ಚೆನ್ನೈನ ಬಿಎಸ್ಎನ್ಎಲ್ ಎಕ್ಸ್‌ಚೆಂಜ್ ಕೇಂದ್ರದಲ್ಲಿ ಬೆಂಕಿ, ಸಂಪರ್ಕ ಸ್ಥಗಿತ

ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Updated: Aug 1, 2019 , 06:59 PM IST
ಚೆನ್ನೈನ ಬಿಎಸ್ಎನ್ಎಲ್ ಎಕ್ಸ್‌ಚೆಂಜ್ ಕೇಂದ್ರದಲ್ಲಿ ಬೆಂಕಿ, ಸಂಪರ್ಕ ಸ್ಥಗಿತ

ಚೆನ್ನೈ: ಇಲ್ಲಿನ ಬಿಎಸ್ಎನ್ಎಲ್ ನ ಹಾರ್ಬರ್ ಟೆಲಿಫೋನ್ ಎಕ್ಸ್ಚೇಂಜ್ನಲ್ಲಿ ಗುರುವಾರ ಸಂಭವಿಸಿದ ಬೆಂಕಿ ಅನಾಹುತದಿಂದಾಗಿ ಪ್ರದೇಶದಲ್ಲಿ ಮೊಬೈಲ್, ಲ್ಯಾಂಡ್ಲೈನ್ ಮತ್ತು ಬ್ರಾಡ್ಬ್ಯಾಂಡ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ಸರ್ಕಾರಿ ದೂರಸಂಪರ್ಕ ಕಂಪನಿ ತಿಳಿಸಿದೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಕಂಪನಿಯು, ಈಗಾಗಲೇ ಸ್ಥಗಿತ ಗೊಂಡಿರುವ ಸಂಪರ್ಕದ ದುರಸ್ತಿ ಕಾರ್ಯಾಚರಣೆ ಆರಂಭಿಸಲಾಗಿದ್ದು, ಸೇವೆಗಳನ್ನು ಪುನರಾರಂಭಿಸಲು ಒಂದು ವಾರದ ಸಮಯ ಬೇಕಾಗಲಿದೆ ಎಂದು ತಿಳಿಸಿದೆ. 

ಈ ಎಕ್ಸ್ಚೇಂಜ್ 35,000 ಸಾಮರ್ಥ್ಯವನ್ನು ಹೊಂದಿದ್ದು, 29,000 ವರ್ಕಿಂಗ್ ಲೈನ್‌ಗಳು ಮತ್ತು 3,000 ಬ್ರಾಡ್‌ಬ್ಯಾಂಡ್ ಸಂಪರ್ಕಗಳನ್ನು ಹೊಂದಿದೆ.

ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ತಿಳಿದುಬಂದಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.