ನವದೆಹಲಿ: ಬಿಜೆಪಿ ಸರ್ಕಾರ ವಿ.ಡಿ.ಸಾವರ್ಕರ್ ನ್ನು ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡಿರುವ ಮಧ್ಯೆ, ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರಿಗೆ ನೀಡುವಂತೆ ಒತ್ತಾಯಿಸಿದ್ದಾರೆ.
ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ನಿರಂತರ ಪ್ರತಿರೋಧದಿಂದ ಇಡೀ ತಲೆಮಾರಿನ ದೇಶಭಕ್ತರಿಗೆ ಸ್ಫೂರ್ತಿ ನೀಡಿದ್ದಾರೆ ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
My letter to H’onble Prime Minister @narendramodi formally requesting him to accord Bharat Ratna to Shaheed-E-Azam’s Bhagat Singh, Rajguru & Sukhdev.Formally Confer the honorific of Shaheed-E-Azam on them & dedicate Chandigarh Airport located in Mohali in memory of Bhagat Singhji pic.twitter.com/PfqduZq8oi
— Manish Tewari (@ManishTewari) October 26, 2019
'ಶಹೀದ್ ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರು ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ನಿರಂತರವಾದ ಪ್ರತಿರೋಧದಿಂದ ಮತ್ತು ನಂತರ 1931 ರ ಮಾರ್ಚ್ 23 ರಂದು ಅವರ ಸರ್ವೋಚ್ಚ ತ್ಯಾಗದಿಂದ ಇಡೀ ಪೀಳಿಗೆಯ ದೇಶಭಕ್ತರಿಗೆ ಸ್ಫೂರ್ತಿ ನೀಡಿದರು ಎಂಬ ಅಂಶದ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ' ಎಂದು ಅಕ್ಟೋಬರ್ 25 ರಂದು ಬರೆದ ಪತ್ರದಲ್ಲಿ ಅವರು ಮನವಿ ಮಾಡಿದ್ದಾರೆ.
'2020 ರ ಜನವರಿ 26 ರಂದು ಈ ಮೂವರಿಗೂ ಭಾರತ ರತ್ನದ ಗೌರವವನ್ನು ನೀಡಿದರೆ. ಅವರಿಗೆ ಔಪಚಾರಿಕವಾಗಿ ಶಹೀದ್-ಇ-ಅಜಮ್ ಗೌರವವನ್ನು ನೀಡಿದ ಹಾಗೆ ಆಗುತ್ತದೆ. ಮೊಹಾಲಿಯಲ್ಲಿರುವ ಚಂಡೀಗಡ ವಿಮಾನ ನಿಲ್ದಾಣವನ್ನು ಶಹೀದ್-ಇ-ಅಜಮ್ ಭಗತ್ ಸಿಂಗ್ ವಿಮಾನ ನಿಲ್ದಾಣ, ಚಂಡೀಗಡ (ಮೊಹಾಲಿ) ಎಂದು ಹೆಸರಿಸಿ. ಇದರಿಂದಾಗಿ ಅದು 124 ಕೋಟಿ ಭಾರತೀಯರ ಹೃದಯ ಮತ್ತು ಆತ್ಮಗಳನ್ನು ಮುಟ್ಟುತ್ತದೆ' ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.