ಡಿಸೆಂಬರ್ 31 ರೊಳಗೆ ತಪ್ಪದೇ ಮಾಡಿ ಈ ಕೆಲಸ!

ವರ್ಷದ ಅಂತ್ಯದ ವೇಳೆಗೆ, ಎಲ್ಲಾ ಭಾರತೀಯರು ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ಪ್ಯಾನ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದವರು ಡಿಸೆಂಬರ್ 31 ರ ಗಡುವಿನವರೆಗೆ ಈ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.

Last Updated : Dec 17, 2019, 10:41 AM IST
ಡಿಸೆಂಬರ್ 31 ರೊಳಗೆ ತಪ್ಪದೇ ಮಾಡಿ ಈ ಕೆಲಸ! title=

ನವದೆಹಲಿ: ಡಿಸೆಂಬರ್ ಬರುತ್ತಿದ್ದಂತೆ ಎಲ್ಲರಿಗೂ ಅಯ್ಯೋ ಈ ವರ್ಷವೂ ಮುಗಿದೇ ಹೋಯ್ತು ಅನ್ನೂ ಚಿಂತೆ. ಕೆಲವರಿಗೆ ಹೊಸ ವರ್ಷವನ್ನು ಹೇಗೆ ಆಚರಿಸುವುದು ಎಂಬ ಯೋಚನೆ. ಇವೆಲ್ಲದರ ನಡುವೆ ಹಲವು ಕೆಲಸಗಳನ್ನು ಮಾಡಲು ಡಿಸೆಂಬರ್ 31 ಕೊನೆಯ ದಿನ ಎಂಬುದನ್ನು ಮರೆಯುವಂತಿಲ್ಲ. ಹೌದು, ನಿಮಗೆಲ್ಲಾ ತಿಳಿದೇ ಇದೇ ಇತ್ತೀಚಿನ ದಿನಗಳಲ್ಲಿ ಎಲ್ಲಾ ಕೆಲಸಗಳಿಗೂ ಆಧಾರ್ ಕಡ್ಡಾಯ. ಆಧಾರ್ ಅಷ್ಟೇ ಅಲ್ಲ ಹಣಕಾಸಿನ ವ್ಯವಹಾರಕ್ಕೆ ಪ್ಯಾನ್ ಕಾರ್ಡ್ ಕೂಡ ಅಷ್ಟೇ ಮುಖ್ಯ. ಹೀಗಾಗಿಯೇ ಆಧಾರ್-ಪ್ಯಾನ್ ಲಿಂಕ್ ಮಾಡುವುದರ ಬಗ್ಗೆ ಹಲವು ದಿನಗಳಿಂದ ಎಚ್ಚರಿಕೆ ನೀಡಲಾಗುತ್ತಿದೆ. ಎಷ್ಟೋ ಬಾರಿ ಆಧಾರ್-ಪ್ಯಾನ್ ಲಿಂಕಿಗಾಗಿ ನೀಡಲಾಗಿದ್ದ ಗಡುವನ್ನೂ ವಿಸ್ತರಿಸಲಾಗಿತ್ತು. ಅದಾಗ್ಯೂ, ಆಧಾರ್-ಪ್ಯಾನ್ ಲಿಂಕ್ ಮಾಡಲು 2019ರ ಡಿಸೆಂಬರ್ 31 ಕೊನೆಯ ದಿನವಾಗಿದೆ.

ಪ್ಯಾನ್ ಕಾರ್ಡ್ ಅನ್ನು ಆಧಾರ್‌ಗೆ ಲಿಂಕ್ ಮಾಡಲು ಸಾಧ್ಯವಾಗದ ಎಲ್ಲ ಜನರು ಡಿಸೆಂಬರ್ 31 ರ ಮೊದಲು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಭಾನುವಾರ ತಡರಾತ್ರಿ, ಆದಾಯ ತೆರಿಗೆ ಇಲಾಖೆ ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದೆ. ಇದರೊಂದಿಗೆ ಆದಾಯ ತೆರಿಗೆ ಇಲಾಖೆಯಿಂದ ಸುಲಭವಾಗಿ ಲಾಭ ಪಡೆಯಬಹುದು. ಇದು ಇನ್ನೂ ಆಧಾರ್‌ಗೆ(AADHAAR) ಅನ್ನು ಲಿಂಕ್ ಮಾಡದವರಿಗೆ ಮಾತ್ರ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಪ್ಯಾನ್(PAN)ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, ಐಟಿ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ದೃಡೀಕರಣವನ್ನು ನೀಡಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ತಮ್ಮ ಪ್ಯಾನ್ ಅನ್ನು ಅವರ ಆಧಾರ್ ಕಾರ್ಡ್‌ಗೆ ಲಿಂಕ್(PAN-AADHAAR link) ಮಾಡಲಾಗಿದೆಯೆ ಅಥವಾ ಇಲ್ಲವೇ ಎಂದು ತಿಳಿಯಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ಹೋಗಿ ಮಾಹಿತಿ ಪಡೆಯಬಹುದು.

ಆಧಾರ್‌ಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್:
ಆದಾಯ ತೆರಿಗೆ ಇಲಾಖೆಯ ನೀತಿಗಳನ್ನು ರೂಪಿಸುವ ಮತ್ತು ಕಾರ್ಯಗತಗೊಳಿಸುವ ಕೇಂದ್ರೀಯ ನೇರ ತೆರಿಗೆ ಮಂಡಳಿ ಈ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಆಧಾರ್ ಕಾರ್ಡ್‌ಗೆ ಸಾಂವಿಧಾನಿಕ ಸಿಂಧುತ್ವವನ್ನು ನೀಡಿತು.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಡಿ ಆಧಾರ್ ಜಾರಿಗೆ ತರಲಾಯಿತು. ಐಟಿ ರಿಟರ್ನ್ಸ್ ಅನ್ನು ಬಯೋಮೆಟ್ರಿಕ್ ಐಡಿ ಮೂಲಕ ಮಾತ್ರ ಭರ್ತಿ ಮಾಡಬಹುದು ಮತ್ತು ಅದರ ಮೂಲಕ ಪ್ಯಾನ್ ಸಂಖ್ಯೆಯನ್ನು ಸಹ ನೀಡಲಾಗುವುದು ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.

ನಿಮ್ಮ ಪ್ಯಾನ್ ಆಧಾರ್‌ಗೆ ಲಿಂಕ್ ಆಗಿದೆಯೇ/ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ

ಆದಾಯ ತೆರಿಗೆ ಇಲಾಖೆ ಕಾಯ್ದೆಯ ಸೆಕ್ಷನ್ 139 ಎಎ ಅಡಿಯಲ್ಲಿ, ಜುಲೈ 1, 2017 ರೊಳಗೆ ಆಧಾರ್ ಪಡೆಯಲು ಸಮರ್ಥರಾದವರು, ಅವರು ಆಧಾರ್ ತೆಗೆದುಕೊಳ್ಳಲು ಮತ್ತು ತಮ್ಮ ಆಧಾರ್ ಅನ್ನು ತೆರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತದೆ. 

ಆಧಾರ್ ಕಾರ್ಡ್ ಅನ್ನು ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ನೀಡಿದೆ. ಇದು ಭಾರತೀಯ ಪೌರತ್ವ ಹೊಂದಿರುವವರಿಗೆ ಮಾತ್ರ ಲಭ್ಯವಿದೆ. ಇದಲ್ಲದೆ, ಅಂತಹ ಯಾವುದೇ ವ್ಯಕ್ತಿ, ಗುಂಪು ಅಥವಾ ಸಂಸ್ಥೆಗೆ ಐಟಿ ಇಲಾಖೆ 10-ಅಂಕಿಯ ಪ್ಯಾನ್ ಸಂಖ್ಯೆಯನ್ನು ನೀಡುತ್ತದೆ. ಅದರ ಮೂಲಕ ಆದಾಯ ತೆರಿಗೆ ಸಲ್ಲಿಸುವ ಎಲ್ಲಾ ಕೆಲಸಗಳು ಮತ್ತು ಅದರಿಂದ ಲಭ್ಯವಿರುವ ಪ್ರಯೋಜನಗಳನ್ನು ನೀಡಲಾಗುತ್ತದೆ.

Trending News