ನವದೆಹಲಿ: ನನ್ನ 3ನೇ ಅವಧಿಯಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ಪುನರಾಭಿವೃದ್ಧಿಗೊಂಡ ಐಇಸಿಸಿ ಕಾಂಪ್ಲೆಕ್ಸ್ 'ಭಾರತ್ ಮಂಟಪ' ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾನು ಭಾರತ ನಿವಾಸಿಗಳಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನನ್ನ 3ನೇ ಅವಧಿಯಲ್ಲಿ ವಿಶ್ವದ ಅತೀದೊಡ್ಡ 3 ಆರ್ಥಿಕತೆಯಲ್ಲಿ ಭಾರತದ ಹೆಸರು ಇರಲಿದೆ. ನನ್ನ ಸರ್ಕಾರದ 3ನೇ ಅವಧಿಯಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಲಿದೆ. ಇದು ನಿಮ್ಮ ಮೋದಿಯ ಗ್ಯಾರಂಟಿ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Viral Video: ಈ ಬಾಬಾ ತಲೆ ಮೇಲೆ ಬೆಳೆಯೋದು ಕೂದಲಲ್ಲ, ಗಿಡಗಳು..!
#WATCH | In my third term, India will be among the top three economies in the world...Yeh Modi ki guarantee hai, says PM Modi. pic.twitter.com/drLFWZKgS6
— ANI (@ANI) July 26, 2023
ಪ್ರಧಾನಿ ಮೋದಿಯವರ ಭಾಷಣದ ಪ್ರಮುಖ ಉಲ್ಲೇಖಗಳು
- ಕೆಲವರಿಗೆ ಕಾಮೆಂಟ್ ಮಾಡಿ ಒಳ್ಳೆಯ ಕೆಲಸಗಳನ್ನು ನಿಲ್ಲಿಸುವ ಪ್ರವೃತ್ತಿ ಇರುತ್ತದೆ. ‘ಕರ್ತವ್ಯ ಪಥ’ ನಿರ್ಮಾಣವಾಗುತ್ತಿದ್ದಾಗ ಪತ್ರಿಕೆಗಳ ಮುಖಪುಟದಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಹಲವು ವಿಷಯಗಳು ರಾರಾಜಿಸುತ್ತಿದ್ದವು. ಕೋರ್ಟ್ಗಳಲ್ಲಿಯೂ ಸಹ ಇದರ ನಿರ್ಮಾಣದ ಬಗ್ಗೆ ಪ್ರಶ್ನೆ ಮಾಡಿದ್ದರು. ಇದರ ನಿರ್ಮಾಣ ಪೂರ್ತಿಯಾದಾಗ ಅದೇ ಜನ ಚೆನ್ನಾಗಿದೆ ಎಂದಿದ್ದರು. ಈ ಟೋಲಿಗಳು ‘ಭಾರತ ಮಂಟಪ'ವನ್ನು ಒಪ್ಪಿಕೊಳ್ಳುತ್ತದೆ ಎನ್ನುವ ಖಾತ್ರಿ ನನಗಿದೆ. ಅವರು ಸೆಮಿನಾರ್ನಲ್ಲಿ ಉಪನ್ಯಾಸ ನೀಡಲು ಇಲ್ಲಿಗೆ ಬರುವ ಸಾಧ್ಯತೆಯೂ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.
- 'ಭಾರತ ಮಂಟಪ'ವನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನು ಸಂತೋಷದಿಂದ, ಹೆಮ್ಮೆಯಿಂದ ತುಂಬಿದ್ದಾನೆ
- ದೊಡ್ಡದಾಗಿ ಯೋಚಿಸಿ, ದೊಡ್ಡದಾಗಿ ಕನಸು ಕಾಣಿ, ದೊಡ್ಡದಾಗಿ ವರ್ತಿಸಿ - ಭಾರತವು ಈ ತತ್ವವನ್ನು ಅಳವಡಿಸಿಕೊಂಡು ಕ್ಷಿಪ್ರಗತಿಯಲ್ಲಿ ಪ್ರಗತಿ ಸಾಧಿಸುತ್ತಿದೆ.
- ಕಳೆದ 5 ವರ್ಷಗಳಲ್ಲಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಭಾರತದಲ್ಲಿ ಕಡುಬಡತನ ಕೊನೆಗೊಳ್ಳುವ ಹಂತದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಗಳೂ ಹೇಳುತ್ತಿವೆ. ಕಳೆದ 9 ವರ್ಷಗಳಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ನೀತಿಗಳು ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುತ್ತಿವೆ ಎಂಬುದನ್ನು ಇದು ತೋರಿಸುತ್ತದೆ.
- ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ಮೋದಿ ಅವರು ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್-ಭಾರತ್ ಮಂಟಪದ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
- ಇಂದು ಕಾರ್ಗಿಲ್ ವಿಜಯ್ ದಿವಸ್ ಆಗಿರುವುದರಿಂದ ಐತಿಹಾಸಿಕ ದಿನ. ದೇಶದ ಶತ್ರುಗಳನ್ನು ನಮ್ಮ ವೀರ ಪುತ್ರರು ಸೋಲಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪ್ರಾಣ ತ್ಯಾಗ ಮಾಡಿದ ಪ್ರತಿಯೊಬ್ಬ ವೀರಯೋಧನಿಗೂ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ.
- ಹೊಸ ಸಂಸತ್ ಭವನದ ಬಗ್ಗೆ ಹೆಮ್ಮೆ ಪಡದ ಭಾರತೀಯರಿಲ್ಲ
- ಭಾರತವು ಈ ಹಿಂದೆ ಊಹೆಗೂ ನಿಲುಕದ ವಿಷಯಗಳನ್ನು ಈಗ ಸಾಧಿಸುತ್ತಿದೆ.
- ಕರ್ತವ್ಯ ಪಥದ ಹಿರಿಮೆಯನ್ನು ಖಾಸಗಿಯಾಗಿ ಸ್ವೀಕರಿಸಿದಂತೆ, ನಕಾರಾತ್ಮಕ ಚಿಂತಕರ 'ಟೋಲಿ' ಭಾರತ ಮಂಟಪವನ್ನು ಸಹ ಒಂದು ದಿನ ಒಪ್ಪಿಕೊಳ್ಳುತ್ತದೆ.
- ಕಳೆದ 9 ವರ್ಷಗಳಲ್ಲಿ ಈ ಸರ್ಕಾರವು ಸಾಧಿಸಿದ 40,000 ಕಿಮೀಗೆ ಹೋಲಿಸಿದರೆ ಭಾರತವು ಕಳೆದ 60 ವರ್ಷಗಳಲ್ಲಿ ಕೇವಲ 20,000 ಕಿಮೀ ರೈಲು ಮಾರ್ಗಗಳನ್ನು ಮಾತ್ರ ವಿದ್ಯುದ್ದೀಕರಿಸಿದೆ.
ಇದನ್ನೂ ಓದಿ: ಪಾರ್ಕ್ ಬಿಟ್ಟು ಮೆಟ್ರೋದಲ್ಲಿ ರೋಮ್ಯಾನ್ಸ್ ಶುರು ಮಾಡಿದ ಲವ್ ಬರ್ಡ್ಸ್..! ವಿಡಿಯೋ ವೈರಲ್..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.