ದೆಹಲಿಯಲ್ಲಿ ರೈತರ ಪ್ರತಿಭಟನೆ, ಇಂಡಿಯಾ ಗೇಟ್‌ ಬಳಿ ಟ್ರಾಕ್ಟರ್‌ಗೆ ಬೆಂಕಿ

ರೈತ ಮಸೂದೆಯನ್ನು ವಿರೋಧಿಸಿ ಪಂಜಾಬ್ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಇಂಡಿಯಾ ಗೇಟ್ ಬಳಿ ರಾಜ್‌ಪಾತ್ ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದರು.  

Last Updated : Sep 28, 2020, 10:25 AM IST
  • ಪ್ರತಿಭಟನಾಕಾರರು ಟ್ರಕ್‌ನಿಂದ ಟ್ರ್ಯಾಕ್ಟರ್ ತಂದು ಇಂಡಿಯಾ ಗೇಟ್ ಬಳಿ ಬೆಂಕಿ ಹಚ್ಚಿದರು ಎನ್ನಲಾಗಿದೆ.
  • ಉಪ ಪೊಲೀಸ್ ಆಯುಕ್ತ (ನವದೆಹಲಿ) ಇಶ್ ಸಿಂಘಾಲ್ ಮಾತನಾಡಿ ಸುಮಾರು 15-20 ಜನರು ಬೆಳಿಗ್ಗೆ 7.15 ರಿಂದ 7.30 ರ ನಡುವೆ ಜಮಾಯಿಸಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ರೈತರ ಪ್ರತಿಭಟನೆ, ಇಂಡಿಯಾ ಗೇಟ್‌ ಬಳಿ ಟ್ರಾಕ್ಟರ್‌ಗೆ ಬೆಂಕಿ title=

ನವದೆಹಲಿ: ಒಂದೆಡೆ ಭೂಸುಧಾರಣೆ ಕಾಯ್ದೆಯನ್ನು ಭೂಸ್ವಾಧೀನ ಕಾಯ್ದೆಯನ್ನಾಗಿ ಪರಿವರ್ತಿಸಿರುವ (Land reform act ammendment) ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಬಿಜೆಪಿ ಸರ್ಕಾರದ ರೈತ ವಿರೋಧಿ ಧೋರಣೆಗಳ ವಿರುದ್ಧ ಇಂದು ರಾಜ್ಯದ ರೈತ ಹಾಗೂ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ (Karnataka Bandh)ಗೆ ಕರೆ ನೀಡಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ ಕೃಷಿ ಮಸೂದೆಗೆ ರೈತರ ವಿರೋಧ ಇನ್ನೂ ನಡೆಯುತ್ತಿದೆ. ದೆಹಲಿಯಲ್ಲಿ ರೈತರು ಪ್ರತಿಭಟನೆ (Farmers Protest) ನಡೆಸುತ್ತಿದ್ದಾರೆ. ರೈತ ಮಸೂದೆಯನ್ನು ವಿರೋಧಿಸಿ ಪಂಜಾಬ್ ಯೂತ್ ಕಾಂಗ್ರೆಸ್ (Punjab Youth Congress) ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಇಂಡಿಯಾ ಗೇಟ್ (India Gate) ಬಳಿ ರಾಜ್‌ಪಾತ್ ನಲ್ಲಿ ಮತ್ತು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿ ಹಚ್ಚಿದ ಜನರನ್ನು ಗುರುತಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲಾ ಜನರು ಭಗತ್ ಸಿಂಗ್ ಅವರ ಪೋಸ್ಟರ್ಗಳನ್ನು ತಮ್ಮ ಕೈಯಲ್ಲಿ ತಂದಿದ್ದರು. ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಡ ಎತ್ತಿದರು. ಪ್ರತಿಭಟನಾಕಾರರು ಟ್ರಕ್‌ನಿಂದ ಟ್ರ್ಯಾಕ್ಟರ್ ತಂದು ಇಂಡಿಯಾ ಗೇಟ್ ಬಳಿ ಬೆಂಕಿ ಹಚ್ಚಿದರು ಎನ್ನಲಾಗಿದೆ.

ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್, ಬೆಂಗಳೂರಿನಲ್ಲಿ ಬಿಗಿ ಭದ್ರತೆ

ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ ಅವರು ಬೆಳಿಗ್ಗೆ 7.42ಕ್ಕೆ ಘಟನೆಯ ಬಗ್ಗೆ ಮಾಹಿತಿ ಪಡೆದರು ಮತ್ತು ಎರಡು ಅಗ್ನಿಶಾಮಕ ಎಂಜಿನ್ಗಳನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿದೆ. ಉಪ ಪೊಲೀಸ್ ಆಯುಕ್ತ (ನವದೆಹಲಿ) ಇಶ್ ಸಿಂಘಾಲ್ ಮಾತನಾಡಿ, 'ಸುಮಾರು 15-20 ಜನರು ಬೆಳಿಗ್ಗೆ 7.15 ರಿಂದ 7.30 ರ ನಡುವೆ ಜಮಾಯಿಸಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಬೆಂಕಿಯನ್ನು ನಂದಿಸಲಾಗಿದ್ದು, ಅಲ್ಲಿಂದ ಟ್ರ್ಯಾಕ್ಟರ್ ತೆಗೆಯಲಾಗಿದೆ ಎಂದಿದ್ದಾರೆ.

ಎಪಿಎಂಸಿ ಕಾಯ್ದೆ ಮೂಲಕ ಸರ್ಕಾರ ರೈತರನ್ನು ಬಂಡವಾಳಶಾಹಿಗಳ ಗುಲಾಮರನ್ನಾಗಿ ಮಾಡುತ್ತಿದೆ-ಸಿದ್ದರಾಮಯ್ಯ

ಪ್ರಕರಣದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಘಟನೆಯಲ್ಲಿ ಭಾಗಿಯಾಗಿರುವ ಜನರನ್ನು ಸಹ ಗುರುತಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಬಿಗಿ ಭದ್ರತೆಯ ನಡುವೆಯೂ ಟ್ರ್ಯಾಕ್ಟರ್ ತಂದು ಬೆಂಕಿಗೆ ಆಹುತಿಯಾಗಿರುವುದನ್ನು ಗಮನಿಸಿದರೆ ಎಲ್ಲೋ ದೊಡ್ಡ ಭದ್ರತೆಯ ಬಗ್ಗೆಯೇ ಪ್ರಶ್ನೆ ಹುಟ್ಟುವಂತಿದೆ.

Trending News