ನವದೆಹಲಿ: Finance Ministry Big Announcement - ಕೊರೊನಾ (Coronavirus) ಕಾಲದಲ್ಲಿ ತೆರಿಗೆ ಪಾವತಿದಾರರಿಗೆ (Tax Payers) ಭಾರಿ ನೆಮ್ಮದಿ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ (Finance Ministry) ಶುಕ್ರವಾರ ಹಲವು ದೊಡ್ಡ ಘೋಷಣೆಗಳನ್ನು ಮಾಡಿದೆ. ಇವುಗಳಲ್ಲಿ ಬಹುತೇಕ ವಿನಾಯ್ತಿಗಳು ಕೊರೊನಾ ಸಂಕಷ್ಟದಲ್ಲಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ನೀಡಲಾಗಿದೆ. ಹಾಗಾದರೆ ಬನ್ನಿ ಈ ಘೋಷಣೆಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ಎಂಪ್ಲಾಯರ್ ನಿಂದ ದೊರೆತ ಸಹಾಯಕ್ಕೆ ತೆರಿಗೆ ವಿನಾಯ್ತಿ
ಕೊರೊನಾ ಚಿಕಿತ್ಸೆಗಾಗಿ ದೊರೆತ ಹಣದ ಮೇಲೂ ಕೂಡ ತೆರಿಗೆ ವಿನಾಯ್ತಿ ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಂದ್ರ ಹಣಕಾಸು ಖಾತೆಯ (Central Government) ರಾಜ್ಯ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಹೀಗಿರುವಾಗ ಯಾವುದೇ ಓರ್ವ ಕಂಪನಿಯ ಮಾಲೀಕರು ಅಥವಾ ಹಿತಚಿಂತಕರು ತಮ್ಮ ಕಂಪನಿಯ ನೌಕರ ಅಥವಾ ಆಪ್ತರ ಮೇಲೆ ಮಾಡುವ ಕೊರೊನಾ ವೆಚ್ಚವನ್ನು ಆದಾಯ ತೆರಿಗೆಯ (Income TAx) ಪರಿಧಿಗೆ ಸೇರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಸರಳ ಭಾಷೆಯಲ್ಲಿ ಹೇಳುವುದಾದರೆ, ಸಹಾಯದ ರೂಪದಲ್ಲಿ ದೊರೆತ ಹಣ ಸಂಪೂರ್ಣ ತೆರಿಗೆ ಮುಕ್ತವಾಗಿರಲಿದೆ.
Important announcements related to @IncomeTaxIndia
✅We are announcing impt measures related to Tax Concessions for Payment towards COVID Treatment/Death.
✅Easing of IT Compliance Burden during COVID.
✅And additional Relief Measures for Income Tax Payers have been taken. pic.twitter.com/NxqsOJRa0Y
— Anurag Thakur (@ianuragthakur) June 25, 2021
ಇದನ್ನೂ ಓದಿ- PAN-Aadhaar Linking Deadline Extended: Aadhaar-PAN ಜೋಡಣೆಯ ಗಡುವು ಮೂರು ತಿಂಗಳುಗಳವರೆಗೆ ವಿಸ್ತರಣೆ
10 ಲಕ್ಷ ರೂ.ಗಳವರೆಗಿನ ಎಕ್ಸ್ ಗ್ರೆಶಿಯಾ ಟ್ಯಾಕ್ಸ್ ಫ್ರೀ ಆಗಿರಲಿದೆ (New Tax Relaxation)
ಇದರ ಜೊತೆಗೆ ಕೊವಿಡ್-19 (Covid-19) ನಿಂದಾಗಿರುವ ಸಾವಿನ ಬಳಿಕ ಕುಟುಂಬ ಸದಸ್ಯರಿಗೆ ಸಿಗುವ ಆರ್ಥಿಕ ನೆರವಿನ ಮೇಲೂ ಕೂಡ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ. ಇನ್ನೊಂದೆಡೆ ಎಕ್ಸ್ ಗ್ರೆಶಿಯ ಪಾವತಿಗಾಗಿ ಇದ್ದ ಮಿತಿನನ್ನು 10 ಲಕ್ಷ ರೂ.ಗಳಿಗೆ ವಿಸ್ತರಿಸಲಾಗಿದೆ. ಈ ಎಲ್ಲಾ ವಿನಾಯ್ತಿಗಳು ಆರ್ಥಿಕ ವರ್ಷ 2019 ಹಾಗೂ ಅದರ ನಂತರದ ವರ್ಷಕ್ಕೆ ಅನ್ವಯಿಸಲಿವೆ. ಈ ಕುರಿತು ಹೇಳಿಕೆ ನೀಡಿರುವ ಅನುರಾಗ್ ಠಾಕೂರ್, ಹಲವು ಪ್ರಕರಣಗಳಲ್ಲಿ ಸಮಯದ ಮಿತಿ ಮೀರಿ ಕೂಡ ನೆರವು ಒದಗಿಸಲು ಪ್ರಯತ್ನಿಸಲಾಗುವುದು ಎಂದಿದ್ದಾರೆ. ಇದಲ್ಲದೆ ಪ್ಯಾನ್-ಆಧಾರ್ ಲಿಂಕಿಂಗ್ ಡೆಡ್ ಲೈನ್ ಕೂಡ ಸೆಪ್ಟೆಂಬರ್ 30ಕ್ಕೆ ವಿಸ್ತರಣೆಯಾಗಿದೆ.
ಇದನ್ನೂ ಓದಿ-Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ
ಇಲ್ಲಿಯೂ ಕೂಡ ವಿನಾಯ್ತಿ ಸಿಗಲಿದೆ
>>ವಿವಾದದಿಂದ ವಿಶ್ವಾಸ ಯೋಜನೆಯಡಿ ಆಗಸ್ಟ್ 31ರವರೆಗೆ ಯಾವುದೇ ಬಡ್ಡಿ ಇಲ್ಲ.
>>ಸ್ಕೀಮ್ ಅಡಿ ಬಡ್ಡಿ ಸಹಿತ ಹಣಪಾವತಿ ಅಕ್ಟೋಬರ್ 31ರ ವರೆಗೆ ಸಾಧ್ಯ.
>>ಅಸ್ಸೆಸ್ಮೆಂಟ್, ಪೆನಾಲ್ಟಿ ಆರ್ಡರ್ ಅವಧಿ ಸೆಪ್ಟೆಂಬರ್ 30ರವರೆಗೆ ವಿಸ್ತರಣೆ.
>>TDS ಜಾರಿಗೊಳಿಸಲು, ವಿದೇಶಿ ರೆಮಿಟೆನ್ಸ್ ಅವಧಿಯಲ್ಲಿ 15 ದಿನ ವಿಸ್ತರಣೆ.
>> ಟ್ರಸ್ಟ್ ರಿಜಿಸ್ಟರ್ ಮಾಡುವ ಅವಧಿಯಲ್ಲಿಯೂ ಕೂಡ ನೆಮ್ಮದಿ ಒದಗಿಸಲಾಗಿದೆ.
>> ಇಕ್ವಿಲೈಸೆಶನ್ ಲೆವಿ ಫಾರ್ಮ್ ಸಲ್ಲಿಸಲು ಆಗಸ್ಟ್ 31ರವರೆಗೆ ಅವಕಾಶ.
>>DRPಗೆ ಆಬ್ಜೆಕ್ಷನ್ ಸಲ್ಲಿಸಲು ಆಗಸ್ಟ್ 31ರವರೆಗೆ ಅವಕಾಶ
>> ಜುಲೈ 31ರವರೆಗೆ ಸೆಟಲ್ಮೆಂಟ್ ಕಮಿಷನ್ ನಿಂದ ಪ್ರಕರಣವನ್ನು ಹಿಂಪಡೆಯಬಹುದು.
ಇದನ್ನೂ ಓದಿ- Delta+ ರೂಪಾಂತರಿಯಿಂದ ಮಹಾರಾಷ್ಟ್ರದಲ್ಲಿ ಮೊದಲ ಸಾವು, ದೃಢಪಡಿಸಿದ ರಾಜ್ಯ ಆರೋಗ್ಯ ಸಚಿವ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.