ಜಮ್ಮು: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಯ ಇಂದಿನಿಂದ ಆರಂಭವಾಗಲಿದೆ. ವಾರ್ಷಿಕ ಅಮರನಾಥ ಯಾತ್ರೆಯ ಮೊದಲ ಬ್ಯಾಚ್ ಯಾತ್ರಿಕರು ಜಮ್ಮುವಿನ ಭಗವಂತನಗರದಲ್ಲಿನ ಶಿಬಿರದಿಂದ ಇಂದು ಯಾತ್ರೆ ಆರಂಭಿಸಲಿದ್ದಾರೆ.
ಅಮರನಾಥ ಯಾತ್ರೆಯ ಮೊದಲ ತಂಡ ಇಂದು ಜಮ್ಮುವಿನ ಭಗವಂತನಗರದಲ್ಲಿನ ಶಿಬಿರದಿಂದ ಜಮ್ಮು-ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣ್ಯಮ್, ರಾಜ್ಯಪಾಲರ ಸಲಹೆಗಾರರಾದ ವಿಜಯ್ ಕುಮಾರ್ ಹಾಗೂ ಬಿ ಬಿ ವ್ಯಾಸ್ ಫ್ಲಾಗ್ ಆಫ್ ಮಾಡಿರುವುದಾಗಿ ಸುದ್ದಿಸಂಸ್ಥೆ ANI ವರದಿ ಮಾಡಿದೆ.
First batch of Amarnath Yatra has been flagged off from Jammu base camp. It was flagged off today by BVR Subramanyam, Chief secretary J&K, BB Vyas Advisor to J&K Governor & Vijay Kumar, Advisor to J&K Governor. pic.twitter.com/djW5DdSX7f
— ANI (@ANI) June 26, 2018
ಅಮರನಾಥ್ ಯಾತ್ರೆಯು ಅತ್ಯಂತ ಮಹತ್ವದ ವಾರ್ಷಿಕ ಘಟನೆಯಾಗಿದೆ. ಸಾರ್ವಜನಿಕರ ಸಹಕಾರ, ಎಲ್ಲಾ ಭದ್ರತಾ ಸಂಸ್ಥೆಗಳು ಮತ್ತು ಅಭಿವೃದ್ಧಿ ಸಂಸ್ಥೆಗಳು, ನಾವು ಯೋಜನೆಯನ್ನು ಜಾಗದಲ್ಲಿ ಇರಿಸಿದ್ದೇವೆ ಮತ್ತು ಯಾತ್ರಿಗಳ ಕಳವಳಗಳನ್ನು ಪರಿಹರಿಸಲು ಮತ್ತು ಸಂಚಾರದ ಸುಗಮ ಹರಿವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂದು ಜಮ್ಮು-ಕಾಶ್ಮೀರ ರಾಜ್ಯಪಾಲರ ಸಲಹೆಗಾರರಾದ ವಿಜಯ್ ಕುಮಾರ್ ಹೇಳಿದ್ದಾರೆ.
Amarnath Yatra is a very significant annual event. With cooperation of public, all security agencies & development agencies we have put a scheme in place & are trying our best to address concerns of the yatris & ensure smooth flow of traffic: Vijay Kumar, Advisor to J&K Governor pic.twitter.com/BhlestnT7y
— ANI (@ANI) June 26, 2018
ದೇಶದ ವಿಭಿನ್ನ ಭಾಗಗಳಿಂದ ಯಾತ್ರಿಕರು ಕಾಶ್ಮೀರದ ಬಾಲ್ಟಾಲ್ ಮತ್ತು ಪಹಲ್ಗಾಮ್ನ ಅವಳಿ ಬೇಸ್ ಶಿಬಿರಕ್ಕೆ ತೆರಳುತ್ತಿದ್ದಾರೆ. ನಂತರ ನಾಳೆ(ಗುರುವಾರ) ಬೆಳಿಗ್ಗೆಯಿಂದ 3,880 ಮೀ. ಎತ್ತರದ ಅಮರನಾಥ ಗುಹೆ ದೇವಾಲಯಕ್ಕೆ ಭಕ್ತಾದಿಗಳು ತಮ್ಮ ಯಾತ್ರೆ ಆರಂಭಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶಿವನಿಗೆ ಮೀಸಲಾಗಿರುವ ಪವಿತ್ರ ಗುಹೆಯ ದೇವಾಲಯಕ್ಕೆ 60 ದಿನ ಯಾತ್ರಾ ಸ್ಥಳದಲ್ಲಿ ಯಾತ್ರಿಕರನ್ನು ರಕ್ಷಿಸಲು ಕೇಂದ್ರವು ಅಭೂತಪೂರ್ವ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದೆ. ಜೂನ್ 28 ರಿಂದ ಆರಂಭವಾಗಲಿರುವ ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಉಗ್ರರ ಭೀತಿಯಿಂದಾಗಿ ಕಟ್ಟೆಚ್ಚರ ವಹಿಸಿರುವ ಯಾತ್ರಿಕರಿಗೆ ಯಾವುದೇ ತೊಂದರೆಯುಂಟಾಗದಂತೆ ಎಚ್ಚರ ವಹಿಸಿದ್ದು, ಅಮರನಾಥ ಯಾತ್ರಿಕರನ್ನು ಹೊತ್ತೂಯ್ಯವ ವಾಹನಗಳು ಕಡ್ಡಾಯವಾಗಿ ರೆಡಿಯೋ ಫ್ರಿಕ್ವೆನ್ಸಿ(RF) ಟ್ಯಾಗ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದೆ. ಈ ಆರ್‌ಎಫ್ ಟ್ಯಾಗ್ ಜಂಟಿ ನಿಯಂತ್ರಣ ಕೊಠಡಿಯೊಂದಿಗೆ ಸಂಪರ್ಕ ಹೊಂದಿ ವಿವಿಧ ಭದ್ರತಾ ಪಡೆಗಳೊಂದಿಗೆ ಸಮನ್ವಯತೆ ಸಾಧಿಸಲು ನೆರವಾಗಲಿದೆ. ಇದರಿಂದ ಯಾತ್ರಿಗಳಿರುವ ವಾಹನಗಳು ಯಾವುದೇ ತೊಂದರೆಗೆ ಸಿಲುಕಿದರೂ ಸುಲಭವಾಗಿ ಪತ್ತೆ ಹಚ್ಚಬಹುದಾಗಿದೆ. ಇಲ್ಲಿಯವರೆಗೆ, 1.5 ಲಕ್ಷ ಜನರು ಪ್ರಯಾಸಕರ ತೀರ್ಥಯಾತ್ರೆ ನಡೆಸಲು ನೋಂದಣಿ ಮಾಡಿದ್ದಾರೆ. ಒಟ್ಟು 2.60 ಲಕ್ಷ ಯಾತ್ರಿಕರು ಕಳೆದ ವರ್ಷ ಅಮರನಾಥ ಯಾತ್ರೆ ಕೈಗೊಂಡಿದ್ದರು.