Heavy Rain in Maharashtra : ಮಹಾರಾಷ್ಟ್ರದಲ್ಲಿ ಭಾರೀ ಮಳೆ: IMD ಈ ಜಿಲ್ಲೆಗಳಲ್ಲಿ ರೇಡ್, ಆರೆಂಜ್ ಅಲರ್ಟ್ 

ಇದಕ್ಕೂ ಮೊದಲು ಜುಲೈ 15 ರವರೆಗೆ ಹವಾಮಾನ ಇಲಾಖೆ ಪಾಲ್ಘರ್ ಮತ್ತು ಸಿಂಧುದರ್ಗ್‌ಗೆ ಆರೆಂಜ್ ಅಲರ್ಟ್ ನೀಡಿತ್ತು. 24 ಗಂಟೆಗಳಲ್ಲಿ 204.4 ಮಿ.ಮೀ ಗಿಂತ ಹೆಚ್ಚು ಮಳೆಯಾಗುತ್ತದೆ ಎಂದು ಸೂಚಿಸುತ್ತದೆ.

Written by - Channabasava A Kashinakunti | Last Updated : Jul 14, 2021, 10:15 AM IST
  • ಮುಂಬೈ ಮತ್ತು ನೆರೆಯ ಥಾಣೆ ಪ್ರತ್ಯೇಕ ಸ್ಥಳಗಳಲ್ಲಿ ಬುಧವಾರ ಭಾರೀ ಮಳೆ
  • ಕೆಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ
  • ಮುಂಬೈ ನಗರದಲ್ಲಿ ಮಂಗಳವಾರ 51.5 ಮಿ.ಮೀ ಮಳೆ
Heavy Rain in Maharashtra : ಮಹಾರಾಷ್ಟ್ರದಲ್ಲಿ ಭಾರೀ ಮಳೆ: IMD ಈ ಜಿಲ್ಲೆಗಳಲ್ಲಿ ರೇಡ್, ಆರೆಂಜ್ ಅಲರ್ಟ್  title=

ಮಹಾರಾಷ್ಟ್ರ: ಮುಂಬೈ ಮತ್ತು ನೆರೆಯ ಥಾಣೆ ಪ್ರತ್ಯೇಕ ಸ್ಥಳಗಳಲ್ಲಿ ಬುಧವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು  ಜಿಲ್ಲೆಗಳಿಗೆ ಆರೆಂಜ್ ಅಲರ್ಟ್(Orange Alerts) ಘೋಷಣೆ ಮಾಡಲಾಗಿದೆ. ಇದಲ್ಲದೆ, ಪುಣೆ, ರಾಯಗಡ್, ರತ್ನಾಗಿರಿ, ಕೊಲ್ಹಾಪುರ ಮತ್ತು ಸತಾರಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ನೀಡಲಾಗಿದ್ದು, ಘಾಟ್ ಪ್ರದೇಶಗಳಲ್ಲಿನ ಪ್ರತ್ಯೇಕ ಸ್ಥಳಗಳಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ : Pulwama Encounter: ಪುಲ್ವಾಮಾದಲ್ಲಿ ಲಷ್ಕರ್ ಕಮಾಂಡರ್ ಸೇರಿದಂತೆ ಮೂವರು ಭಯೋತ್ಪಾದಕರ ಹತ್ಯೆ

ರಾಜ್ಯದ ಉಳಿದ ಭಾಗಗಳಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆ(Heavy Rain)ಯಾಗುವ ನಿರೀಕ್ಷೆಯಿದೆ ಮತ್ತು ಮಧ್ಯಮ ಮಳೆಯಿಂದ ಕೂಡಿದೆ ಎಂದು ಐಎಂಡಿ ತಿಳಿಸಿದೆ. ಗುರುವಾರದಿಂದ ಮಳೆಯ ತೀವ್ರತೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ : Pulse Oximeter, Nebuliser ನಂತಹ 5 ಅಗತ್ಯ ವೈದ್ಯಕೀಯ ಉಪಕರಣಗಳ ಬೆಲೆ ಇಳಿಕೆ

ಇದಕ್ಕೂ ಮೊದಲು ಜುಲೈ 15 ರವರೆಗೆ ಹವಾಮಾನ ಇಲಾಖೆ(IMD) ಪಾಲ್ಘರ್ ಮತ್ತು ಸಿಂಧುದರ್ಗ್‌ಗೆ ಆರೆಂಜ್ ಅಲರ್ಟ್ ನೀಡಿತ್ತು. 24 ಗಂಟೆಗಳಲ್ಲಿ 204.4 ಮಿ.ಮೀ ಗಿಂತ ಹೆಚ್ಚು ಮಳೆಯಾಗುತ್ತದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ : Driverless Pod Taxi: ಜೆವಾರ್ ವಿಮಾನ ನಿಲ್ದಾಣ-ನೋಯ್ಡಾ ಫಿಲ್ಮ್ ಸಿಟಿ ನಡುವೆ ಚಲಿಸಲಿದೆ ದೇಶದ ಮೊದಲ ಡ್ರೈವರ್‌ಲೆಸ್ ಪಾಡ್ ಟ್ಯಾಕ್ಸಿ

ಮುಂಬೈ ನಗರ(Mumbai City)ದಲ್ಲಿ ಮಂಗಳವಾರ 51.5 ಮಿ.ಮೀ ಮಳೆಯಾಗಿದ್ದರೆ, ಉಪನಗರ ಪ್ರದೇಶಗಳಲ್ಲಿ 54.6 ಮಿ.ಮೀ ಮಳೆಯಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಇದನ್ನೂ ಓದಿ : Kanwar Yatra Cancel : ಕರೋನ ಹಿನ್ನೆಲೆಯಲ್ಲಿ ಕನ್ವರ್ ಯಾತ್ರೆ ರದ್ದುಗೊಳಿಸಿದ ಉತ್ತರಖಂಡ್ ಸರ್ಕಾರ

ಕರಾವಳಿ ರಾಯಗಡ್ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರದ ನಡುವೆ ಕ್ರಮವಾಗಿ 135.5 ಮಿ.ಮೀ ಮತ್ತು 137.7 ಮಿ.ಮೀ ಮಳೆಯಾಗಿದೆ. ಮಧ್ಯ ಮಹಾರಾಷ್ಟ್ರ ಮತ್ತು ಮರಾಠವಾಡದಲ್ಲಿ ಮಧ್ಯಮ ಮಳೆಯಾಗಿದೆ, ಆದರೆ ವಿದರ್ಭ ಜಿಲ್ಲೆಗಳಲ್ಲಿ ಹೆಚ್ಚಿನವು ಸೋಮವಾರ ಮತ್ತು ಮಂಗಳವಾರದ ನಡುವೆ ಒಂದೇ ಅಂಕಿಯಲ್ಲಿ ಮಳೆಯಾಗಿದೆ ಎಂದು ವರದಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News