ಐಎನ್ಎಕ್ಸ್ ಮೀಡಿಯಾ ಪ್ರಕರಣ: 5 ದಿನಗಳ ಸಿಬಿಐ ವಶಕ್ಕೆ ಕಾರ್ತಿ ಚಿದಂಬರಂ

 ಐಎನ್‌ಎಕ್ಸ್‌ ಮೀಡಿಯಾದಲ್ಲಿ ನಡೆದ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

Updated: Mar 1, 2018 , 09:10 PM IST
ಐಎನ್ಎಕ್ಸ್ ಮೀಡಿಯಾ ಪ್ರಕರಣ: 5 ದಿನಗಳ ಸಿಬಿಐ ವಶಕ್ಕೆ ಕಾರ್ತಿ ಚಿದಂಬರಂ

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾದಲ್ಲಿ ನಡೆದ ಅಕ್ರಮ ವಹಿವಾಟಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಕಾರ್ತಿ ಚಿದಂಬರಂ ಅವರನ್ನು ಐದು ದಿನಗಳ ಕಾಲ ಸಿಬಿಐ ವಶಕ್ಕೆ ಒಪ್ಪಿಸಲಾಗಿದೆ.

ಇಂದು ದೆಹಲಿ ಪಟಿಯಾಲ ಕೋರ್ಟ್ ಮುಂದೆ ಬಂಧನವಾಗಿದ್ದ ಕಾರ್ತಿ ಚಿದಂಬರಂ ಅವರನ್ನು ಹಾಜರುಪಡಿಸಿದ ಸಿಬಿಐ ಹೆಚ್ಚುವರಿ ವಿಚಾರಣೆಗಾಗಿ 15 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು. ಅಲ್ಲದೆ, ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿಚಾರಣೆಗೆ ಸಹಕರಿಸುತ್ತಿಲ್ಲ. ತಪ್ಪು ಹೇಳಿಕೆಗಳಿಂದ ತನಿಖೆಗೆ ಹಿನ್ನಡೆಯುಂಟಾಗುತ್ತಿದೆ ಎಂದು ಸಿಬಿಐ ಕೋರ್ಟ್ ಗೆ ತಿಳಿಸಿದ್ದು 15 ದಿನಗಳ ಕಾಲ ಕಸ್ಟಡಿಗೆ ನೀಡಬೇಕು ಎಂದು ಮನವಿ ಮಾಡಿತ್ತು. 
ಅದಕ್ಕೆ ವಿಶೇಷ ನ್ಯಾಯಧೀಶರಾದ ಸುನೀಲ್ ರಾಣಾ ಅವರು 15 ದಿನಗಳ ಬದಲಾಗಿ ಮಾ.6 ರವರೆಗೆ ಸಿಬಿಐ ವಶಕ್ಕೆ ನೀಡಿ ಆದೇಶ ನೀಡಿದ್ದಾರೆ.