮಾಡುತ್ತದೆ ಎಂದು ತಿಳಿಸಿದರು.

ಸಿಎಂ ಕಟ್ಟರ್ ಅವರ ಹೇಳಿಕೆಯು ದೇಶಾದ್ಯಂತ 10 ದಿನಗಳ ಕಾಲ ರೈತರು ಉತ್ತಮ ಬೆಲೆ ಹಾಗೂ ಸಾಲ ಮನ್ನಾ ವಿಚಾರವಾಗಿ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಬಂದಿದೆ. ಹಲವು ರಾಜ್ಯಗಳಲ್ಲಿ ಪ್ರತಿಭಟನೆಯ ವೇಳೆ ರೈತರು ತರಕಾರಿ ಹಾಗೂ ಇತರ ಉತ್ಪನ್ನಗಳನ್ನು ರಸ್ತೆಗಳ ಮೇಲೆ ಚೆಲ್ಲಿ ಪ್ರತಿಭಟನೆ ಮಾಡಿದ್ದನ್ನು ನಾವು ಗಮನಿಸಬಹುದು.  

Trending News