ಅಬುದಾಬಿ : 17.5ಕೋಟಿ ರೂ. ಜಾಕ್ ಪಾಟ್ ಗಳಿಸಿದ ಭಾರತೀಯ!

ಅಬುದಾಬಿಯಲ್ಲಿ ನಡೆದ ಬಿಗ್ ಲಾಟರಿ ಟಿಕೆಟ್ ಡ್ರಾನಲ್ಲಿ ಭಾರತದ ಕೇರಳ ಮೂಲದ ವ್ಯಕ್ತಿಯೊಬ್ಬರು 17.5ಕೋಟಿ ರೂ. ಮೌಲ್ಯದ ಲಾಟರಿ ಗೆದ್ದಿದ್ದಾರೆ.

Last Updated : Feb 5, 2018, 05:10 PM IST
ಅಬುದಾಬಿ : 17.5ಕೋಟಿ ರೂ. ಜಾಕ್ ಪಾಟ್ ಗಳಿಸಿದ ಭಾರತೀಯ! title=
Pic : gulfnews.com

ದುಬೈ: ಇತ್ತೀಚೆಗೆ ಅಬುದಾಬಿಯಲ್ಲಿ ನಡೆದ ಬಿಗ್ ಲಾಟರಿ ಟಿಕೆಟ್ ಡ್ರಾನಲ್ಲಿ ಭಾರತದ ಕೇರಳ ಮೂಲದ ವ್ಯಕ್ತಿಯೊಬ್ಬರು 17.5ಕೋಟಿ ರೂ. ಮೌಲ್ಯದ ಲಾಟರಿ ಗೆದ್ದಿದ್ದಾರೆ.

ಈ ಕುರಿತು ವರದಿ ಮಾಡಿರುವ ಗಲ್ಫ್ ನ್ಯೂಸ್, ಅಭುದಾಬಿಯಲ್ಲಿ ನೆಲೆಸಿರುವ ಕೇರಳ ಮೂಲದ ಸುನೀಲ್ ಮಪ್ಪಟ್ಟ ಕೃಷ್ಣನ್ ಕುಟ್ಟಿ ನಾಯರ್ ಈ ವರ್ಷದಲ್ಲಿ ನೀಡಲಾಗುವ ಎರಡನೇ ಅತಿ ದೊಡ್ಡ ಬಹುಮಾನವನ್ನು ಗೆದ್ದಿದ್ದು, 10 ಮಿಲಿಯನ್ ಧಿರಾಮ್(ಅಂದಾಜು 17,68 00,000 ರೂ.) ಪಡೆಯಲಿದ್ದಾರೆ ಎಂದು ತಿಳಿಸಿದೆ. 

ಅಬುದಾಬಿಯಲ್ಲಿ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿರುವ ಸುನೀಲ್, ವೆಚ್ಚ 500 ಧಿರಾಮ್ಸ್ ಮೌಲ್ಯದ ಈ ಲಾಟರಿ ಟಿಕೆಟ್ ಅನ್ನು ತನ್ನ ನಾಲ್ವರು ಸ್ನೇಹಿತರ ಸಹಭಾಗಿತ್ವದಲ್ಲಿ ಪಡೆದಿದ್ದರು. ಹಾಗಾಗಿ, ಬಹುಮಾನ ಮೊತ್ತವನ್ನು ತನ್ನ ನಾಲ್ವರು ಸ್ನೇಹಿತರಾದ ದಿಪಿನ್ದಾಸ್, ಅಭಿಲಾಶ್, ಸಾಯಿನುದ್ದೀನ್ ಮತ್ತು ಶಂಶುದ್ದೀನ್ ಅವರೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ. 

Trending News