ರಾಜಸ್ಥಾನ: ಕೊಳದಲ್ಲಿ ಮುಳುಗಿ ನಾಲ್ವರು ಬಾಲಕರ ಸಾವು

ಶುಕ್ರವಾರದಂದು ರಾಜಸ್ಥಾನದ ಕರೌಲಿ ಜಿಲ್ಲೆಯ ಸಂಕ್ದಿ ಗ್ರಾಮದಲ್ಲಿ ನಾಲ್ವರು ಬಾಲಕರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Last Updated : Jun 1, 2019, 04:54 PM IST
 ರಾಜಸ್ಥಾನ: ಕೊಳದಲ್ಲಿ ಮುಳುಗಿ ನಾಲ್ವರು ಬಾಲಕರ ಸಾವು  title=
ಸಾಂದರ್ಭಿಕ ಚಿತ್ರ

ಜೈಪುರ್: ಶುಕ್ರವಾರದಂದು ರಾಜಸ್ಥಾನದ ಕರೌಲಿ ಜಿಲ್ಲೆಯ ಸಂಕ್ದಿ ಗ್ರಾಮದಲ್ಲಿ ನಾಲ್ವರು ಬಾಲಕರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈಗ ಈ ದುರ್ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಪೊಲೀಸರು "ಮಕ್ಕಳು ಜಾನುವಾರುಗಳನ್ನು ಸಾಯಂಕಾಲ ತೆಗೆದುಕೊಂಡು ಕೊಳದಲ್ಲಿ ಸ್ನಾನ ಮಾಡಿದರು, ದನಕರುಗಳು ಮರಳಿದವು ಆದರೆ  ಬಾಲಕರು ಕಾಣೆಯಾದರು" ಎಂದು ಹೇಳಿದ್ದಾರೆ.

ಶನಿವಾರದಂದು ಆ ಬಾಲಕರ ಶವಪರೀಕ್ಷೆ  ನಂತರ ಮೃತದೇಹಗಳನ್ನು ಅವರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

Trending News