ಆಗಸ್ಟ್ 23ಕ್ಕೆ JEE Advanced ಪರೀಕ್ಷೆ, HRD ಘೋಷಣೆ

ಇದಕ್ಕೂ ಮೊದಲು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಮೇ 17 ರಂದು ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕರೋನಾ ವೈರಸ್‌ನಿಂದಾಗಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.

Last Updated : May 7, 2020, 09:55 PM IST
ಆಗಸ್ಟ್ 23ಕ್ಕೆ JEE Advanced ಪರೀಕ್ಷೆ, HRD ಘೋಷಣೆ  title=

ನವದೆಹಲಿ: ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ದಿನಾಂಕವನ್ನು ಘೋಷಿಸಲಾಗಿದೆ. ಈ ಪರೀಕ್ಷೆ ಆಗಸ್ಟ್ 23 ರಂದು ನಡೆಯಲಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಈ ದಿನಾಂಕವನ್ನು ಪ್ರಕಟಿಸಿದ್ದಾರೆ. ಇದಕ್ಕೂ ಮೊದಲು ಫೇಸ್‌ಬುಕ್‌ನಲ್ಲಿ ಲೈವ್ ಮೂಲಕ ಕೇಂದ್ರ ಸಚಿವರು ಜೆಇಇ ಮುಖ್ಯ ಮತ್ತು ನೀಟ್ ಪರೀಕ್ಷೆಯ ದಿನಾಂಕಗಳ ಬಗ್ಗೆ ಮಾಹಿತಿ ನೀಡಿದ್ದರು.

ಜೆಇಇ ಮುಖ್ಯ ಪರೀಕ್ಷೆಯ ನಂತರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದ್ದರಿಂದ,ಜೆಇಇ ಅಡ್ವಾನ್ಸಡ್ ಪರೀಕ್ಷೆಯ ದಿನಾಂಕವನ್ನು ಎರಡು ದಿನಗಳ ನಂತರ ಘೋಷಿಸಲಾಗಿದೆ. ಜೆಇಇ ಮುಖ್ಯ ಪರೀಕ್ಷೆಯನ್ನು ಜುಲೈ 18ಕ್ಕೆ ನಡೆಸಲಾಗುತ್ತಿದೆ.

ಈ ಮೊದಲ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ಮೇ 17 ಕ್ಕೆ ನಡೆಸಲು ನಿರ್ಧರಿಸಲಾಗಿತ್ತು, ಆದರೆ ಕರೋನಾ ವೈರಸ್‌ನಿಂದಾಗಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ-MAIN (ಜೆಇಇ ಮುಖ್ಯ) ದೇಶಾದ್ಯಂತ ನಡೆಸಲಾಗುತ್ತದೆ. ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ರಾಷ್ಟ್ರೀಯ ಮತ್ತು ಪ್ರವೇಶ ಅರ್ಹತಾ ಪರೀಕ್ಷೆ (ನೀಟ್) ನಡೆಸಲಾಗುತ್ತದೆ.

ಜೆಇಇ ಅಡ್ವಾನ್ಸ್, ಎಂಜಿನಿಯರಿಂಗ್ ಕಾಲೇಜುಗಳಿಗೂ ಸಹ ಪ್ರವೇಶ ನೀಡುತ್ತದೆ, ಆದರೆ ಇದು ಜೆಇಇ ಮೇನ್‌ಗಿಂತ ಒಂದು ಹೆಜ್ಜೆ ಮುಂದಿದೆ. ಈ ಪರೀಕ್ಷೆಯಲ್ಲಿ, ಜೆಇಇ ಮೇನ್‌ನ ಟಾಪ್ ಒಂದೂವರೆ ದಶಲಕ್ಷ ವಿದ್ಯಾರ್ಥಿಗಳು ಕುಳಿತುಕೊಳ್ಳುತ್ತಾರೆ ಹಾಗೂ ಈ ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳು ಐಟಿಗ ಕಾಲೇಜುಗಳಿಗೆ ಪ್ರವೇಶ ಪಡೆಯುತ್ತಾರೆ.

Trending News