ನೋಟು ನಿಷೇಧಿಕರಣ: ರಾಹುಲ್ ಗಾಂಧಿ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಕಮಲ್ ಹಾಸನ್

    

Last Updated : Mar 11, 2018, 03:51 PM IST
ನೋಟು ನಿಷೇಧಿಕರಣ: ರಾಹುಲ್ ಗಾಂಧಿ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿದ ಕಮಲ್ ಹಾಸನ್  title=

ಚೆನ್ನೈ : ಕಮಲ್ ಹಾಸನ್  ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಮೋದಿ ಸರ್ಕಾರದ ಜಿಎಸ್ಟಿ ಮತ್ತು ನೋಟು ನಿಷೇಧಿಕರಣ ನೀತಿಯನ್ನು ಟೀಕಿಸಿದರು.

ರಾಹುಲ್ ಗಾಂಧಿ ಮಲೇಶಿಯಾ ಪ್ರವಾಸದ ವೇಳೆ ಅಲ್ಲಿನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುತ್ತಿರುವ ಸಂದರ್ಭದಲ್ಲಿ ನೋಟು ನಿಷೇಧಿಕರಣದ ಫೈಲ್ ತಾವು ಪ್ರಧಾನ ಮಂತ್ರಿಗಳಾಗಿರುವ ಸಂದರ್ಭದಲ್ಲಿ ಬಂದಿದ್ದರೆ ಅದನ್ನು ಕಸದ ಬುಟ್ಟಿಗೆ ಎಸೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಈಗ ಈ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವ ಕಮಲ್ ಹಾಸನ್ "ನಾನು ಈ ಹೇಳಿಕೆಯನ್ನು ಬೆಂಬಲಿಸುತ್ತೇನೆ" ಎಂದು ಅವರು ತಿಳಿಸಿದರು.

ಇದೆ ಸಂದರ್ಭದಲ್ಲಿ ತಮ್ಮ ಪಕ್ಷಕ್ಕೆ ಕ್ರಿಶ್ಚಿಯನ್ ಮಿಶನರಿಗಳು ದೇಣಿಗೆ ನೀಡುತ್ತಿವೆ ಎನ್ನುವ ಆರೋಪವನ್ನು ಕಮಲ್ ಹಾಸನ್ ಅಲ್ಲಗಳೆದರು. ಇತ್ತೀಚಿಗೆ ಕಮಲ್ ಹಾಸನ್ ಮಕ್ಕಳ್ ನೀಧೀ ಮಯ್ಯಂ ಎನ್ನುವ ಪಕ್ಷವನ್ನು ಸ್ಥಾಪಿಸುವುದರ ಮೂಲಕ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟಿದ್ದರು.

Trending News