'ಯುಜಿಸಿ'ಯನ್ನು ರದ್ದುಪಡಿಸಲು ಹೊರಟ ಕೇಂದ್ರ ಸರ್ಕಾರ

     

Last Updated : Jun 27, 2018, 07:37 PM IST
'ಯುಜಿಸಿ'ಯನ್ನು ರದ್ದುಪಡಿಸಲು ಹೊರಟ ಕೇಂದ್ರ ಸರ್ಕಾರ title=
Photo courtesy: UGC

ನವದೆಹಲಿ: ಕೇಂದ್ರ ಸರ್ಕಾರ ಈಗ ಯುಜಿಸಿಯನ್ನು ರದ್ದುಗೊಳಿಸಿ ಅದರ ಬದಲಾಗಿ ಉನ್ನತ ಶಿಕ್ಷಣ ಆಯೋಗ ಸ್ಥಾಪಿಸುವ ಕ್ರಮಕ್ಕೆ ಮುಂದಾಗಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ  ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ಪ್ರಕಾಶ ಜಾವಡೆಕರ್ " ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ  ಉನ್ನತ ಶಿಕ್ಷಣದಲ್ಲಿ  ಸುಧಾರಣೆಯನ್ನು ತರುವ ನಿಟ್ಟಿನಲ್ಲಿ  ಯುಜಿಸಿ ಕಾಯ್ದೆಯನ್ನು ತಿದ್ದುಪಡಿ ಮಾಡಿ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಲು ಸಿದ್ದವಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಸರ್ಕಾರದ ಪ್ರಸ್ತಾಪದಂತೆ ನೂತನ ಕಾಯ್ದೆಯು "ಉನ್ನತ ಶಿಕ್ಷಣ ಆಯೋಗದ ಕಾಯ್ದೆ 2018' ಎಂದು ಹೆಸರಿಸಲಾಗಿದೆ.ಒಂದು ವೇಳೆ ಇದು ಜಾರಿಗೆ ಬಂದದ್ದೆ ಆದಲ್ಲಿ ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲಾವಣೆ ಮಾಡಿದಂತೆ ಈ ಬದಲಾವಣೆಯೂ ಆಗಲಿದೆ ಎಂದು ತಿಳಿದುಬಂದಿದೆ.ಆದ್ದರಿಂದ ಈಗ ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯವನ್ನು ಸರ್ಕಾರಕ್ಕೆ ಜುಲೈ 7 ರ ಒಳಗೆ ತಿಳಿಸಬೇಕು ಎಂದು ತಿಳಿಸಿದೆ.

ಸಧ್ಯ ಯುಜಿಸಿ ಎಲ್ಲ ವಿಶ್ವವಿಧ್ಯಾನಿಳಯಗಳಿಗೆ ಉನ್ನತ ಶಿಕ್ಷಣಕ್ಕಾಗಿ ಧನ ಸಹಾಯವನ್ನು ನೀಡುವ ಸಂಸ್ಥೆಯಾಗಿದೆ.

 

Trending News