close

News WrapGet Handpicked Stories from our editors directly to your mailbox

ಪ್ರಿಯಾಂಕಾ ಚೋಪ್ರಾ ಅವರ ಕಾಶ್ಮೀರ ನಿಲುವು ಭಾರತೀಯ ದೃಷ್ಟಿಕೋನ ಹೊಂದಿದೆ- ಜಾವೇದ್ ಅಖ್ತರ್

 ಕಾಶ್ಮೀರದ ಕುರಿತ ಕೇಂದ್ರದ ಇತ್ತೀಚಿನ ನಿರ್ಧಾರವನ್ನು ಸ್ವಾಗತಿಸಿರುವ ಪ್ರಿಯಾಂಕಾ ಚೋಪ್ರಾ ಅವರ ನಿಲುವು ಭಾರತೀಯ ದೃಷ್ಟಿಕೋನವನ್ನು ಹೊಂದಿವೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.ಯುಎನ್ ಶಾಂತಿಯ ರಾಯಭಾರಿಯಾಗಿ ಚೋಪ್ರಾ ಅವರು ಕಾಶ್ಮೀರ ಕುರಿತ ಭಾರತ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತೆಗೆದುಹಾಕಬೇಕೆಂದು ಪಾಕಿಸ್ತಾನದ ಸಚಿವರು ಬೇಡಿಕೆ ಇಟ್ಟಿದ್ದಾರೆ. 

Updated: Aug 23, 2019 , 04:32 PM IST
ಪ್ರಿಯಾಂಕಾ ಚೋಪ್ರಾ ಅವರ ಕಾಶ್ಮೀರ ನಿಲುವು ಭಾರತೀಯ ದೃಷ್ಟಿಕೋನ ಹೊಂದಿದೆ- ಜಾವೇದ್ ಅಖ್ತರ್

ಮುಂಬೈ:  ಕಾಶ್ಮೀರದ ಕುರಿತ ಕೇಂದ್ರದ ಇತ್ತೀಚಿನ ನಿರ್ಧಾರವನ್ನು ಸ್ವಾಗತಿಸಿರುವ ಪ್ರಿಯಾಂಕಾ ಚೋಪ್ರಾ ಅವರ ನಿಲುವು ಭಾರತೀಯ ದೃಷ್ಟಿಕೋನವನ್ನು ಹೊಂದಿವೆ ಎಂದು ಜಾವೇದ್ ಅಖ್ತರ್ ಹೇಳಿದ್ದಾರೆ.ಯುಎನ್ ಶಾಂತಿಯ ರಾಯಭಾರಿಯಾಗಿ ಚೋಪ್ರಾ ಅವರು ಕಾಶ್ಮೀರ ಕುರಿತ ಭಾರತ ಸರ್ಕಾರದ ನಿರ್ಧಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ತೆಗೆದುಹಾಕಬೇಕೆಂದು ಪಾಕಿಸ್ತಾನದ ಸಚಿವರು ಬೇಡಿಕೆ ಇಟ್ಟಿದ್ದಾರೆ. 

ಈ ಹಿನ್ನಲೆಯಲ್ಲಿ ಈಗ ಪ್ರಿಯಾಂಕಾ ಚೋಪ್ರಾಗೆ ಬೆಂಬಲ ವ್ಯಕ್ತಪಡಿಸಿರುವ ಜಾವೇದ್ ಅಖ್ತರ್  "ನಾನು ಪ್ರಿಯಾಂಕಾ ಚೋಪ್ರಾ ಅವರನ್ನು ವೈಯಕ್ತಿಕವಾಗಿ ಬಲ್ಲೆ. ಅವಳು ಸುಸಂಸ್ಕೃತ, ಸಭ್ಯ ಮತ್ತು ವಿದ್ಯಾವಂತ ವ್ಯಕ್ತಿವಾಗಿದ್ದಾಳೆ ಮತ್ತು ಅವಳು ಭಾರತೀಯನೆಂಬುದು ನಿಜ. ಸರಾಸರಿ ಭಾರತೀಯ ಪ್ರಜೆ (ಪ್ರಿಯಾಂಕಾ ಚೋಪ್ರಾ ಅವರಂತೆ) ಮತ್ತು ಪಾಕಿಸ್ತಾನದ ದೃಷ್ಟಿಕೋನಗಳಲ್ಲಿ ಕೆಲವು ರೀತಿಯ ವಿವಾದಗಳು ಮತ್ತು ವ್ಯತ್ಯಾಸಗಳಿದ್ದರೆ, ಅವರ ದೃಷ್ಟಿಕೋನವು ಭಾರತೀಯ ದೃಷ್ಟಿಕೋನವಾಗಿರುತ್ತದೆ ಎಂದು ಅವರು ಹೇಳಿದ್ದಾರೆ. 

ಯುನಿಸೆಫ್ ಕಾರ್ಯನಿರ್ವಾಹಕ ನಿರ್ದೇಶಕ ಹೆನ್ರಿಯೆಟ್ಟಾ ಹೆಚ್ ಫೋರ್ ಅವರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ ಪಾಕಿಸ್ತಾನದ ಮಾನವ ಹಕ್ಕುಗಳ ಸಚಿವ ಶಿರೀನ್ ಮಜಾರಿ ಅವರು ಕಾಶ್ಮೀರ ಕುರಿತು ಭಾರತ ಸರ್ಕಾರದ ನೀತಿಗಳನ್ನು ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ. ಚೋಪ್ರಾ ಅವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಮಾಣು ಯುದ್ಧದ ಪರವಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಚೋಪ್ರಾ ಭಾರತ ಸರ್ಕಾರದ ಸ್ಥಾನವನ್ನು ಸಾರ್ವಜನಿಕವಾಗಿ ಅನುಮೋದಿಸಿದ್ದಾರೆ ಮತ್ತು ಭಾರತೀಯ ರಕ್ಷಣಾ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಪರಮಾಣು ಬೆದರಿಕೆಯನ್ನು ಸಹ ಬೆಂಬಲಿಸಿದ್ದಾರೆ. ಇದೆಲ್ಲವೂ ಶಾಂತಿ ಮತ್ತು ಸೌಹಾರ್ದತೆಯ ತತ್ವಗಳಿಗೆ ವಿರುದ್ಧವಾಗಿದೆ ಎಂದು ಮಜಾರಿ ಪತ್ರದಲ್ಲಿ ಬರೆದಿದ್ದಾರೆ.