Ganesh Chaturthi 2021: ಗಣೇಶೋತ್ಸವ ಪ್ರಯುಕ್ತ 200 ವಿಶೇಷ ರೈಲು ಸೇವೆ

ಈ ವರ್ಷ ಸೆಪ್ಟೆಂಬರ್ 10 ರಿಂದ 11 ದಿನಗಳ ಕಾಲ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ.  

Written by - Puttaraj K Alur | Last Updated : Aug 30, 2021, 09:14 PM IST
  • ಗಣೇಶ ಚತುರ್ಥಿ ಪ್ರಯುಕ್ತ 200 ವಿಶೇಷ ರೈಲುಗಳ ಸಂಚಾರ ಆರಂಭಿಸಲು ಭಾರತೀಯ ರೈಲ್ವೆ ಇಲಾಖೆ ನಿರ್ಧಾರ
  • ಹಬ್ಬದ ಸಂದರ್ಭದಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ಮತ್ತು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮ
  • ಸೆಪ್ಟೆಂಬರ್ 11ರಿಂದ ದೇಶದಾದ್ಯಂತ 11 ದಿನಗಳ ಕಾಲ ನಡೆಯಲಿರುವ ಗಣೇಶ ಚತುರ್ಥಿ ಹಬ್ಬ
Ganesh Chaturthi 2021: ಗಣೇಶೋತ್ಸವ ಪ್ರಯುಕ್ತ 200 ವಿಶೇಷ ರೈಲು ಸೇವೆ title=
ಗಣೇಶೋತ್ಸವ ಪ್ರಯುಕ್ತ ವಿಶೇಷ ರೈಲು ಸೇವೆ (Photo Courtesy: @Zee News)

ನವದೆಹಲಿ: ಗಣೇಶ ಚತುರ್ಥಿಯ ಶುಭ ಸಮಾರಂಭವು ಸಮೀಪಿಸುತ್ತಿರುವ ಹಿನ್ನೆಲೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆ ಇಲಾಖೆ(Indian Railways) ಕ್ರಮ ಕೈಗೊಂಡಿದೆ. ಗಣೇಶೋತ್ಸವದ ಪ್ರಯುಕ್ತ ತಮ್ಮೂರಿಗೆ ತೆರಳುವ ಪ್ರಯಾಣಿಕರಿಗಾಗಿ 200  ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲು ನಿರ್ಧರಿಸಲಾಗಿದೆ.  

ಹೌದು, ಗಣೇಶ ಹಬ್ಬ(Ganesh Chaturthi 2021)ದ ಪ್ರಯುಕ್ತ ದೂರದ ಊರುಗಳಿಗೆ ತೆರಳುವವರಿಗೆ ಭಾರತೀಯ ರೈಲ್ವೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಈ ಕುರಿತು ಮಾಹಿತಿ ನೀಡಿರುವ ಇಲಾಖೆ, ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು 200 ವಿಶೇಷ ರೈಲುಗಳ ಸಂಚಾರ ಆರಂಭಿಸುವುದಾಗಿ ತಿಳಿಸಿದೆ. ಹಬ್ಬದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ತಪ್ಪಿಸಲು ಭಾರತೀಯ ರೈಲ್ವೆಯ ಕೇಂದ್ರ ರೈಲ್ವೆ (CR) ಮತ್ತು ಪಶ್ಚಿಮ ರೈಲ್ವೆ (WR) ಈ ಕ್ರಮ ತೆಗೆದುಕೊಂಡಿದೆ.

ಇದನ್ನೂ ಓದಿ: ಕೊರೊನಾ ನಿಯಮಗಳನ್ನು ಉಲ್ಲಂಘಿಸಿದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ವಿರುದ್ಧ ಪ್ರಕರಣ ದಾಖಲು

200 ವಿಶೇಷ ರೈಲುಗಳ ಪೈಕಿ ಕೇಂದ್ರ ರೈಲ್ವೆ(Central Railway) 175 ಟ್ರಿಪ್‌ಗಳನ್ನು ಓಡಿಸಿದರೆ, ಪಶ್ಚಿಮ ರೈಲ್ವೆ(Western Railway) 42 ಟ್ರಿಪ್‌ಗಳನ್ನು ಓಡಿಸಲಿದೆ. ಕಳೆದ ವಾರ ಕೇಂದ್ರ ರೈಲ್ವೆ ಸಚಿವಾಲಯವು ಮಹಾರಾಷ್ಟ್ರದ ಕೊಂಕಣ ಪ್ರದೇಶಕ್ಕೆ ಹೆಚ್ಚುವರಿ 63 ವಿಶೇಷ ರೈಲುಗಳನ್ನು ಓಡಿಸಲು ಅನುಮೋದನೆ ನೀಡಿದೆ ಎಂದು ವರದಿಯಾಗಿದೆ. ‘ಹಬ್ಬದ ಸಮಯದಲ್ಲಿ ಜನರ ಬೇಡಿಕೆಯನ್ನು ಪೂರೈಸಲು ನಾವು ಹೆಚ್ಚುವರಿ 63 ವಿಶೇಷ ರೈಲುಗಳನ್ನು ಒದಗಿಸಲು ನಿರ್ಧರಿಸಿದ್ದೇವೆ’ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ(Raosaheb Danve) ಹೇಳಿದ್ದಾರೆ.

ಈ ಹಿಂದೆ ಜುಲೈನಲ್ಲಿ ಭಾರತೀಯ ರೈಲ್ವೆ(Indian Railways) ಹಬ್ಬದ ಸಮಯದಲ್ಲಿ 72 ವಿಶೇಷ ರೈಲು ಸೇವೆಗಳನ್ನು ಘೋಷಿಸಿತ್ತು. ನಂತರ ಗಣೇಶ ಚತುರ್ಥಿಗಾಗಿ ಮುಂಬೈನಿಂದ ಕೊಂಕಣಕ್ಕೆ ಪ್ರಯಾಣಿಸುವ ಜನರಿಗೆ ಅನುಕೂಲ ಕಲ್ಪಿಸಲು ಕೊಂಕಣ ರೈಲ್ವೆ 40 ಹೆಚ್ಚುವರಿ ಟ್ರಿಪ್‌ಗಳನ್ನು ಆರಂಭಿಸುವುದಾಗಿ ದಾನ್ವೆ ಘೋಷಿಸಿದರು.

ಇದನ್ನೂ ಓದಿದೇಶಾದ್ಯಂತ ಟೊಮೆಟೊ ಬೆಲೆಯಲ್ಲಿ ಭಾರೀ ಕುಸಿತ: ಕೆಜಿಗೆ ಎಷ್ಟು ಗೊತ್ತಾ..?

ಈ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ(Ganesh Chaturthi)ಯನ್ನು ಸೆಪ್ಟೆಂಬರ್ 10 ರಂದು ಆಚರಿಸಲಾಗುತ್ತದೆ. ಈ 11 ದಿನಗಳ ಹಬ್ಬವು ಸೆಪ್ಟೆಂಬರ್ 21 ರಂದು ಕೊನೆಗೊಳ್ಳುತ್ತದೆ. ಮುಖ್ಯವಾಗಿ ಮಹಾರಾಷ್ಟ್ರ, ಗುಜರಾತ್, ಕರ್ನಾಟಕ(Karnataka) ಮತ್ತು ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಗಣೇಶ ಚತುರ್ಥಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಮನೆಗೆ ಗಣೇಶ ಮೂರ್ತಿ ತಂದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ವಿಸರ್ಜಿಸಲಾಗುತ್ತದೆ. ದೂರದೂರುಗಳಲ್ಲಿರುವ ಜನರು ಗಣೇಶ ಹಬ್ಬದಂದು ತಮ್ಮೂರಿಗೆ ತೆರಳುತ್ತಾರೆ. ಹೀಗಾಗಿ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News