ಪ್ರೀತಿಯಲ್ಲಿ ಮೋಸವಾಯಿತಂತೆ, ಪ್ರೇಯಸಿಯ ಫೋಟೋವನ್ನೇ ವೈರಲ್ ಮಾಡಿದ ಭೂಪ

Crime In Relationship: ಹುಚ್ಚು ಪ್ರೇಮಿ ತನ್ನ ಪ್ರೇಯಸಿಯ ಗೆಳತಿಯ ಹಳೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಹುಡುಗಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ  ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.

Written by - Ranjitha R K | Last Updated : Jul 12, 2023, 03:13 PM IST
  • ಮದುವೆಗೆ ನಿರಾಕರಿಸಿದ ಯುವತಿ
  • ಯುವಕನಿಂದ ಫೋಟೋ ವೈರಲ್
  • ಸ್ಟೇಷನ್ ಮೆಟ್ಟಿಲೇರಿದ ಯುವತಿ
ಪ್ರೀತಿಯಲ್ಲಿ ಮೋಸವಾಯಿತಂತೆ, ಪ್ರೇಯಸಿಯ ಫೋಟೋವನ್ನೇ ವೈರಲ್ ಮಾಡಿದ ಭೂಪ title=

Crime In Relationship : ಮೊದಲು ಪ್ರೇಮ ನಂತರ ವೈಮನಸ್ಯ ಇಂಥ ಸುದ್ದಿಗಳು ಪದೇ ಪದೇ ಕೇಳಲು ಸಿಗುತ್ತವೆ. ಎಷ್ಟೋ ಬಾರಿ ಇಬ್ಬರ ನಡುವೆ ಜಗಳ ಹೆಚ್ಚಾದಾಗ ವಿಷಯ ಪೋಲಿಸ್ ಸ್ಟೇಷನ್ ಮೆಟ್ಟಿಲೇರುತ್ತದೆ. ಇಲ್ಲೊಬ್ಬ ಹುಚ್ಚು ಪ್ರೇಮಿ ತನ್ನ ಪ್ರೇಯಸಿಯ ಹಳೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಹುಡುಗಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ  ಈ ರೀತಿ ಮಾಡಿದ್ದಾನೆ ಎನ್ನಲಾಗಿದೆ. ಅಲ್ಲದೆ ಆತನ  ಪ್ರೇಯಸಿ ಬೇರೆ ಮದುವೆಯಾಗಿದ್ದಾಳೆ ಎಂದು ಕೂಡಾ ಹೇಳಲಾಗಿದೆ.  

ಸ್ಟೇಷನ್ ಮೆಟ್ಟಿಲೇರಿದ ಯುವತಿ : 
ಈ ಪ್ರಕರಣ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ವರದಿಯಾಗಿದೆ. ಯುವತಿ  ಪೊಲೀಸರನ್ನು ಸಂಪರ್ಕಿಸಿ ತನಗಾದ ಅನ್ಯಾಯವನ್ನು ವಿವರಿಸಿದಾಗ ವಿಷಯ ಬೆಳಕಿಗೆ ಬಂದಿದೆ. ಈ ಎಲ್ಲಾ ಅಶ್ಲೀಲ ಫೋಟೋ ಗಳನ್ನೂ ಮೋಸದಿಂದ ಮಾಡಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಯುವಕನ ವಿರುದ್ಧ ಗೋರಖ್‌ಪುರ ಜಿಲ್ಲೆಯ ಗುಲ್ಹಾರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ :  West Bengal Panchayat Election 2023 Results: ಗ್ರಾಮ ಪಂಚಾಯಿತಿ ಸ್ಥಾನಗಳಲ್ಲಿ ಪ್ರಾಬಲ್ಯ ಮೆರೆದ ಟಿಎಂಸಿ

ಆಕ್ಷೇಪಾರ್ಹ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಕೂಡಾ ದೂರಲಾಗಿದೆ. ಸದ್ಯ ಸಂತ್ರಸ್ತೆಯ ದೂರಿನ ಮೇರೆಗೆ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದರೊಂದಿಗೆ ಪೊಲೀಸರು ಇದೀಗ ಆರೋಪಿ ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಯುವಕ ಸಮೀಪದ ಗ್ರಾಮದ ನಿವಾಸಿಯಾಗಿದ್ದಾನೆ. ಈ ಯುವತಿಯ ಮನೆ ಹುಡುಗನ ಅಜ್ಜಿ ಮನೆಯ ಸಮೀಪವಿತ್ತು. ಅಲ್ಲಿ ಇಬ್ಬರೂ ಭೇಟಿಯಾಗಿದ್ದು, ಫೋನ್‌ನಲ್ಲಿ ಮಾತುಕತೆ ಕೂಡಾ ಶುರುವಾಗಿತ್ತು. ಮದುವೆಯಾಗುವಂತೆ ಪ್ರೇಮಿ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಆದರೆ ಹುಡುಗಿ ಮದುವೆಯಾಗಲು ನಿರಾಕರಿಸಿ ಬೇರೆ ಮದುವೆಯಾಗಲು ನಿರ್ಧರಿಸಿದಾಗ ಯುವಕ ಬೇಸರಗೊಂಡಿದ್ದಾನೆ. ಸಂತ್ರಸ್ತೆಯ ಕೆಲವು ವೈಯಕ್ತಿಕ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾನೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಇದನ್ನೂ ಓದಿ :  Poverty in India: ದೇಶದ 41.5 ಕೋಟಿ ಜನರು 'ಬಡತನ'ದಿಂದ ಮುಕ್ತ- ವಿಶ್ವಸಂಸ್ಥೆ ವರದಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News