ಮುಂಬೈ: ವಾಣಿಜ್ಯನಗರಿ ಮುಂಬೈನಲ್ಲಿ ಎಡಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ರಸ್ತೆಗಳು ಜಲಾವೃತವಾಗಿವೆ. ಅಲ್ಲದೆ, ರೈಲು ಸಂಚಾರ ನಿಲುಗಡೆಯಾಗಿದೆ.
ನಲ್ಲಸೊಪಾರದ ರೈಲ್ವೆ ಹಳಿಗಳ ಮೇಲೆ ಹೆಚ್ಚು ನೀರು ನಿಂತಿರುವ ಕಾರಣ ಬೈಯಂದರ್-ವಿರಾರ್ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ ಗುರುವಾರದ ವರೆಗೂ ಜಡಿಮಳೆ ಮುಂದುವರಿಯಲಿದೆ. ನಿನ್ನೆ ರಾತ್ರಿಯಿಂದೀಚೆಗೆ ನಗರದಲ್ಲಿ 200 ಮೀಮೀ ಗೂ ಅಧಿಕ ಮಳೆಯಾಗಿರುವುದು ದಾಖಲಾಗಿದೆ.
Due to very high water levels on rly tracks at Nallasopara, traffic has been suspended between Bhayander-Virar due to which following long distance trains hv been cancelled/short terminated as on 10.7.18 pic.twitter.com/wDFizKjbfM
— Western Railway (@WesternRly) July 10, 2018
Mumbai: Waterlogging on Railway tracks of Sion station following heavy rainfall. #MumbaiRain pic.twitter.com/XKW8pjyAPU
— ANI (@ANI) July 10, 2018
ಥಾಣೆ ಮತ್ತು ಪಾಲ್ಘರ್ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಂತಿರುವುದರಿಂದ ಶಾಲೆಯನ್ನು ಮುಚ್ಚುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಲಾಗಿದೆ.
#WATCH High tide in Mumbai as heavy rain lashes the city #MumbaiRains pic.twitter.com/Cvvi459XSg
— ANI (@ANI) July 10, 2018
ಕೇಂದ್ರ ರೈಲ್ವೆಯ ಎಲ್ಲಾ ಮೂರು ವಲಯಗಳಲ್ಲಿ ರೈಲುಗಳು ಎಂದಿನಂತೆ ಸಹಜವಾಗಿ ಸಂಚರಿಸುತ್ತಿವೆ ಎಂದು ಕೇಂದ್ರ ರೈಲ್ವೆ ವಲಯ ಟ್ವೀಟ್ ಮಾಡಿದೆ. ಕಳೆದ ಮೂರು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದರೂ ಕೂಡ ನಾವು ಅನಿಯಮಿತ ಸೇವೆ ಸಲ್ಲಿಸುತ್ತಿದ್ದೇವೆ. ರೈಲ್ವೆ ಸಂಚಾರದ ಬಗ್ಗೆ ಜನರಿಂದ ಹಲವು ಮೆಸೇಜ್ ಗಳು, ಟ್ವೀಟ್ ಗಳು ಬರುತ್ತಿವೆ. ಕೇಂದ್ರ ರೈಲ್ವೆ ವಲಯದ ಮೇಲೆ ಜನರು ಇಟ್ಟಿರುವ ನಂಬಿಕೆ, ವಿಶ್ವಾಸ, ಬೆಂಬಲದಿಂದ ನಾವು ಆಭಾರಿಯಾಗಿದ್ದೇವೆ ಎಂದು ಟ್ವೀಟ್ ಮಾಡಿದೆ.
ಇನ್ನು, ಮಳೆಯಿಂದಾಗಿ ಟಿಫಿನ್ ಬಾಕ್ಸ್ ಸಂಗ್ರಹ ಸಾಧ್ಯವಾಗುವುದಿಲ್ಲ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಸೈಕಲ್ ಓಡಿಸಲು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ದಬ್ಬಾವಾಲಗಳು ಕೆಲಸ ಸ್ಥಗಿತಗೊಳಿಸಿದ್ದಾರೆ.