ಕರ್ನಾಲ್‌ನಲ್ಲಿ ನಾಲ್ವರು ಭಯೋತ್ಪಾದಕರ ಬಂಧನ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಂಟೈನರ್ ವಶ

Terrorist caught from Karnal: ಶಂಕಿತರಿಂದ ಭಾರೀ ಪ್ರಮಾಣದ ಬುಲೆಟ್‌ಗಳು ಮತ್ತು ಮದ್ದುಗುಂಡುಗಳಿದ್ದ ಕಂಟೈನರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಂಟೈನರ್‌ನಲ್ಲಿ ಪತ್ತೆಯಾಗಿರುವ ವಸ್ತು ಆರ್‌ಡಿಎಕ್ಸ್ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Written by - Ranjitha R K | Last Updated : May 5, 2022, 01:32 PM IST
  • ನಾಲ್ವರು ಶಂಕಿತ ಉಗ್ರರರ ಬಂಧನ
  • ಮದ್ದುಗುಂಡುಗಳಿದ್ದ ಕಂಟೈನರ್ ವಶ
  • ಬಂಧಿತರ ಗುರುತು ಪತ್ತೆ
ಕರ್ನಾಲ್‌ನಲ್ಲಿ ನಾಲ್ವರು ಭಯೋತ್ಪಾದಕರ ಬಂಧನ, ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಕಂಟೈನರ್ ವಶ title=
Terrorist caught from Karnal (photo zee)

ನವದೆಹಲಿ : Terrorist caught from Karnal: ಹರ್ಯಾಣದ ಕರ್ನಾಲ್ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ನಾಲ್ವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಈ ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸ್ ತಂಡ ವಶಪಡಿಸಿಕೊಂಡಿದೆ. ಈ ವಿಷಯ ಬಹಿರಂಗಗೊಳ್ಳುತ್ತಿದ್ದಂತೆಯೇ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. 

ಮದ್ದುಗುಂಡುಗಳಿದ್ದ ಕಂಟೈನರ್ ವಶ : 
ಶಂಕಿತರಿಂದ ಭಾರೀ ಪ್ರಮಾಣದ ಬುಲೆಟ್‌ಗಳು ಮತ್ತು ಮದ್ದುಗುಂಡುಗಳಿದ್ದ ಕಂಟೈನರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಂಟೈನರ್‌ನಲ್ಲಿ ಪತ್ತೆಯಾಗಿರುವ ವಸ್ತು ಆರ್‌ಡಿಎಕ್ಸ್ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಗುಪ್ತಚರ ದಳಕ್ಕೆ ಈ ಬಗ್ಗೆ ಮೊದಲೇ ರಹಸ್ಯ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳು ಬಸ್ತಾರಾ ಟೋಲ್ ಪ್ಲಾಜಾ ಬಳಿ ನಾಕಾ ಹಾಕಿ ತಪಾಸಣೆಗಾಗಿ ವಾಹನವನ್ನು ತಡೆದಿದ್ದಾರೆ. ಈ ಸಂದರ್ಭದಲ್ಲಿ ಸ್ಪೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.  

ಇದನ್ನೂ ಓದಿ : 7th Pay Commission : ಕೇಂದ್ರ ನೌಕರರಿಗೆ ಭರ್ಜರಿ ಸಿಹಿ ಸುದ್ದಿ : ಮತ್ತೆ DA ಹೆಚ್ಚಳಕ್ಕೆ ಮುಂದಾದ ಸರ್ಕಾರ

ಬಂಧಿತರನ್ನು ಗುರುಪ್ರೀತ್ ಸಿಂಗ್, ಅಮನದೀಪ್, ಭೂಪೇಂದ್ರ ಮತ್ತು ಪರ್ಮಿಂದರ್ ಎಂದು ಗುರುತಿಸಲಾಗಿದೆ. ನಾಲ್ವರು ಶಂಕಿತರು ಪಂಜಾಬ್‌ನ ಫಿರೋಜ್‌ಪುರ ಮತ್ತು ಲುಧಿಯಾನ ನಿವಾಸಿಗಳು. ಇನ್ನೋವಾ ಕಾರಿನಲ್ಲಿ ತೆರಳುತ್ತಿರುವ ಈ ನಾಲ್ವರು ಭಯೋತ್ಪಾದಕರು ಪಂಜಾಬ್ ಕಡೆಯಿಂದ ಕರ್ನಾಲ್‌ಗೆ ಬರಲಿದ್ದಾರೆ ಎಂಬ ಮಾಹಿತಿ ಕರ್ನಾಲ್ ಪೊಲೀಸರಿಗೆ ಸಿಕ್ಕಿತ್ತು. ನಾಲ್ವರು ಭಯೋತ್ಪಾದಕರು ಯಾರ ಸೂಚನೆಯ ಮೇರೆಗೆ ಮತ್ತು ಎಲ್ಲಿ ಭಯೋತ್ಪಾದಕ ಕೃತ್ಯ ಎಸಗುವ ಯೋಜನೆ ರೂಪಿಸಿದ್ದರು ಎನ್ನುವುದನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಈ ಬಂಧಿತರಲ್ಲಿ ಮೂವರು ಫಿರೋಜ್‌ಪುರದ ನಿವಾಸಿಗಳು ಮತ್ತು ಒಬ್ಬ ಲುಧಿಯಾನ ನಿವಾಸಿ ಎನ್ನಲಾಗಿದೆ. ಮಾಹಿತಿಯ ಪ್ರಕಾರ, ಈ ಎಲ್ಲಾ ಶಂಕಿತರು ಭಯೋತ್ಪಾದಕ ಸಂಘಟನೆ ಬಬ್ಬರ್ ಖಾಲ್ಸಾದೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗಿದೆ.

 ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಆಗಮನ :
ಈ ಸಂಪೂರ್ಣ ತನಿಖೆಯ ಸಂದರ್ಭದಲ್ಲಿ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿತ್ತು. ಬಂಧಿತ ಭಯೋತ್ಪಾದಕರು ಯಾವುದೋ ದೊಡ್ಡ ಆತಂಕಕಾರಿ ಯೋಜನೆಯನ್ನು ಕಾರ್ಯಗತಗೊಳಿಸಲು ಹೊರಟಿದ್ದರು ಎಂದು ಶಂಕಿಸಲಾಗಿದೆ. ವಿಷಯ ಬಹಿರಂಗವಾಗುತ್ತಿದ್ದಂತೆಯೇ ಇಡೀ ನಗರದಲ್ಲಿ ಅಲರ್ಟ್‌ ಜಾರಿ ಮಾಡಲಾಗಿದೆ.  ಪೊಲೀಸ್ ಮತ್ತು ಆಡಳಿತದ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದಾರೆ.  

ಇದನ್ನೂ ಓದಿ : RBI : ಆರ್‌ಬಿಐ ರೆಪೋ ದರ ಶೇ.0.40 ಹೆಚ್ಚಳ : ಈಗ ಹೆಚ್ಚಾಗಲಿದೆ ನಿಮ್ಮ ಸಾಲದ EMI 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News