ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನ್ನು ವ್ಯಂಗವಾಡಿರುವ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಈ ಮಧ್ಯಂತರ ಬಜೆಟ್ ನ ಭರವಸೆಗಳೆಲ್ಲ ಚುನಾವಣೆಗೂ ಮುನ್ನ ಜನರನ್ನು ಮೂರ್ಖರನ್ನಾಗಿ ಮಾಡುವಂತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಣಕಾಸು ಸಚಿವ ಪಿಯುಶ್ ಗೋಯಲ್ ಮಂಡಿಸಿದ ಬಜೆಟ್ ನ್ನು ಲೋಕಸಭಾ ಚುನಾವಣೆಗೂ ಮುನ್ನ ಬಂದಿರುವ ಟ್ರೈಲರ್ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಈ ಬಜೆಟ್ ನಲ್ಲಿ ಎಲ್ಲ ವರ್ಗದ ಜನರನ್ನು ಕೂಡ ಪರಿಗಣಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು.
ಮಧ್ಯಂತರ ಬಜೆಟ್ ಭಾಷಣದ ವೇಳೆ ಕೈಗಾರಿಕೆಯಲ್ಲಿನ ಸ್ಥಿರ ಬೆಳವಣಿಗೆಯಿಂದಾಗಿ ಉದ್ಯೋಗದ ಪ್ರಮಾಣ ಹೆಚ್ಚಳವಾಗಿದೆ.ಇಪಿಎಫ್ಒ ಸದಸ್ಯತ್ವದ ಪ್ರಕಾರ ಎರಡು ಕೋಟಿ ಹೆಚ್ಚಳವಾಗಿದೆ.ಆ ಮೂಲಕ ಅರ್ಥಿಕ ಅಭಿವೃದ್ದಿ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗಿವೆ ಎಂದು ಹಣಕಾಸು ಸಚಿವರು ತಿಳಿಸಿದರು.
ಕೇಂದ್ರ ಸರ್ಕಾರದ 2019 ರ ಮಧ್ಯಂತರ ಬಜೆಟ್ ಈಗ ಭಾರಿ ನಿರೀಕ್ಷೆ ಹುಟ್ಟಿಸಿದೆ.ಮುಂಬರುವ ಸಾರ್ವತ್ರಿಕ ಚುನಾವಣೆಗೂ ಮುನ್ನ ಮಂಡನೆಯಾಗುತ್ತಿರುವ ಬಜೆಟ್ ನ್ನು ಚುನಾವಣಾ ಬಜೆಟ್ ಎಂದು ಸಹ ಕರೆಯಲಾಗುತ್ತಿದೆ.ಮತದಾರರನ್ನು ಓಲೈಸುವ ನಿಟ್ಟಿನಲ್ಲಿ ಸರ್ಕಾರವು ಕೂಡ ಹಲವು ವಲಯಗಳನ್ನು ಹೆಚ್ಚಿಗೆ ಆಕರ್ಷಿಸುವ ಕೆಲಸವನ್ನು ಮಾಡಲಿದೆ ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.