ಮುಂಬೈ: ಮಹಾರಾಷ್ಟ್ರದ ಹೆಚ್ಚಿನ ಭಾಗಗಳಲ್ಲಿ ಧಾರಾಕಾರ ಮಳೆ ಮುಂದುವರಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮುಂಬೈಯಲ್ಲಿ ಹೈ ಟೈಡ್ ಎಚ್ಚರಿಕೆಯನ್ನು ನೀಡಲಾಗಿದೆ. ಈ ಬಗ್ಗೆ ಹವಾಮಾನ ಇಲಾಖೆ ಭಾನುವಾರ ಎಚ್ಚರಿಕೆ ನೀಡಿದೆ. ಮುಂಬೈನಲ್ಲಿ ಇಂದು 12:23 ಸುಮಾರಿಗೆ ಸಮುದ್ರದಲ್ಲಿ 4.7 ಮೀಟರ್ ಎತ್ತರ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ಮುಂಬೈ ಬೆಳಗ್ಗೆಯಿಂದ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಆದರೆ, ನಗರದ ಯಾವುದೇ ತಗ್ಗು ಪ್ರದೇಶದಲ್ಲಿ ವಾಟರ್ ಲಾಗಿಂಗ್ ಸಮಸ್ಯೆ ಎದುರಾಗಿಲ್ಲ ಎಂಬುದು ನೆಮ್ಮದಿಯ ಸುದ್ದಿ.
ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಮುಂದಿನ 4 ದಿನಗಳವರೆಗೆ ಎಚ್ಚರಿಕೆಯಿಂದ ಇರಲು ಜನರಿಗೆ ಹವಾಮಾನ ಇಲಾಖೆ ಸೂಚಿಸಿದೆ. ಅದರ ನಂತರ ಸ್ಥಿತಿಗೆ ಆಡಳಿತ ಸಂಪೂರ್ಣ ಸಜ್ಜಾಗಿದೆ ಎಂದೂ ಕೂಡ ಇಲಾಖೆ ಹೇಳಿದೆ. ಮುಂಬಯಿಯ ಸಾಯನ್ ಪ್ರದೇಶದ ಗಾಂಧಿ ಮಾರುಕಟ್ಟೆ ಮಳೆಗಾಲದಲ್ಲಿ ಹೆಚ್ಚಿನ ಚರ್ಚೆ ಹುಟ್ಟುಹಾಕುತ್ತದೆ. ಏಕೆಂದರೆ ಪ್ರತಿವರ್ಷ ಇಲ್ಲಿ ವಾಟರ್ ಲಾಗಿಂಗ್ ಸಮಸ್ಯ ಎದುರಾಗುತ್ತದೆ. ಆದರೆ ಈ ಬಾರಿ ಬಿಎಂಸಿ ಈ ಪರಿಸ್ಥಿತಿಯನ್ನು ಎದುರಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬಾರಿ ಬಿಎಂಸಿ ಇಲ್ಲಿ ಪಂಪಿಂಗ್ ಮಶೀನ್ ಸ್ಥಾಪಿಸಿದ್ದು, ಇದರಿಂದ ನೀರನ್ನು ಹೊರತೆಗೆಯುವ ಕೆಲಸ ನಡೆಯುತ್ತಿದೆ. ಸದ್ಯ ರಾಜ್ಯದ ಜರರು ಡಬಲ್ ಎಚ್ಚರಿಕೆಯಿಂದ ಇರುವ ಅವಶ್ಯಕತೆ ಇದೆ. ಒಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ರಾಜ್ಯದಲ್ಲಿ 2 ಲಕ್ಷ ದಾಟಿದ್ದರೆ, ಕೇವಲ ಮುಂಬೈ ಒಂದಡೆ ನಗರದಲ್ಲಿ ಮಾತ್ರ ಸೋಂಕಿತ ರೋಗಿಗಳ ಸಂಖ್ಯೆ 80 ಸಾವಿರ ದಾಟಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರಿಗೆ ಒಂದೆಡೆ ತಮ್ಮನ್ನು ತಾವು ಕೊರೊನಾ ವೈರಸ್ ನಿಂದ ಕಾಪಾಡಿಕೊಳ್ಳಬೇಕಾಗಿದ್ದರೆ, ಇನ್ನೊಂದೆಡೆ ಮಳೆಗಾಳದಿಂದ ಊದ್ಭವಿಸುತ್ತಿರುವ ಸಮಸ್ಯೆಯಿಂದಲೂ ಕೂಡ ರಕ್ಷಿಸಿಕೊಳ್ಳುವುದು ಆವಶ್ಯಕವಾಗಿದೆ.
ಮುಂಬೈ ಮತ್ತು ನೆರೆಯ ಠಾ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆಯಿಂದ ಇದುವರೆಗೆ ಸುಮಾರು 100 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇಲಾಖೆಯ ಪ್ರಕಾರ, ಮಹಾರಾಷ್ಟ್ರದ ಇತರ ಭಾಗಗಳಲ್ಲಿಯೂ ಕೂಡ ಉತ್ತಮ ಮಳೆಯಾಗಿದೆ ಈ ಕುರಿತು ಮಾಹಿತಿ ನೀಡಿರುವ ಕೊಲಾಬಾ ಹವಾಮಾನ ಬ್ಯೂರೋ ಶನಿವಾರ ಬೆಳಗ್ಗೆ 8.30 ರಿಂದ ಸಂಜೆ 5.30 ರ ನಡುವೆ 66 ಮಿ.ಮೀ ಮಳೆಯಾಗಿದೆ, ಸಾಂತಾ ಕ್ರೂಜ್ ಹವಾಮಾನ ಕೇಂದ್ರದ ಪ್ರಕಾರ ಇದೇ ಅವಧಿಯಲ್ಲಿ 111.4 ಮಿ.ಮೀ ಮಳೆಯಾಗಿದೆ. ಠಾಣೆ-ಬೆಲಾಪುರ ಇಂಡಸ್ಟ್ರಿ ಯೂನಿಯನ್ ಪ್ರದೇಶದಲ್ಲಿ ಈ ಅವಧಿಯಲ್ಲಿ 116 ಮಿ.ಮೀ ಮಳೆಯಾಗಿದೆ ಎಂದು ಹೇಳಲಾಗಿದೆ.