ಜ.15ಕ್ಕೆ ಅಮೆಜಾನ್ ನ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ, ಪ್ರತಿಭಟನೆಗೆ ವ್ಯಾಪಾರಿಗಳ ನಿರ್ಧಾರ

ಅಮೆರಿಕದ ಆನ್‌ಲೈನ್ ಚಿಲ್ಲರೆ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಜನವರಿ 15 ರಂದು ಕಂಪನಿಯ ಕಾರ್ಯಕ್ರಮಕ್ಕಾಗಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಭಾವ್ಯ ಸಭೆಗಳಿಗಾಗಿ ದೇಶಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಸಾವಿರಾರು ಸಣ್ಣ-ಪ್ರಮಾಣದ ಭಾರತೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಲಿದ್ದಾರೆ. 

Last Updated : Jan 12, 2020, 11:22 PM IST
ಜ.15ಕ್ಕೆ ಅಮೆಜಾನ್ ನ ಜೆಫ್ ಬೆಜೋಸ್ ಭಾರತಕ್ಕೆ ಭೇಟಿ, ಪ್ರತಿಭಟನೆಗೆ ವ್ಯಾಪಾರಿಗಳ ನಿರ್ಧಾರ  title=

ನವದೆಹಲಿ: ಅಮೆರಿಕದ ಆನ್‌ಲೈನ್ ಚಿಲ್ಲರೆ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಜನವರಿ 15 ರಂದು ಕಂಪನಿಯ ಕಾರ್ಯಕ್ರಮಕ್ಕಾಗಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಭಾವ್ಯ ಸಭೆಗಳಿಗಾಗಿ ದೇಶಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಸಾವಿರಾರು ಸಣ್ಣ-ಪ್ರಮಾಣದ ಭಾರತೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಲಿದ್ದಾರೆ. 

ಅಮೆಜಾನ್ ಸಿಇಒ ಅವರ ಭಾರತ ಭೇಟಿಯ ಸಂದರ್ಭದಲ್ಲಿ ವ್ಯಾಪಾರಿಗಳು, ಕಾನ್ಫೆಡರೇಶನ್ ಆಫ್ ಆಲ್ ಇಂಡಿಯನ್ ಟ್ರೇಡರ್ಸ್ (ಸಿಎಐಟಿ) ಆಶ್ರಯದಲ್ಲಿ ಭಾರಿ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಅವರು ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಹಸ್ತಕ್ಷೇಪವನ್ನು ಕೋರಿದ್ದಾರೆ ಮತ್ತು ಅವರು ಭೇಟಿಯಾದಾಗ ಬೆಜೋಸ್ ಅವರೊಂದಿಗೆ ತಮ್ಮ ಸಮಸ್ಯೆಗಳನ್ನು ಚರ್ಚಿಸುವಂತೆ ಒತ್ತಾಯಿಸಿದ್ದಾರೆ.

ಅಮೆಜಾನ್ ಸಿಇಒ ಜನವರಿ 15 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರು ಪಿಎಂ ಮೋದಿ ಮತ್ತು ಉದ್ಯಮದ ಪ್ರಮುಖರಲ್ಲದೆ ಅಧಿಕಾರಿಗಳನ್ನೂ ಭೇಟಿ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೆಜಾನ್‌ನ ಜೆಫ್ ಬೆಜೋಸ್ ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ಕೇಂದ್ರೀಕರಿಸುವ SMBhav ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮ ದೆಹಲಿಯಲ್ಲಿ ಜನವರಿ 15-16ರಂದು ನಡೆಯಲಿದೆ.

 ಈ ವಿಚಾರವಾಗಿ ಹೇಳಿಕೆ ನೀಡಿರುವ ಸಿಎಐಟಿ ,''ಅಮೆಜಾನ್ ಸಿಇಒ ಭೇಟಿಯು ಅಖಿಲ ಭಾರತ ಮೊಬೈಲ್ ಚಿಲ್ಲರೆ ವ್ಯಾಪಾರಿಗಳ ಸಂಘ, ಅಖಿಲ ಭಾರತ ಗ್ರಾಹಕ ಉತ್ಪನ್ನಗಳ ವಿತರಕರ ಒಕ್ಕೂಟದ ಸಹಯೋಗದೊಂದಿಗೆ ಸಿಎಐಟಿ ಬ್ಯಾನರ್ ಅಡಿಯಲ್ಲಿ ದೇಶಾದ್ಯಂತ ಭಾರಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಿದೆ.  ಈ ಪ್ರತಿಭಟನೆಯಲ್ಲಿ 5000 ಕ್ಕೂ ಹೆಚ್ಚು ವ್ಯಾಪಾರ ಸಂಸ್ಥೆಗಳು ಭಾಗವಹಿಸಲಿವೆ. ವ್ಯಾಪಾರಿಗಳು ದೇಶದ ವಿವಿಧ ರಾಜ್ಯಗಳ ಸುಮಾರು 300 ನಗರಗಳಲ್ಲಿ 'ಹಲ್ಲಾ ಬೋಲ್' ಪ್ರತಿಭಟನೆ ಮತ್ತು ಪ್ರದರ್ಶನಗಳನ್ನು ನಡೆಸಲಿದ್ದಾರೆ '' ಎಂದು ಅದು ಹೇಳಿದೆ.
 

Trending News