ತಾಂತ್ರಿಕ ದೋಷದಿಂದ ನೆಲಕ್ಕೆ ಅಪ್ಪಳಿಸಿದ ನೌಕಾಪಡೆ ಹೆಲಿಕಾಪ್ಟರ್ !

      

webmaster A | Updated: Mar 10, 2018 , 06:00 PM IST
ತಾಂತ್ರಿಕ ದೋಷದಿಂದ ನೆಲಕ್ಕೆ ಅಪ್ಪಳಿಸಿದ ನೌಕಾಪಡೆ ಹೆಲಿಕಾಪ್ಟರ್ !
ಸಾಂದರ್ಭಿಕ ಚಿತ್ರ

ರಾಯಗಡ್: ಮಹಾರಾಷ್ಟ್ರದ ರಾಯ್ಗಡ್ ಜಿಲ್ಲೆಯ ನಂದಗಾನ್ ಬಳಿ ಭಾರತೀಯ ನೌಕಾಪಡೆಯ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ನೆಲಕ್ಕೆ ಅಪ್ಪಳಿಸಿದೆ.

ಹೆಲಿಕಾಪ್ಟರ್ ನಲ್ಲಿ ನಾಲ್ಕು ಸಿಬ್ಬಂದಿಗಳು ಇದ್ದರೆಂದು ಹೇಳಲಾಗಿದೆ,ಇದರಲ್ಲಿ  ಒಬ್ಬ ಮಹಿಳೆ ಗಾಯಗೊಂಡಿದ್ದು ಉಳಿದ ಮೂರು ಸಿಬ್ಬಂದಿಗಳನ್ನು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಘಟನೆ ಶನಿವಾರ 2:40 ಕ್ಕೆ  ದಕ್ಷಿಣ ಮುಂಬೈ ಗೆ 160 ಕಿ.ಮೀ ದೂರದಲ್ಲಿ  ಭೂಮಿಗೆ ಇಳಿಯುವ ಸಂದರ್ಭದಲ್ಲಿ ನಡೆದಿದ್ದು. ಹಾರಾಟದ ವೇಳೆಯಲ್ಲಿ ಹೆಲಿಕಾಪ್ಟರ್ ನಲ್ಲಿ ಕೆಲವು ತಾಂತ್ರಿಕ ದೋಷ ಕಂಡುಬಂದಾಗ ಹೆಲಿಕಾಪ್ಟರ ಭೂಮಿಗೆ ಅಪ್ಪಳಿಸಿದೆ ಎನ್ನಲಾಗಿದೆ.

 .