ಹಾಥರಸ್ ಪ್ರಕರಣ: ಪ್ರಕರಣದ ತನಿಖೆ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾ-ಸುಪ್ರೀಂ

ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದ ಹಥರಸ್ ಪ್ರಕರಣದಲ್ಲಿ (Hathras case) ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

Last Updated : Oct 27, 2020, 03:00 PM IST
ಹಾಥರಸ್ ಪ್ರಕರಣ: ಪ್ರಕರಣದ ತನಿಖೆ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾ-ಸುಪ್ರೀಂ title=

ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ಉತ್ತರ ಪ್ರದೇಶದ ಹಥರಸ್ ಪ್ರಕರಣದಲ್ಲಿ (Hathras case) ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.

ಸದ್ಯ ಪ್ರಕರಣದ ವಿಚಾರಣೆಯನ್ನು ಉತ್ತರ ಪ್ರದೇಶದಿಂದ ಬೇರೊಂದು ರಾಜ್ಯಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟ್ (Supreme Court) ನಿರಾಕರಿಸಿದೆ.ಪ್ರಕರಣದ ವಿಚಾರಣೆ ಮುಗಿದ ಬಳಿಕ ವಿಚಾರಣೆಯನ್ನು ಬೇರೊಂದು ರಾಜ್ಯಕ್ಕೆ ವರ್ಗಾಯಿಸುವ ಕುರಿತು ಯೋಚಿಸಬಹುದು ಎಂದು ಅದು ಹೇಳಿದೆ.ಈಗ ಅಲಹಾಬಾದ್ ಹೈಕೋರ್ಟ್ ಪ್ರಕರಣದ ತನಿಖೆ ಮೇಲೆ ನಿಗಾ ವಹಿಸಲಿದೆ ಎಂದು ಅದು ತಿಳಿಸಿದೆ.

Hathras Case: SP, DSP ಸೇರಿದಂತೆ 5 ಪೋಲೀಸ್ ಅಧಿಕಾರಿಗಳ ಸಸ್ಪೆಂಡ್, ಕಠಿಣ ಕ್ರಮ ಕೈಗೊಂಡ CM ಯೋಗಿ 

ಪ್ರಸ್ತುರ ಹಥರಸ್ ಪ್ರಕರಣದ ತನಿಖೆಯನ್ನು ಸಿಬಿಐ (CBI) ನಡೆಸುತ್ತಿದೆ.ಈ ಹಂತದಲ್ಲಿ ತಕ್ಷಣ ಪ್ರಕರಣದ ವರ್ಗಾವಣೆ ಅಗತ್ಯವಿಲ್ಲ. ಉಳಿದ ವಿಚಾರಗಳ ಬಗ್ಗೆ ಹೈಕೋರ್ಟ್ ತನ್ನ ಕಣ್ಗಾವಲು ಇಡಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.ಇದೇ ಸಂದರ್ಭದಲ್ಲಿ, ಉತ್ತರ ಪ್ರದೇಶ ಸರಕಾರ ಸಲ್ಲಿಸಿದ್ದ  ಪ್ರಮಾಣಪತ್ರವನ್ನು ಸುಪ್ರೀಂ ಕೋರ್ಟ್ ಸ್ವೀಕರಿಸಿತು. ಹಥರಸ್ ಸಂತ್ರಸ್ತೆಯ ಪರಿವಾರಕ್ಕೆ ನೀಡಲಾದ ಭದ್ರತೆಯ ಕುರಿತ ಮಾಹಿತಿ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಪ್ರಮಾಣಪತ್ರದಲ್ಲಿ ಕೇಳಿಕೊಳ್ಳಲಾಗಿತ್ತು.

ಮೋದಿ ಪ್ರಧಾನಿಯಾದ ಬಳಿಕ ದಲಿತ ಯುವತಿಯರ ಅತ್ಯಾಚಾರ-ಸಾವು ಹೆಚ್ಚಾಗಿದೆ: ಖರ್ಗೆ 

ಪ್ರಸ್ತುತ ಹೈಕೋರ್ಟ್ ಕಣ್ಗಾವಲಿನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟಿನ ಕಣ್ಗಾವಲಿನ (Supreme Court monitored probe) ಯಾವುದೇ ಅಗತ್ಯವಿಲ್ಲ.  ಈಗ ಕೂಡಾ ಪ್ರಕರಣದ ತನಿಖೆ ಮುಂದುವರಿದಿದೆ.  ಆರಂಭದ ಹಂತದಲ್ಲಿಯೇ ವಿಚಾರಣೆಯನ್ನು ದೆಹಲಿ ಅಥವಾ ಇತರ ಯಾವುದೇ ರಾಜ್ಯಕ್ಕೆ ವರ್ಗಾಯಿಸುವುದರ ಬಗ್ಗೆ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಸೆಪ್ಟೆಂಬರ್ 14 ರಂದು ಉತ್ತರ ಪ್ರದೇಶದ ಹಥರಸ್ ನಲ್ಲಿ ದಲಿತ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ (Hathras gang-rape)ನಡೆದಿದೆ ಎಂದು ಆರೋಪಿಸಲಾಗಿತ್ತು.  ಸೆಪ್ಟೆಂಬರ್ 19ರಂದು ಸಂತ್ರಸ್ತೆ ಸಾವನ್ನಪ್ಪಿದ್ದಳು. ಮೃತ ಯುವತಿಯ ಅಂತ್ಯ ಸಂಸ್ಕಾರವನ್ನು ಪೊಲೀಸರೇ ರಾತ್ರೋರಾತ್ರಿ ನೆರವೇರಿಸಿದ್ದು ಕೂಡಾ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಇವೆಲ್ಲದರ ಬಳಿಕ  ಪ್ರಕರಣ ಅಲಹಾಬಾದ್ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.  
 

Trending News