ಐಎನ್ಎಕ್ಸ್ ಮೀಡಿಯಾ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ನೀಡಿದ ಸಮನ್ಸ್ ರದ್ದುಗೊಳಿಸುವಂತೆ ಕಾರ್ತಿ ಚಿದಂಬರಂ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. 

Updated: Mar 5, 2018 , 01:05 PM IST
ಐಎನ್ಎಕ್ಸ್ ಮೀಡಿಯಾ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಕಾರ್ತಿ ಚಿದಂಬರಂ

ನವದೆಹಲಿ: ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ, ಐಎನ್ಎಕ್ಸ್ ಮೀಡಿಯಾ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ನೀಡಿದ ಸಮನ್ಸ್ ರದ್ದುಗೊಳಿಸುವಂತೆ ಸೋಮವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. 

ಈ ಪ್ರಕರಣ ಸಂಬಂಧ ಹೆಚ್ಚಿನ ವಿಚಾರಣೆಗಾಗಿ ಮುಂಬೈನ ಬೈಕುಲಾ ಸೆಂಟ್ರಲ್ ಜೈಲ್ಗೆ ಬೆಳಿಗ್ಗೆ 8 ಗಂಟೆಗೆ ಏರ್ ಇಂಡಿಯಾ ವಿಮಾನದಲ್ಲಿ ಸಿಬಿಐ ಪೊಲೀಸರು ಕರೆದೊಯ್ದಿದ್ದರು. ಜೈಲಿನಲ್ಲಿ 
ಕಾರ್ತಿ ಅವರನ್ನು ಐಎನ್ಎಕ್ಸ್ ಮೀಡಿಯಾ ಲಿಮಿಟೆಡ್ನ ಮಾಜಿ ನಿರ್ದೇಶಕರಾದ ಇಂದ್ರಾಣಿ ಮತ್ತು ಪೀಟರ್ ಮುಖರ್ಜಿ ಅವರನ್ನು ಎದುರಿಸಬೇಕಾಯಿತು.

ಕಾರ್ತಿ ಅವರು ತಮ್ಮನ್ನು ದೆಹಲಿ ಹೋಟೆಲ್ ನಲ್ಲಿ ಭೇಟಿಯಾಗಿ ಎಫ್ಐಪಿಬಿ ಕ್ಲಿಯರೆನ್ಸ್'ಗೆ 1 ಮಿಲಿಯನ್ ಯುಎಸ್ ಡಾಲರ್ ಲಂಚ ನೀಡಬೇಕೆಂದು ಒತ್ತಾಯಿಸಿದ್ದರು ಎಂದು ಇಂದ್ರಾಣಿ ಮುಖರ್ಜಿಯವರು ಇತ್ತೀಚಿಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದರು. 

ಆದರೆ, ಮುಂಬೈ ಇಂದ ದೆಹಲಿಗೆ ಹಿಂದಿರುಗಿದ ಕಾರ್ತಿ ಚಿದಂಬರಂ ತಮ್ಮ ವಿರುದ್ಧದ ಎಲ್ಲಾ ಹೇಳಿಕೆಗಳು ಮತ್ತು ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದಿದ್ದಾರೆ. 

ಕಾರ್ತಿ ಚಿದಂಬರಂ ಐಎನ್ಎಕ್ಸ್ ಮೀಡಿಯಾದಿಂದ ಎಫ್ಐಪಿ ಬಿ ಕ್ಲಿಯರೆನ್ಸ್ ಗಾಗಿ 3.5 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಇಂದ್ರಾಣಿ ಮುಖರ್ಜಿ ಆರೋಪಿಸಿದ್ದ ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಒಟ್ಟಿಗೆ ವಿಚಾರಣೆಗೊಳಪಡಿಸಲಾಗಿತ್ತು.