ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 11 ಮಂದಿಗೆ ಗಲ್ಲುಶಿಕ್ಷೆ ಬದಲು, ಜೀವಾವಧಿ ಶಿಕ್ಷೆ

2002ರ ಗೋಧ್ರಾ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು 11 ಆರೋಪಿಗಳಿಗೆ  ವಿಧಿಸಿದ್ದ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಬದಲಾಯಿಸಿ ಗುಜರಾತ್ ಹೈಕೋರ್ಟ್ ತೀರ್ಪು.

Last Updated : Oct 9, 2017, 11:47 AM IST
ಗೋಧ್ರಾ ಹತ್ಯಾಕಾಂಡ ಪ್ರಕರಣದಲ್ಲಿ 11 ಮಂದಿಗೆ ಗಲ್ಲುಶಿಕ್ಷೆ ಬದಲು, ಜೀವಾವಧಿ ಶಿಕ್ಷೆ title=

ಅಹ್ಮದಾಬಾದ್: ಗುಜರಾತ್ ನ ಗೋಧ್ರಾದಲ್ಲಿ ಉಂಟಾಗಿದ್ದ ಭೀಕರ ಹತ್ಯಾಕಾಂಡ ಪ್ರಕರಣದ ತೀರ್ಪನ್ನು ಗುಜರಾತ್ ಹೈಕೋರ್ಟ್ ಪ್ರಕಟಿಸಿದೆ. ಈ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 11 ಮಂದಿಗೆ ಗಲ್ಲುಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್ ಹೈಕೋರ್ಟ್ ತನ್ನ ತೀರ್ಪು ಪ್ರಕಟಿಸಿದೆ.

2002ರ ಫೆಬ್ರವರಿ 27ರಂದು ಗುಜರಾತ್ ನ ಗೋಧ್ರಾ ರೈಲು ನಿಲ್ದಾಣದಲ್ಲಿ ಸಬರಮತಿ ಎಕ್ಷ್ಪ್ರೆಸ್ ರೈಲಿನ S-6 ಕೋಚ್ಗೆ ಕಿಡಿಗೇಡಿಗಳಿಂದ ಬೆಂಕಿ ಹಚ್ಚಲಾಗಿತ್ತು. ಇದರಲ್ಲಿ 59 ಕರ ಸೇವಕರು ಸಜೀವ ದಹನವಾಗಿದ್ದರು. ನಂತರದಲ್ಲಿ ನಡೆದ ಕೋಮು ಗಲಭೆಯಿಂದ 1200 ಜನರ ಹತ್ಯೆಯಾಗಿತ್ತು.  ಈ ಕುರಿತಂತೆ ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯವು 63 ಜನರನ್ನು ಖುಲಾಸೆಗೊಳಿಸಿ, 11 ಮಂದಿಗೆ ಮರಣದಂಡನೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. 

ಈ ಕುರಿತಂತೆ ಗುಜರಾತ್ ನ್ಯಾಯಾಲಯದಲ್ಲಿ ಹಲವು ಮೇಲ್ಮನವಿಗಳನ್ನು ಸಲ್ಲಿಸಲಾಗಿತ್ತು. ನಂತರ ವಿಚಾರಣೆ ನಡೆಸಿದ ಗುಜರಾತ್ ಹೈಕೋರ್ಟ್ ನ್ಯಾಯಾಲಯ 11 ಮಂದಿಗೆ ಗಲ್ಲುಶಿಕ್ಷೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಹಾಗೂ 20 ಮಂದಿಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಮತ್ತು 63 ಜನರ ಖುಲಾಸೆಗೊಳಿಸಿದ್ದನ್ನು ಎತ್ತಿ ಹಿಡಿದಿದೆ.

Trending News