ಅರುಣಾಚಲ ಪ್ರದೇಶದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಸೇನೆಯ ಎಂಐ-17 ಹೆಲಿಕಾಫ್ಟರ್

ವಾಯುಪಡೆಯ ಐದು ಅಧಿಕಾರಿಗಳು ಮತ್ತು ಇಬ್ಬರು ಸೇನಾ ಸಿಬ್ಬಂದಿಯನ್ನು ಹೊತ್ತು ಸಾಗಿದ್ದ ಹೆಲಿಕಾಫ್ಟರ್.

Updated: Oct 6, 2017 , 11:24 AM IST
ಅರುಣಾಚಲ ಪ್ರದೇಶದಲ್ಲಿ ಅಪಘಾತಕ್ಕೀಡಾದ ಭಾರತೀಯ ವಾಯುಸೇನೆಯ ಎಂಐ-17 ಹೆಲಿಕಾಫ್ಟರ್

ಇಟಾನಗರ: ಭಾರತೀಯ ವಾಯುಸೇನೆಯ MI-17 ಹೆಲಿಕಾಫ್ಟರ್ ಅರುಣಾಚಲ ಪ್ರದೇಶದ ಲೈಮ್ ಪೋಸ್ಟ್ನಲ್ಲಿ ಕುಸಿದಿದ್ದು, ವಾಯುಪಡೆಯ ಐವರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಇದರಲ್ಲಿ ಒಟ್ಟು ಏಳು ಮಂದಿ ಇದ್ದರು. ಅವರಲ್ಲಿ ವಾಯುಪಡೆಯ ಐದು ಅಧಿಕಾರಿಗಳು ಮತ್ತು ಇಬ್ಬರು ಸೇನಾ ಸಿಬ್ಬಂದಿ ಇದ್ದರು. ಐವರು ಅಧಿಕಾರಿಗಳು ಮೃತಪಟ್ಟಿದ್ದು, ಒಬ್ಬನ ಸ್ಥಿತಿ ಬಹಳ ಗಂಭೀರವಾಗಿದೆ. ಅಪಘಾತದ ಕಾರಣಗಳ ಬಗ್ಗೆ ವಿಚಾರಣೆಗೆ ವಾಯುಸೇನೆ ಆದೇಶ ನೀಡಿದೆ.

ಇಂಡೋ-ಚೀನಾ ಗಡಿಯ ಸಮೀಪ ತವಾಂಗ್ನಲ್ಲಿರುವ ಅಪಘಾತ ನಡೆದ ಸ್ಥಳಕ್ಕೆ ಪಾರುಗಾಣಿಕಾ ತಂಡಗಳು ತಲುಪಿದ್ದು, ಗಾಯಗೊಂಡ ಸಿಬ್ಬಂದಿಯನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. 

ಕಳೆದ ವಾರ ಹೈದರಾಬಾದ್ ನಲ್ಲಿ ವಾಯುಸೇನೆಯ ಕೇಸರಿ ತರಬೇತಿ ವಿಮಾನ ಅಪಘಾತಕ್ಕೀಡಾಗಿತ್ತು. ಆದರೆ ಯಾವುದೇ ಸಾವು ನೋವು ಸಂಭವಿಸಿರಲಿಲ್ಲ.