ನವದೆಹಲಿ: ಹರಿಯಾಣದ ಸೋನಿಪತ್ ಜಿಲ್ಲೆಯ ಕುಸ್ತಿ ಅಕಾಡೆಮಿಯಲ್ಲಿ ವಿಶ್ವವಿದ್ಯಾನಿಲಯ ಮಟ್ಟದ ಕುಸ್ತಿಪಟು ನಿಶಾ ದಹಿಯಾ ಮತ್ತು ಆಕೆಯ ಸಹೋದರನ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಲ್ಲಿನ ದ್ವಾರಕಾ (Dwarka) ದಿಂದ ಇಬ್ಬರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಇದನ್ನೂ ಓದಿ- ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಸಹೋದರನ ವಿರುದ್ಧ ಇಡಿಯಿಂದ ಸಮನ್ಸ್ ಜಾರಿ
ಆರೋಪಿಗಳನ್ನು ರೋಹ್ಟಕ್ ನಿವಾಸಿ ಪವನ್ ಬರಾಕ್ (25), ಕುಸ್ತಿ ಅಕಾಡೆಮಿಯ ತರಬೇತುದಾರ ಮತ್ತು ಸೋನಿಪತ್‌ನ ಸಚಿನ್ ದಹಿಯಾ (23) ಎಂದು ಗುರುತಿಸಲಾಗಿದೆ.ಬರಾಕ್ ಬಳಿಯಿದ್ದ ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ಅಕಾಡೆಮಿಯಲ್ಲಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದರಿಂದ ನಿಶಾ ದಹಿಯಾ ಮತ್ತು ಆಕೆಯ ಸಹೋದರ ಸೂರಜ್ ಸಾವನ್ನಪ್ಪಿದ್ದಾರೆ ಮತ್ತು ಅವರ ತಾಯಿ ಗಾಯಗೊಂಡಿದ್ದಾರೆ.ತಾಯಿಯನ್ನು ರೋಹ್ಟಕ್‌ನ ಪಿಜಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಸಚಿನ್ ದಹಿಯಾ ಈ ಹಿಂದೆ ಶಸ್ತ್ರಾಸ್ತ್ರ ಕಾಯ್ದೆಯಡಿ ಎರಡು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ವಿಶೇಷ ಕೋಶ) ಸಂಜೀವ್ ಕುಮಾರ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ-ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ನಿಶಾ ದಹಿಯಾ ವಿಶ್ವವಿದ್ಯಾನಿಲಯ ಮಟ್ಟದ ಕುಸ್ತಿಪಟುವಾಗಿದ್ದು, ಸುಶೀಲ್ ಕುಮಾರ್ ವ್ರೆಸ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದರು.ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಅವರೊಂದಿಗೆ ಅಕಾಡೆಮಿಗೆ ಯಾವುದೇ ಸಂಬಂಧವಿಲ್ಲ.ಸೋನಿಪತ್‌ನಲ್ಲಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ,ಅಕಾಡೆಮಿಯ ತರಬೇತುದಾರ ಪವನ್ ಬರಾಕ್ ಮತ್ತು ಇತರ ಕೆಲವು ವ್ಯಕ್ತಿಗಳು ಐದರಿಂದ ಆರು ಸುತ್ತಿನ ಗುಂಡುಗಳನ್ನು ಹಾರಿಸಿದ್ದಾರೆ.
ಇದನ್ನೂ ಓದಿ-ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ನಿಶಾಳ ಶವ ಅಕಾಡೆಮಿಯ ಗೇಟ್ ಬಳಿ ಬಿದ್ದಿದ್ದು, ಆಕೆಯ ಸಹೋದರನ ಶವ ಸುಮಾರು 100-200 ಮೀಟರ್ ದೂರದಲ್ಲಿದೆ.ಮೃತರು ಖಾರ್ಖೋಡಾ ಉಪವಿಭಾಗದ ಹಲಾಲ್‌ಪುರ ಗ್ರಾಮದವರು.ಈ ಘಟನೆಯಿಂದ ಕೋಪಗೊಂಡ ಹಲಾಲ್‌ಪುರ ಗ್ರಾಮಸ್ಥರು ಅಕಾಡೆಮಿಗೆ ಬೆಂಕಿ ಹಚ್ಚಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ