ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಯವರ ಜನತಾ ಕರ್ಫ್ಯೂ (Janata curfew) ಕಲ್ಪನೆಗೆ ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ (P Chidambaram) ಮೆಚ್ಚುಗೆ ವ್ಯಕ್ತಪಡಿಸಿದ್ದು, ಲಾಕ್‌ಡೌನ್ ಘೋಷಿಸಿದ ದೇಶದ ಹಲವು ರಾಜ್ಯಗಳು ಮುಖ್ಯಮಂತ್ರಿಗಳನ್ನು ಶ್ಲಾಘಿಸಿದ್ದಾರೆ.
We must compliment the CMs for this bold step.
— P. Chidambaram (@PChidambaram_IN) March 22, 2020
We now look to the central government to announce the economic measures to deal with the consequences of COVID.
— P. Chidambaram (@PChidambaram_IN) March 22, 2020
ಪ್ರಧಾನಿ ಮೋದಿಯವರ ಜನತಾ ಕರ್ಫ್ಯೂ ಕಾರ್ಯಕ್ರಮವನ್ನು ಬೆಂಬಲಿಸಿದ ಅವರು, 'ಜನತಾ ಕರ್ಫ್ಯೂ ಮುಗಿದಿದೆ. ಇಂದಿನ ಅನುಭವವು ಅನೇಕ ಮುಖ್ಯಮಂತ್ರಿಗಳಿಗೆ ತಮ್ಮ ರಾಜ್ಯದ ಅನೇಕ ಭಾಗಗಳಲ್ಲಿ ಬೀಗಮುದ್ರೆ ಘೋಷಿಸಲು ಪ್ರೇರಣೆ ನೀಡಿದೆ.
'ಈ ದಿಟ್ಟ ಹೆಜ್ಜೆಗಾಗಿ ನಾವು ಮುಖ್ಯಮಂತ್ರಿಗಳನ್ನು ಹೊಗಳಬೇಕು. ಕರೋನವೈರಸ್ (Coronavirus) ಅಂದರೆ COVID 19 ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರ ಆರ್ಥಿಕ ಕ್ರಮಗಳನ್ನು ಘೋಷಿಸುವುದನ್ನು ನಾವು ಈಗ ಎದುರು ನೋಡುತ್ತೇವೆ' ಎಂದು ಚಿದಂಬರಂ ತಿಳಿಸಿದ್ದಾರೆ.
As desired by the PM, I am observing Janata Curfew strictly.
— P. Chidambaram (@PChidambaram_IN) March 22, 2020
ಇದಕ್ಕೂ ಮುನ್ನ ಭಾನುವಾರ ಬೆಳಿಗ್ಗೆ ಅವರು ಸಾರ್ವಜನಿಕ ಕರ್ಫ್ಯೂ (Janata curfew)ಗೆ ಬೆಂಬಲ ನೀಡುವುದಾಗಿ ಟ್ವೀಟ್ ಮಾಡಿದ್ದರು.