ನಿರುದ್ಯೋಗ ಹೆಚ್ಚುತ್ತಿರುವುದು, ಉದ್ಯಮಗಳು ಮುಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ- ಉದ್ಧವ್ ಠಾಕ್ರೆ

ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಪರೋಕ್ಷವಾಗಿ ವ್ಯಂಗವಾಡಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ದೇಶದಲ್ಲಿ ಉದ್ದ್ಯೋಗಗಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿರುವುದು, ಹಾಗೂ ಉದ್ಯಮಗಳು ಮುಚ್ಚುತ್ತಿರುವುದು ಕಣ್ಣಿಗೆ ಕಾಣುತ್ತಿದೆ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

Last Updated : Oct 8, 2019, 03:07 PM IST
ನಿರುದ್ಯೋಗ ಹೆಚ್ಚುತ್ತಿರುವುದು, ಉದ್ಯಮಗಳು ಮುಚ್ಚುತ್ತಿರುವುದು ಕಣ್ಣಿಗೆ ರಾಚುತ್ತಿದೆ- ಉದ್ಧವ್ ಠಾಕ್ರೆ  title=
file photo

ನವದೆಹಲಿ: ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಪರೋಕ್ಷವಾಗಿ ವ್ಯಂಗವಾಡಿರುವ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ದೇಶದಲ್ಲಿ ಉದ್ದ್ಯೋಗಗಳ ಸಂಖ್ಯೆಯಲ್ಲಿ ಕುಸಿತ ಕಾಣುತ್ತಿರುವುದು, ಹಾಗೂ ಉದ್ಯಮಗಳು ಮುಚ್ಚುತ್ತಿರುವುದು ಕಣ್ಣಿಗೆ ಕಾಣುತ್ತಿದೆ ಅದನ್ನು ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ.

ಪಕ್ಷದ ಮುಖವಾಣಿ ಸಾಮ್ನಾಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಉದ್ಧವ್ ಠಾಕ್ರೆ "ಆರ್ಥಿಕ ಕುಸಿತವಿದೆಯೋ ಇಲ್ಲವೋ ನಾವು ನಂತರ ನೋಡೋಣ, ಆದರೆ ಉದ್ಯೋಗಗಳು ಕುಸಿಯುತ್ತಿವೆ. ವ್ಯವಹಾರಗಳು ಸ್ಥಗಿತಗೊಳ್ಳುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಅದನ್ನು ನಾವು ಒಪ್ಪಿಕೊಳ್ಳೋಣ" ಎಂದು ಹೇಳಿದರು.

ಸಂಜಯ್ ರೌತ್ ಅವರ ಜೊತೆಗಿನ ಸಂದರ್ಶನದ ಎರಡನೇ ಮತ್ತು ಅಂತಿಮ ಭಾಗದಲ್ಲಿ ಉದ್ದವ್ ಠಾಕ್ರೆ ಮುಂಬೈನ ಗೋರೆಗಾಂವ್‌ನ ಆರೆ ಮಿಲ್ಕ್ ಕಾಲೋನಿಯಲ್ಲಿರುವ ಕಾರ್ ಡಿಪೋಗೆ ವಿರೋಧ ಸೇರಿದಂತೆ ಕೇಂದ್ರದ ಬೆಳೆ ವಿಮಾ ಯೋಜನೆಯಲ್ಲಿನ ಸಮಸ್ಯೆ,ಮಹಾರಾಷ್ಟ್ರದ ಬರ ಮತ್ತು ಪ್ರವಾಹ ಪೀಡಿತ ಪ್ರದೇಶಗಳ ನಿರ್ವಹಣೆ ಬಗ್ಗೆ ಮಾತನಾಡಿದರು, 

ಮೆಟ್ರೊ ಕಾರ್ ಶೆಡ್‌ಗಾಗಿ ಆರೆಯಲ್ಲಿ ಮರಗಳನ್ನು ಕಡಿದು ಹಾಕಿದ ರಾಜ್ಯ ಆಡಳಿತದ ಮೇಲೆ ವಾಗ್ದಾಳಿ ನಡೆಸಿದ ಮರಗಳನ್ನು ಕೊಲೆ ಮಾಡಿದ ಬಾಬಸ್ ಅದಕ್ಕೆ ಬೆಲೆ ತೆರಬೇಕಾಗುತ್ತದೆ' ಎಂದು ಹೇಳಿದರು. ತಾವು ಕಾರ್ ಶೆಡ್ ಇರುವ ಸ್ಥಳವನ್ನು ವಿರೋಧಿಸುತ್ತಿರುವುದೇ ಹೊರತು ಕಾರ್ ಶೆಡ್ ಅಲ್ಲ ಎಂದರು. ಇನ್ನು ರಾಜಕೀಯ ಉದ್ದೇಶಕ್ಕಾಗಿ ಪ್ರತಿಪಕ್ಷಗಳ ನಾಯಕರ ವಿರುದ್ಧ ಕೇಂದ್ರ ಸರ್ಕಾರವು ತನಿಖಾ ಸಂಸ್ಥೆಗಳನ್ನು ಬಳಸುತ್ತಿರುವುದಕ್ಕೆ ಉದ್ಧವ್ ಠಾಕ್ರೆ ಆಕ್ಷೇಪ ವ್ಯಕ್ತಪಡಿಸಿದರು.

Trending News