ಗುಜರಾತ್ ಜನತೆ ಈ ಬಾರಿ ಎರಡು ಉತ್ತಮ ಕೆಲಸ ಮಾಡಿದ್ದಾರೆ: ಉತ್ತರ ಪ್ರದೇಶ ಸಿಎಂ ಯೋಗಿ

ಗುಜರಾತ್ನಲ್ಲಿ 182 ಸ್ಥಾನಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯಲಿದೆ.

Updated: Dec 12, 2017 , 12:32 PM IST
ಗುಜರಾತ್ ಜನತೆ ಈ ಬಾರಿ ಎರಡು ಉತ್ತಮ ಕೆಲಸ ಮಾಡಿದ್ದಾರೆ: ಉತ್ತರ ಪ್ರದೇಶ ಸಿಎಂ ಯೋಗಿ
Pic: ANI

ಬನಸ್ಕಾಂತ: ಗುಜರಾತ್ ಚುನಾವಣಾಯಲ್ಲಿ ಬಿಜೆಪಿಯ ಪ್ರಚಾರಕ್ಕೆ ಆಗಮಿಸಿದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, "ಈ ಚುನಾವಣೆಯಲ್ಲಿ ಗುಜರಾತ್ ಜನರು ಎರಡು ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಡಾ. ಮನಮೋಹನ್ ಸಿಂಗ್ ಅವರ ಬಾಯಿ ತೆರೆದರು ಮತ್ತು ಎರಡನೆಯದಾಗಿ ರಾಹುಲ್ ಗಾಂಧಿಯವರಿಗೆ ದೇವಸ್ಥಾನಕ್ಕೆ ಹೋಗುವುದನ್ನು ಕಲಿಸಿದರು ಎಂದು ಅಣಕಿಸಿದರು.

"ಇಲ್ಲಿಯ ತೊತ್ನ ಆಶ್ರಮಕ್ಕೆ ತೆರೆಳಿದ್ದ ಸಿಎಂ ಯೋಗಿ ಝೀ ನ್ಯೂಸ್ಗೆ ಮಾತನಾಡಿ ರಾಹುಲ್ ಗಾಂಧಿ ಅಧ್ಯಕ್ಷರಾಗುವ ಮೂಲಕ, ಬಿಜೆಪಿಯ ಗುರಿ ಸುಲಭವಾಯಿತು. ಈ ಬಾರಿಯ ಗುಜರಾತ್ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳಲ್ಲಿ ಬಿಜೆಪಿ 150 ಸ್ಥಾನಗಳನ್ನು ಪಡೆಯಲಿದೆ ಎಂದು ತಮ್ಮ ಆತ್ಮವಿಶ್ವಾಸ ವ್ಯಕ್ತಪಡಿಸಿದರು.