Shashi Tharoor : ಹಿಜಾಬ್ ವಿವಾದ ; ಪಾಕ್ ಏಜೆಂಟರ ಟ್ವೀಟ್‌ ಅನ್ನು ರೀಟ್ವೀಟ್ ಮಾಡಿದ ಶಶಿ ತರೂರ್

ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತರೂರ್‌ಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಭಾರತ ವಿರೋಧಿ ಅಂಶಗಳನ್ನು ಪ್ರೋತ್ಸಾಹಿಸಬಾರದು ಎಂದು ರಾಯಭಾರ ಕಚೇರಿ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

Written by - Channabasava A Kashinakunti | Last Updated : Feb 19, 2022, 09:02 AM IST
  • ವಿವಾದಾತ್ಮಕ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ ಶಶಿ ತರೂರ್
  • ಶಶಿ ತರೂರ್ ಗೆ ಛೀಮಾರಿ ಹಾಕಿದೆ ರಾಯಭಾರ ಕಚೇರಿ
  • ನಿಲ್ಲುತ್ತಿಲ್ಲ ಕರ್ನಾಟಕ ಹಿಜಾಬ್ ವಿವಾದ
Shashi Tharoor : ಹಿಜಾಬ್ ವಿವಾದ ; ಪಾಕ್ ಏಜೆಂಟರ ಟ್ವೀಟ್‌ ಅನ್ನು ರೀಟ್ವೀಟ್ ಮಾಡಿದ ಶಶಿ ತರೂರ್ title=

ನವದೆಹಲಿ : ನಮ್ಮ ರಾಜೂದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಕೋಲಾಹಲ ಸೃಷ್ಟಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ್ ಏಜೆಂಟ್ ಭಾರತ ವಿರೋಧಿ ಟ್ವೀಟ್ ಅನ್ನು ತರೂರ್ ಮರು ಟ್ವೀಟ್ ಮಾಡಿದ್ದಾರೆ. ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತರೂರ್‌ಗೆ ಪ್ರತಿಕ್ರಿಯಿಸಿದ್ದು, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಂತಹ ಭಾರತ ವಿರೋಧಿ ಅಂಶಗಳನ್ನು ಪ್ರೋತ್ಸಾಹಿಸಬಾರದು ಎಂದು ರಾಯಭಾರ ಕಚೇರಿ ತನ್ನ ಟ್ವೀಟ್ ನಲ್ಲಿ ತಿಳಿಸಿದೆ.

ಬಿಜೆಪಿ ಬಗ್ಗೆ ಹೀಗೆ ಹೇಳಿದ್ದು 

ಕಾಂಗ್ರೆಸ್ ಸಂಸದ ಶಶಿ ತರೂರ್(Shashi Tharoor) ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದು, ಕುವೈತ್‌ನ ಪ್ರಬಲ ಸಂಸದರ ಗುಂಪು ಕುವೈತ್ ಸರ್ಕಾರಕ್ಕೆ ಭಾರತದ ಆಡಳಿತ ಪಕ್ಷ ಬಿಜೆಪಿಯ ಯಾವುದೇ ಸದಸ್ಯರ ಪ್ರವೇಶವನ್ನು ತಕ್ಷಣವೇ ನಿಷೇಧಿಸುವಂತೆ ಒತ್ತಾಯಿಸಿದೆ ಎಂದು ಹೇಳಿದ್ದಾರೆ. ಟ್ವೀಟ್‌ನಲ್ಲಿ, 'ಮುಸ್ಲಿಂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ ಮತ್ತು ಸುಮ್ಮನೆ ಕೂರಲು ಸಾಧ್ಯವಿಲ್ಲ. ಸಧ್ಯ ಒಂದಾಗುವ ಸಮಯ ಬಂದಿದೆ ಎಂದು ಸಂಸದರು ಹೇಳಿದ್ದಾರೆ. 

ಇದನ್ನೂ ಓದಿ : ಬಿಜೆಪಿ, ಎಸ್‌ಪಿಗೆ ತಲಾಖ್, ತಲಾಖ್, ತಲಾಖ್ ಹೇಳುವ ಸಮಯ: ಅಸಾದುದ್ದೀನ್ ಓವೈಸಿ

ಉತ್ತರ ಪ್ರದೇಶದಲ್ಲಿ ಮೂರನೇ ಹಂತದ

ಟ್ವೀಟ್ ನಲ್ಲಿ ಹೀಗೆ ಬರೆದುಕೊಂಡ ತರೂರ್

ವಿವಾದಾತ್ಮಕ ಟ್ವೀಟ್ ಅನ್ನು ಮರುಟ್ವೀಟ್ ಮಾಡಿರುವ ತರೂರ್(Shashi Tharoor), 'ದೇಶೀಯ ಘಟನೆಗಳ ಮೇಲೆ ಅಂತರಾಷ್ಟ್ರೀಯ ಪರಿಣಾಮಗಳನ್ನು ಹೊಂದಿವೆ. ಭಾರತದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿರುವ ಬಗ್ಗೆ ಮತ್ತು ಅದನ್ನು ಖಂಡಿಸಲು ಪ್ರಧಾನಿ ಹಿಂಜರಿಯುತ್ತಿರುವ ಬಗ್ಗೆ ನಾನು ಗಲ್ಫ್‌ನಲ್ಲಿರುವ ನನ್ನ ಸ್ನೇಹಿತರಿಂದ ಕೇಳಿದ್ದೇನೆ. 'ನಾವು ಭಾರತವನ್ನು ಪ್ರೀತಿಸುತ್ತೇವೆ ಆದರೆ ನಿಮ್ಮ ಸ್ನೇಹಿತರಾಗಲು ನಮಗೆ ಕಷ್ಟಪಡಬೇಡಿ'. ಕುವೈತ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಶಶಿ ತರೂರ್‌ಗೆ ತಕ್ಕ ಉತ್ತರವನ್ನು ನೀಡಿದ್ದು, ರಿಟ್ವೀಟ್‌ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಛೀಮಾರಿ ಹಾಕಿದೆ ರಾಯಭಾರ ಕಚೇರಿ 

ಭಾರತೀಯ ಸಂಸತ್ತಿನ ಗೌರವಾನ್ವಿತ ಸದಸ್ಯರೊಬ್ಬರು ತಮ್ಮ ಭಾರತ ವಿರೋಧಿ ಚಟುವಟಿಕೆಗಳಿಗಾಗಿ ಶಾಂತಿ ರಾಯಭಾರಿ ಪ್ರಶಸ್ತಿಯನ್ನು ಪಡೆದ ಪಾಕಿಸ್ತಾನಿ ಏಜೆಂಟ್‌ನಿಂದ ಭಾರತ ವಿರೋಧಿ ಟ್ವೀಟ್(Tweet) ಅನ್ನು ಮರುಟ್ವೀಟ್ ಮಾಡುತ್ತಿರುವುದನ್ನು ನೋಡಿ ಬೇಸರವಾಗಿದೆ ಎಂದು ರಾಯಭಾರ ಕಚೇರಿ ಬರೆದುಕೊಂಡಿದೆ. ಇಂತಹ ಭಾರತ ವಿರೋಧಿ ಅಂಶಗಳನ್ನು ನಾವು ಪ್ರೋತ್ಸಾಹಿಸಬಾರದು. ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಕೂಡ ಭಾರತೀಯ ರಾಯಭಾರಿ ಕಚೇರಿಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : AAP ಹಾಗೂ ನಿಷೇಧಿತ Sikhs For Justice ನಡುವಿನ ಆಪಾದಿತ ಸಂಬಂಧಗಳ ತನಿಖೆ ನಡೆಸಲಾಗುವುದು: ಅಮಿತ್ ಶಾ

ಹೆಚ್ಚುತ್ತಿರುವ ವಿವಾದವನ್ನು ನೋಡಿ, ಸ್ಪಷ್ಟೀಕರಣ ನೀಡಿದ ತರೂರ್

ಇದೇ ವೇಳೆ ಹೆಚ್ಚುತ್ತಿರುವ ವಿವಾದವನ್ನು ಕಂಡು ಕಾಂಗ್ರೆಸ್ ಸಂಸದರು(Congress MP) ಸ್ಪಷ್ಟನೆ ನೀಡಿದ್ದಾರೆ. 'ನಾನು ಈ ವ್ಯಕ್ತಿಯನ್ನು ಬೆಂಬಲಿಸುವುದಿಲ್ಲ, ನಾನು ಅವನ ಬಗ್ಗೆ ಎಂದಿಗೂ ಕೇಳಿಲ್ಲ. ಆದರೆ ಅವರು ವ್ಯಕ್ತಪಡಿಸಿದ ಭಾವನೆಯ ಬಗ್ಗೆ ನನಗೆ ಕಾಳಜಿ ಇದೆ, ಇದನ್ನು ಭಾರತದ ಅನೇಕ ಸ್ನೇಹಿತರು ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಕರ್ನಾಟಕದಲ್ಲಿ ನಡೆಯುತ್ತಿರುವ ಡ್ರೆಸ್ ಕೋಡ್ ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ದೇಶಗಳ ಟೀಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಆಂತರಿಕ ವಿಷಯಗಳಲ್ಲಿ ಹೊರಗಿನವರ ಕಾಮೆಂಟ್‌ಗಳನ್ನು ಒಪ್ಪಿಕೊಳ್ಳಲಾಗುವುದಿಲ್ಲ. ಹಿಜಾಬ್ ವಿವಾದ(Hijab Controversy)ಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಸುದ್ದಿಗೋಷ್ಠಿಯಲ್ಲಿ ಅರಿಂದಮ್ ಬಾಗ್ಚಿ ಅವರು, 'ಇದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿಷಯವಲ್ಲ. ನಮಗೆ ಯಾವುದೇ ನೇರ ಪ್ರತಿಕ್ರಿಯೆ ಇಲ್ಲ. ಇದು ಭಾರತದ ಆಂತರಿಕ ವಿಷಯವಾಗಿದ್ದು, ಈ ಬಗ್ಗೆ ಯಾವುದೇ ಹೊರಗಿನವರು ಅಥವಾ ಯಾವುದೇ ದೇಶದಿಂದ ಯಾವುದೇ ಪ್ರತಿಕ್ರಿಯೆ ಸ್ವಾಗತಾರ್ಹವಲ್ಲ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News