ದೀಪಾವಳಿ ಶುಭಾಶಯ ಕೋರಿ ಮೃತಪಟ್ಟ ಪಂಜಾಬ್‌ನ ಮಾಜಿ ಬಿಜೆಪಿ ಮುಖ್ಯಸ್ಥ

ಪಂಜಾಬ್‌ನ ಮಾಜಿ ಬಿಜೆಪಿ ಮುಖ್ಯಸ್ಥ ಕಮಲ್ ಶರ್ಮಾ ಅವರು ಭಾನುವಾರ ಫಿರೋಜ್‌ಪುರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

Last Updated : Oct 27, 2019, 12:47 PM IST
ದೀಪಾವಳಿ ಶುಭಾಶಯ ಕೋರಿ ಮೃತಪಟ್ಟ ಪಂಜಾಬ್‌ನ ಮಾಜಿ ಬಿಜೆಪಿ ಮುಖ್ಯಸ್ಥ title=
file photo

ನವದೆಹಲಿ: ಪಂಜಾಬ್‌ನ ಮಾಜಿ ಬಿಜೆಪಿ ಮುಖ್ಯಸ್ಥ ಕಮಲ್ ಶರ್ಮಾ ಅವರು ಭಾನುವಾರ ಫಿರೋಜ್‌ಪುರ ನಗರದಲ್ಲಿ ಹೃದಯಾಘಾತದಿಂದ ನಿಧನರಾದರು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಸಾವಿಗೆ ಒಂದು ಗಂಟೆ ಮೊದಲು ದೀಪಾವಳಿ ಹಬ್ಬದ ಪ್ರಯುಕ್ತ ಫೇಸ್‌ಬುಕ್ ಪೋಸ್ಟ್‌ನಲ್ಲಿ ಶುಭಾಶಯ ಕೋರಿದ್ದಾರೆ. ಉದ್ಯಾನವನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದೆ ನೋವು ಕಾಣಿಸಿಕೊಂಡು ಏಕಾಏಕಿ ಕುಸಿದುಬಿದ್ದರು ಎನ್ನಲಾಗಿದೆ.

ತದನಂತರ ಕಮಲ್ ಶರ್ಮಾ ಅವರನ್ನು ಹತ್ತಿರದ ಅಸ್ಪತ್ರೆಗೆ ದಾಖಲಿಸಿದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಹೆಂಡತಿ ಮತ್ತು ಇಬ್ಬರು ಮಕ್ಕಳಿದ್ದಾರೆ. 

Trending News