ಮಧ್ಯಂತರ ಬಜೆಟ್ 2019: ಈ ವಲಯಗಳಿಗೆ ಬಜೆಟ್ ನಲ್ಲಿ ಸರ್ಕಾರದಿಂದ ಹೆಚ್ಚಿನ ಆದ್ಯತೆ

ಕೇಂದ್ರ ಸರ್ಕಾರದ 2019 ರ ಮಧ್ಯಂತರ ಬಜೆಟ್ ಈಗ ಭಾರಿ ನಿರೀಕ್ಷೆ ಹುಟ್ಟಿಸಿದೆ.ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡನೆಯಾಗುತ್ತಿರುವ ಬಜೆಟ್ ನ್ನು ಚುನಾವಣಾ ಬಜೆಟ್ ಎಂದು ಸಹ ಕರೆಯಲಾಗುತ್ತಿದೆ.ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಸರ್ಕಾರವು ಕೂಡ ಹಲವು ವಲಯಗಳನ್ನು ಹೆಚ್ಚಿಗೆ ಆಕರ್ಷಿಸುವ ಕೆಲಸವನ್ನು ಮಾಡಲಿದೆ ಎನ್ನಲಾಗಿದೆ.

Last Updated : Jan 31, 2019, 04:16 PM IST
ಮಧ್ಯಂತರ ಬಜೆಟ್ 2019: ಈ ವಲಯಗಳಿಗೆ ಬಜೆಟ್ ನಲ್ಲಿ ಸರ್ಕಾರದಿಂದ ಹೆಚ್ಚಿನ ಆದ್ಯತೆ title=

ನವದೆಹಲಿ: ಕೇಂದ್ರ ಸರ್ಕಾರದ 2019 ರ ಮಧ್ಯಂತರ ಬಜೆಟ್ ಈಗ ಭಾರಿ ನಿರೀಕ್ಷೆ ಹುಟ್ಟಿಸಿದೆ.ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡನೆಯಾಗುತ್ತಿರುವ ಬಜೆಟ್ ನ್ನು ಚುನಾವಣಾ ಬಜೆಟ್ ಎಂದು ಸಹ ಕರೆಯಲಾಗುತ್ತಿದೆ.ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಸರ್ಕಾರವು ಕೂಡ ಹಲವು ವಲಯಗಳನ್ನು ಹೆಚ್ಚಿಗೆ ಆಕರ್ಷಿಸುವ ಕೆಲಸವನ್ನು ಮಾಡಲಿದೆ ಎನ್ನಲಾಗಿದೆ.

ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಹಿನ್ನಡೆ ಅನುಭವಿಸಿರುವ ಬಿಜೆಪಿ, ಈಗ ಈ ಬಜೆಟ್ ನಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರನ್ನು ಕೇಂದ್ರಿಕೃತವಾಗಿಟ್ಟುಕೊಂಡು ತೆರಿಗೆ ಕಡಿತ ಹಾಗೂ ಕೃಷಿ ಪರಿಹಾರದಂತಹ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿದೆ ಎನ್ನಲಾಗಿದೆ.

ಈ ಹಿನ್ನಲೆಯಲ್ಲಿ ಮಧ್ಯಂತರ ಬಜೆಟ್ ನಲ್ಲಿ ಹೆಚ್ಚಿನ ಆಧ್ಯತೆ ನೀಡಬಹುದಾದ ಕೆಲವು ಪ್ರಮುಖ ವಲಯಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

-ಕೃಷಿ ಪರಿಹಾರ ಪ್ಯಾಕೇಜ್ ಕನಿಷ್ಠ 1 ಟ್ರಿಲಿಯನ್ ರೂಪಾಯಿ ($ 14.04 ಬಿಲಿಯನ್)
-ಹಣಕಾಸಿನ ವರ್ಷದಲ್ಲಿ ಆಹಾರ ಸಬ್ಸಿಡಿಗಳಿಗೆ 1.8 ಟ್ರಿಲಿಯನ್ ರೂ ಮೀಸಲು
-ಆಹಾರ ಬೆಳೆಗಳಿಗೆ ವಿಮೆ ಪಾಲಿಸಿ
-ಹಣಕಾಸು ವರ್ಷ 2019-20 ರಲ್ಲಿ ರಾಜ್ಯದ ಆಸ್ತಿ ಮಾರಾಟದ ಗುರಿ $ 11 ಬಿಲಿಯನ್ ತಲುಪುವುದು.
-ಚಿನ್ನದ ಮೇಲಿನ ತೆರಿಗೆ ಕಡಿತಗೊಳಿಸುವುದು
-ಆರೋಗ್ಯಕ್ಕಾಗಿ ಶೇ 5 ರಷ್ಟು ಬಜೆಟ್ ಹಂಚಿಕೆಯನ್ನು ಏರಿಕೆ ಮಾಡುವುದು 
-ಕಾರ್ಪೋರೆಟ್ ತೆರಿಗೆ ದರವು ಶೇ 30 ರಿಂದ ಶೇ 25ಕ್ಕೆ ಕಡಿತಗೊಳಿಸಬಹುದು 
-ಮಧ್ಯಮ ವರ್ಗ ಮತ್ತು ನಿರೀಕ್ಷಿತ ಸಣ್ಣ ಉದ್ಯಮಗಳಿಗೆ ಹೆಚ್ಚಿನ ತೆರಿಗೆ ವಿನಾಯಿತಿ
-50 ದಶಲಕ್ಷಕ್ಕಿಂತ ಕಡಿಮೆ ವಾರ್ಷಿಕ ಮಾರಾಟವನ್ನು ಹೊಂದಿರುವ ವ್ಯವಹಾರಗಳಿಗೆ ಸಾಲಗಳ ಮೇಲೆ ಶೇ. 2 ರಷ್ಟು ರಿಯಾಯಿತಿ  
-ಸಾರ್ವಜನಿಕ ವಲಯದ ಸಾಮಾನ್ಯ ವಿಮಾದಾರರಿಗೆ 40 ಬಿಲಿಯನ್ ರೂಪಾಯಿ ಬಂಡವಾಳ ಹೂಡಿಕೆ
-ವಿದ್ಯುತ್ ವಾಹನಗಳು ಮತ್ತು ಬ್ಯಾಟರಿಗಳ ಮೇಲೆ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಕಡಿತಗೊಳಿಸುವುದು
-ಗ್ರಾಮೀಣ ಪ್ರದೇಶಗಳಲ್ಲಿ ಉತ್ತಮ ಡಿಜಿಟಲ್ ಮೂಲಸೌಕರ್ಯ.ನವೊಧ್ಯಮಗಳನ್ನು ಹೆಚ್ಚಿಸಲು ಏಂಜಲ್ ತೆರಿಗೆ ನಿರ್ಮೂಲನೆ

 

Trending News