ಜಮ್ಮು-ಕಾಶ್ಮೀರ ಸಚಿವ ಸಂಪುಟದಿಂದ ಹಣಕಾಸು ಸಚಿವ ಹಸೀಬ್ ಡ್ರಾಬು ಹೊರಕ್ಕೆ

ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವ ಹಸೀಬ್ ಡ್ರಾಬು ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿದೆ. 

Updated: Mar 12, 2018 , 09:06 PM IST
ಜಮ್ಮು-ಕಾಶ್ಮೀರ ಸಚಿವ ಸಂಪುಟದಿಂದ ಹಣಕಾಸು ಸಚಿವ ಹಸೀಬ್ ಡ್ರಾಬು ಹೊರಕ್ಕೆ

ಶ್ರೀನಗರ: ಪೀಪಲ್ಸ್ ಡೆಮಾಕ್ರಾಟಿಕ್ ಪಕ್ಷದ ಹಿರಿಯ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರದ ಹಣಕಾಸು ಸಚಿವ ಹಸೀಬ್ ಡ್ರಾಬು ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಡಲಾಗಿದೆ. 

"ಜಮ್ಮು ಮತ್ತು ಕಾಶ್ಮೀರವನ್ನು ಘರ್ಷಣೆ ರಾಜ್ಯ ಅಥವಾ ಒಂದು ರಾಜಕೀಯ ಸಮಸ್ಯೆಯೆಂದು ಪರಿಗಣಿಸಬಾರದು, ಸಾಮಾಜಿಕ ಸಂಸ್ಯೆಗಳನ್ನೋಳಗೊಂಡ ಒಂದು ಸಮಾಜವಾಗಿ ಪರಿಗಣಿಸಬೇಕು" ಎಂದು ಶುಕ್ರವಾರ ನವದೆಹಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಡ್ರಾಬು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ ಎನ್ನಲಾಗಿದೆ.