ಲಾಲೂ ಪ್ರಸಾದ್ ಜಾಮೀನು ಅರ್ಜಿ ವಿಚಾರಣೆ ಜುಲೈ 12ಕ್ಕೆ ಮುಂದೂಡಿಕೆ

ಜುಲೈ 12 ರಂದು ತಮ್ಮ ಪ್ರಕರಣವನ್ನು ಮಂಡಿಸುವಂತೆ ಲಾಲು ಪ್ರಸಾದ್ ಗೆ ನ್ಯಾಯಾಲಯ ತಿಳಿಸಿದೆ.

Last Updated : Jul 5, 2019, 07:23 PM IST
ಲಾಲೂ ಪ್ರಸಾದ್ ಜಾಮೀನು ಅರ್ಜಿ ವಿಚಾರಣೆ ಜುಲೈ 12ಕ್ಕೆ ಮುಂದೂಡಿಕೆ title=

ರಾಂಚಿ: ರಾಷ್ಟ್ರೀಯ ಜನತಾದಳ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಜುಲೈ 12 ಕ್ಕೆ ಮುಂದೂಡಿದೆ.

ಜೂನ್ 13 ರಂದು ಜಾರ್ಖಂಡ್ ಹೈಕೋರ್ಟ್ ನಲ್ಲಿ ಲಾಲೂ ಪ್ರಸಾದ್ ಯಾದವ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ .ಅಪ್ರೇಶ್ ಸಿಂಗ್ ಅವರು, ಜುಲೈ 12 ರಂದು ತಮ್ಮ ಪ್ರಕರಣವನ್ನು ಮಂಡಿಸುವಂತೆ ಲಾಲು ಪ್ರಸಾದ್ ಗೆ ಹೇಳಿದ್ದಾರೆ. ಏಪ್ರಿಲ್‌ನಲ್ಲಿ ಲಾಲೂ ಪ್ರಸಾದ್ ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು.

ಲಾಲೂ ಪ್ರಸಾದ್ ಯಾದವ್ ಅವರ ಜಾಮೀನು ಅರ್ಜಿಗೆ ಉತ್ತರವನ್ನು ಸಲ್ಲಿಸುವಂತೆ ಕಳೆದ ವಿಚಾರಣೆಯಲ್ಲಿ ನ್ಯಾಯಾಲಯವು ಸಿಬಿಐಗೆ ಸೂಚನೆ ನೀಡಿತ್ತು. ಅದರಂತೆ ಸಿಬಿಐ ಶುಕ್ರವಾರ ತನ್ನ ವರದಿಯನ್ನು ಸಲ್ಲಿಸಿದ್ದು, ಲಾಲು ಪ್ರಸಾದ್ ಯಾದವ್ ಗೆ ಜಾಮೀನು ನೀಡಿಕೆಯನ್ನು ವಿರೋಧಿಸಿದೆ ಎಂದು ಮೂಲಗಳು ತಿಳಿಸಿವೆ.

ಬಹುಕೋಟಿ ಮೇವು ಹಗರಣ ಪ್ರಕರಣಗಳಲ್ಲಿ ದೋಷಿಯಾಗಿರುವ ಲಾಲು ಪ್ರಸಾದ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸದ್ಯ ಅನಾರೋಗ್ಯದ ಕಾರಣದಿಂದ ರಾಂಚಿಯಲ್ಲಿರುವ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಲಾಲೂ ಪ್ರಸಾದ್ ಅವರನ್ನು ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Trending News