ದೇಶದಲ್ಲೇ ಪ್ರಥಮ ಬಾರಿಗೆ ಸಿದ್ಧವಾಗ್ತಿದೆ ಶ್ವಾನಗಳ ಪಾರ್ಕ್! ಎಲ್ಲಿ ಗೊತ್ತಾ?

ಹೈದರಾಬಾದ್​ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.1 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್​ ನಿರ್ಮಿಸಲಾಗಿದೆ. 

Last Updated : Sep 17, 2018, 11:55 AM IST
ದೇಶದಲ್ಲೇ ಪ್ರಥಮ ಬಾರಿಗೆ ಸಿದ್ಧವಾಗ್ತಿದೆ ಶ್ವಾನಗಳ ಪಾರ್ಕ್! ಎಲ್ಲಿ ಗೊತ್ತಾ? title=

ಹೈದರಾಬಾದ್: ಮನುಷ್ಯರಿಗಾಗಿ ಉದ್ಯಾನವನಗಳಿರುವಂತೆಯೇ ಶ್ವಾನಗಳಿಗೂ ವಿಶೇಷವಾದ ಪಾರ್ಕ್ ಹೈದರಾಬಾದ್'ನಲ್ಲಿ ಸಿದ್ಧವಾಗಿದೆ. ಏನಿದು, ಶ್ವಾನಗಳಿಗೆ ಪಾರ್ಕಾ ಎಂದು ಅಚ್ಚರಿಪಡುತ್ತಿದ್ದೀರಾ? ಆದರೆ ಇದು ಸತ್ಯ!

ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೈದರಾಬಾದ್'ನಲ್ಲಿ ಶ್ವಾನಗಳಿಗಾಗಿ ವಿಶೇಷ ಪಾರ್ಕ್ ಸಿದ್ಧವಾಗುತ್ತಿದ್ದು, ವಾಕಿಂಗ್ ಟ್ರ್ಯಾಕ್ ಜೊತೆಗೆ ಶ್ವಾನಗಳಿಗಾಗಿ ಕ್ಲಿನಿಕ್, ತರಬೇತಿ ಮತ್ತು ವ್ಯಾಯಾಮ ಉಪಕರಣಗಳು, ಸ್ಪ್ಲಾಶ್ ಪೂಲ್, ಬಯಲು ರಂಗಮಂದಿರ ಹಾಗೂ ದೊಡ್ಡ ಮತ್ತು ಸಣ್ಣ ಶ್ವಾನಗಳಿಗಾಗಿ ಪ್ರತ್ಯೇಕ ಆವರಣಗಳು ಕೂಡಾ ಈ ಪಾರ್ಕ್'ನಲ್ಲಿದೆ. ಇದು ಇಂಡಿಯಾದ ಕೆನ್ನೆಲ್​ ಆಫ್​ ಕ್ಲಬ್​ ನಿಂದ ಪ್ರಮಾಣೀಕರಿಸಲ್ಪಟ್ಟಿದೆ.

ಹೈದರಾಬಾದ್​ ಪುರಸಭೆಯಿಂದ ಸುಮಾರು 1.3 ಎಕರೆ ಪ್ರದೇಶದಲ್ಲಿ, 1.2 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್​ ನಿರ್ಮಿಸಲಾಗಿದೆ. ತ್ಯಾಜ್ಯಗಳನ್ನು ಚೆಲ್ಲುವ ಸ್ಥಳವನ್ನು ಶ್ವಾನಗಳ ಪಾರ್ಕ್ ಆಗಿ ಪರಿವರ್ತಿಸಲಾಗಿದ್ದು, ಸದ್ಯದಲ್ಲೇ ಉದ್ಘಾಟನೆಯಾಗಲಿದೆ. ಸಾರ್ವಜನಿಕರು ತಮ್ಮ ಶ್ವಾನಗಳನ್ನು ಈ ಉದ್ಯಾನವನಕ್ಕೆ ಕರೆತರಬಹುದು. ಈ ಪಾರ್ಕ್'ನಲ್ಲಿಯೇ ಬೆಕ್ಕುಗಳಿಗೂ ಅವಕಾಶ ಕಲಿಸುವ ಆಲೋಚನೆಯಲ್ಲಿದ್ದೇವೆ. ಆದರೆ ಈ ಬಗ್ಗೆ ನಂತರದ ದಿನಗಳಲ್ಲಿ  ನಿರ್ಧಾರ ಕೈಗೊಳ್ಳಲಾಗುವುದು ಎಂದು ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್'ನ ಪಶ್ಚಿಮ ವಲಯ ಆಯಕ್ತೆ ಹರಿಚಂದನ ದಸರಾಯ್ ತಿಳಿಸಿದ್ದಾರೆ.

Trending News